ಹಾಸನ: ರಾಹುಲ್ ಗಾಂಧಿಗೆ ಸ್ವಲ್ಪ ವಿವೇಕ ಇರಬೇಕು. ಇನ್ನು ಅನುಭವ ಬೇಕಾಗಿದೆ. ಪ್ರಸ್ತುತ ಬಜೆಟ್ ಬಗ್ಗೆ ನಾನು ಪ್ರತಿಕ್ರಿಯಿಸೊಲ್ಲಾ. ನಾನು ಇನ್ನೂ ಸರಿಯಾಗಿ ಬಜೆಟ್ ಪತ್ರ ಓದಿಲ್ಲಾ ಎಂದಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೆಗೌಡ ಹೇಳಿದ್ದು, ಹಲವರನ್ನು ಶಾಕ್ ಆಗಿಸಿದೆ. 
 
ದೆಹಲಿಯಲ್ಲಿ ಸಿಎಎ ವಿರುದ್ದ ಪ್ರತಿಭಟನೆ ವೇಳೆ ಗುಂಡು ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ದೆಹಲಿಯಲ್ಲಿ ಗುಂಡು ಹಾರಿಸಿರುವುದ್ರಿಂದ ಸಮಸ್ಯೆ ಬಗೆಹರಿಯಲ್ಲಾ. ಎಲ್ಲರೂ ಪರಸ್ಪರ ಮಾತುಕತೆ ನಡೆಸಬೇಕು. ಮೈನಾರಿಟಿಯಲ್ಲಿ ಮುಸ್ಲಿಂರನ್ನ ಬಿಟ್ಟು, ಒಂದು ಗುಂಪು ಹೋರಾಟ ಮಾಡಿತ್ತು. ಮತ್ತೊಂದು ಗುಂಪು ಹೋರಾಟ ಮಾಡ್ತಿದೆ, ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಭೂ ಇತ್ಯರ್ಥ ಮಾಡಿದ್ದೆ, ನಾನು ಭೇಟಿ ನೀಡಿದಾಗ ಎಲ್ಲರೂ ವಿಶ್ವಾಸದಿಂದ ನೋಡಿಕೊಂಡರು ಎಂದು ತಮ್ಮ ಆಡಳಿತದ ಅವಧಿಯ ದಿನಗಳನ್ನು ಮೆಲುಕು ಹಾಕಿದರು. 
 
ಕೇರಳದಲ್ಲಿ ಸಿಎಎ ವಿರುದ್ದದ ಹೋರಾಟಕ್ಕೆ ನಾವು ಜೆಡಿಎಸ್ ಬೆಂಬಲ ನೀಡಿದ್ದೇವೆ. ನಮ್ಮದು ಒಬ್ಬರೇ ಸಂಸದರಿದ್ದಾರೆ. ನಾನು ಮುಸ್ಲಿಂರಿಗಾಗಿ ಅವರ ಒಳಿತಿಗಾಗಿ ಕಾನೂನು ಜಾರಿಗೆ ತಂದೆ. ಆದ್ರೆ ಭಾರತದಲ್ಲಿ ಯಾರೂ ಕಾಯ್ದೆ ಜಾರಿಗೆ ತರಲಿಲ್ಲಾ ಎಂದು ದೇವೇಗೌಡರು ಬೇಸರ ಹೊರಹಾಕಿದರು. ಚಿಕ್ಕವಯಸ್ಸಿನ ಒಬ್ಬ ಲೀಡರ್ ರಾಹುಲ್ ಗಾಂಧಿ ನಮ್ಮನ್ನ ಜೆಡಿಎಸ್ ಬಿ ಟೀಮ್ ಎಂದರು, ಆಗ ನಮಗೆ ಬಾರೀ ಹೊಡೆತ ಉಂಟಾಯ್ತು. ಆದ್ರೆ ನೀವು ಕರುಣಾನಿಧಿ ಬೆಂಬಲ ತೆಗೆದುಕೊಂಡಿರಿ. ರಾಹುಲ್ ಗಾಂಧಿಗೆ ಸ್ವಲ್ಪ ವಿವೇಕ ಇರಬೇಕು ಎಂದು ರಾಹುಲ್ ಗಾಂಧಿ ವಿರುದ್ಧ ದೇವೇಗೌಡರು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಉಳಿಸೋಕ್ಕೆ ನಾವು ಮೈತ್ರಿ ಮಾಡಿಕೊಂಡೆವು. ಸಿದ್ದರಾಮಯ್ಯ ನಮ್ಮ ಪಕ್ಷ ತೆಗೆಯೋಕ್ಕೆ ಅಂತಾ ಹೇಳಿ 8 ಜನರನ್ನು ಕರೆದುಕೊಂಡು ಹೋದ್ರು. ನಾನು ಅದರ ಬಗ್ಗೆ ಮಾತಾಡೊಲ್ಲಾ, ನನಗೆ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀನಿ ಅಂತಾ ಮೋದಿ ಹೇಳಿದರು, ಆಗ ನಾವು ಕಾಂಗ್ರೆಸ್ ಮುಕ್ತ ಆಗಬಾರದು ಅಂತಾ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡೆವು. ನಾನು ಚುನಾವಣೆಗೆ ಸ್ಪರ್ಧಿಸೊಲ್ಲಾ ಅಂತಾ ಹೇಳಿದೆ ಆದ್ರೂ ಚುನಾವಣೆಗೆ ನಿಲ್ಲಿಸಿದ್ರು ಆದ್ರೆ ಏನಾಯ್ತು? ಎಂದು ಪ್ರಶ್ನಿಸಿದ್ದಾರೆ.

మరింత సమాచారం తెలుసుకోండి: