ಧಾರವಾಡ : ರಾಜ್ಯಸಭೆಯ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ಅಷ್ಟೇ ಅಲ್ಲದೇ ಪಾಪು ಎಂದೇ ಖ್ಯಾತಿ ಆಗಿದ್ದ ನಾಡೋಜ ಪಾಟೀಲ್ ಪುಟ್ಟಪ್ಪ ಅವರು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಹೌದು ಪಾಟೀಲ್ ಪುಟ್ಟಪ್ಪ ಎಂದರೆ ಉತ್ತರ ಕರ್ನಾಟಕದ ಅದರಲ್ಲೂ ಹುಬ್ಬಳ್ಳಿ-ಧಾರವಾಡದ ಮಂದಿಗೆ ಅದೇನೋ ಪ್ರೀತಿ ಮತ್ತು ಹೆಮ್ಮೆ ಅಂತಹ ಧೀಮಂತನನ್ನು ನಾಡು ಇದೀಗ ಕಳೆದುಕೊಂಡಿದೆ. ಪಾಟೀಲ್ ಪುಟ್ಟಪ್ಪ ಅವರು ಪತ್ರಕರ್ತರಾಗಿದ್ದರಲ್ಲದೇ ಕರ್ನಾಟಕದ ಏಕೀಕರಣದ ರೂವಾರಿಯೂ ಆಗಿದ್ದರು. 

 

ಪಾಟೀಲ್ ಪುಟ್ಟಪ್ಪ ಅವರು ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರು ಸ್ವತಂತ್ರ ಹೋರಾಟಗಾರರಾಗಿ, ಪತ್ರಕರ್ತರಾಗಿ, ಅಷ್ಟೇ ಅಲ್ಲದೇ ಸಾಹಿತ್ಯ ರಚನೆ ಮತ್ತು ಕನ್ನಡದಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ಇದ್ದರು. ಪಾಟೀಲ್ ಪುಟ್ಟಪ್ಪ ಅವರು ಕರ್ನಾಟಕದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದ ಅವರು ಅನೇಕ ಕೃತಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿಯು ಅವರನ್ನು ಹುಡುಕಿಕೊಂಡು ಬಂದಿತ್ತು.

 

ಪಾಟೀಲ್ ಪುಟ್ಟಪ್ಪ ಅವರು ನಿರ್ವಹಣೆ ಮಾಡಿದ ಜವಾಬ್ದಾರಿಗಳು ಒಂದಲ್ಲ ಎರಡಲ್ಲ, ಅನೇಕ ಕೆಲಸಗಳನ್ನು ಪಾಟೀಲ್ ಪುಟ್ಟಪ್ಪ ಮಾಡಿದ್ದಾರೆ. ಇವರು ರಾಜ್ಯಸಭಾ ಸದಸ್ಯರಾಗಿದ್ದರು. ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು ಪಾಟೀಲ್ ಪುಟ್ಟಪ್ಪ ಅವರಿಗೆ ರಾಷ್ಟ್ರೀಯ ಬಸವ ಪುರಸ್ಕಾರವನ್ನು ನೀಡಲಾಗುವುದು ಅಷ್ಟೇ ಅಲ್ಲದೇ ಅವರ ಆರೋಗ್ಯದ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಿಎಂ ಯಡುಯೂರಪ್ಪ ಅವರು ಭಾನುವಾರವಷ್ಟೇ ಹೇಳಿದ್ದರು. 

 


ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, "ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ" ಎಂದು ಸಿಎಂ ಅವರು ಹೇಳಿದ್ದಾರೆ. 

 

మరింత సమాచారం తెలుసుకోండి: