ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮಾರ್ಚ್೩೧ರವರೆಗೆ ಲಾಕ್ಡೌನ್ ಮಾಡುವಂತೆ ಆದೇಶವನ್ನು ಹೊರಡಿಸಿ ರಾಜ್ಯದ ಜನತೆಗೆ ಮನೆಯಲ್ಲೇ ಇರುವಂತೆ ಆದೇಶವನ್ನು ನೀಡಲಾಗಿದು, ಅನಾವಶ್ಯಕವಾಗಿ ಮನೆಯಿಂದ ಹೊರ ಬಂದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂಬ ಆದೇಶವನ್ನು ಹೊರಡಿಸಲಾಗಿದೆ, ಇದರನ್ವಯ ರಾಜ್ಯ ಪೊಲೀಸರು ರಾಜ್ಯದಲ್ಲಿ ಅನವಶ್ಯಕವಾಗಿ ಜನತೆ ಗುಂಪುಗೂಡುವುದು ಸಂಚರಿಸುವುದು ಕಂಡು ಬಂದರೆ ಪೊಲೀಸರು ಏಕಾ ಏಕಿ ಲಾಟಿ ಚಾರ್ಜ್ ಮಾಡುತ್ತಿದ್ದಾರೆ ಇದಕ್ಕೆ ಸಂಬಂದ ಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನ್ ಹೇಳಿದ್ದಾರೆ ಗೊತ್ತಾ? 

 

 

ರಾಜ್ಯದಲ್ಲಿ ವಿಧಿಸಿರುವ ಲಾಕ್ಡೌನ್ ನಿಂದ ಜನರು ಮನೆಯಿಂದ ಹೊರಬರದಂತೆ ಹಾಗೂ ಅಂಗಡಿ ಮುಂಗಟ್ಟುಗಳು ತೆರೆಯದಂತೆ ಬಂದ್ ಮಾಡಲಾಗಿದೆ  ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ ಇಷ್ಟೆಲ್ಲರ ನಡುವೆಯೂ ಕೂಡ ಜನರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ ಇದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಇವರ ಮೇಲೆ ಲಾಟಿ ಚಾರ್ಜ್ ಮಾಡುತ್ತಿದ್ದಾರೆ. 

 

 

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನರ ಮೇಲೆ ಲಾಠಿ ಚಾರ್ಜ್ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು, ನಿಷೇಧಾಜ್ಞೆ(೧೪೪ ಸೆಕ್ಷನ್) ಹಾಕಿ ಬೀದಿಗೆ ಬಂದವರನ್ನೆಲ್ಲ ಪೊಲೀಸರು ಹೊಡೆಯುವುದು ಸರಿಯಲ್ಲ. ಹಬ್ಬವಿದೆ. ಅಗತ್ಯವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಕೊಡದಿದ್ದರೇ ಹೇಗೆ ಎಂದು ಪ್ರಶ್ನಿಸಿದರು.

 

 

ಮಾ.೨೭, ೨೮ರವರೆಗೆ ಅಧಿವೇಶನ ನಡೆಸಬೇಕೆಂದು ಸರ್ಕಾರ ವಾದಿಸಿತ್ತು. ನಮ್ಮ ಪಕ್ಷದ ವತಿಯಿಂದ ಸದನ ಮುಂದೂಡಿಕೆಗೆ ಸಲಹೆ ಮಾಡಿದ್ದವು. ಸಾಮಾಜಿಕ ಕಳಕಳಿ ಬಹಳ ಮುಖ್ಯ. ಬಜೆಟ್ ಮೇಲಿನ ಚರ್ಚೆಯಾಗದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದೆವು. ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಕೊಡುತ್ತೇವೆ. ಬೇರೆ ವಿಧೇಯಕ ಪ್ರಸ್ತಾಪಿಸುವುದು ಬೇಡ ಎಂದು ಹೇಳಿದ್ದೆವು.

 

 

ಆದರೂ ಪಂಚಾಯತ್ರಾಜ್ ವ್ಯವಸ್ಥೆಯನ್ನು ದುರ್ಬಲ ಮಾಡುವ ವಿಧೇಯಕಗಳನ್ನು ತಂದರು. ಅಂತಹ ವಿಧೇಯಕಗಳ ಬಗ್ಗೆ ಚರ್ಚೆಯಾಗಲಿ ಎಂಬುದು ನಮ್ಮ ವಾದ. ಸದನ ಮುಂದೂಡಿ ಎಂದರೂ ಸರ್ಕಾರ ಕೇಳಲಿಲ್ಲ. ಅಗತ್ಯವಿದ್ದರೆ ಸುಗ್ರೀವಾಜ್ಞೆ ಹೊರಡಿಸಿ ಎಂದು ಹೇಳಿದ್ದೆವು. ಇಷ್ಟೆಲ್ಲ ಆದಮೇಲೂ ನಿನ್ನೆ ಕಲಾಪದಲ್ಲಿ ಕಾನೂನು ಸಚಿವರು ವಿಧೇಯಕಗಳನ್ನು ಮಂಡಿಸಿದರು.

 

 

ಆಗ ಆಕ್ಷೇಪಿಸಿದೆವು. ಸಭಾಧ್ಯಕ್ಷರು ಹಣಕಾಸು ವಿಧೇಯಕಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಅದು ಆಗಲಿಲ್ಲ. ಈ ಎಲ್ಲ ಕಾರಣದಿಂದ ನಾವು ಕಲಾಪವನ್ನು ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕ್ವಾರಂಟೈನ್ ಕೇಂದ್ರಗಳನ್ನು, ಹಾಗೂ ಪರೀಕ್ಷಾಕೇಂದ್ರಗಳನ್ನು ತೆರೆದೇ ಇಲ್ಲ.

 

 

ವೈದ್ಯಕೀಯ ಹಾಗೂ ಆರೋಗ್ಯ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರಂಟೈನ್ ಮಾಡುವ ಕೆಲಸವನ್ನು ಪೊಲೀಸ್ ಇಲಾಖೆಗೆ ನೀಡಿದರೆ ಹೇಗೆ? ಆ ಇಲಾಖೆ ಮಾಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಮಾಸ್ಕ್, ಸ್ಯಾನಿಟೈಸರ್ ಕೊರತೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಸರ್ಕಾರದವರು ಉತ್ತರಕುಮಾರರಾಗಿದ್ದಾರೆಯೇ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

మరింత సమాచారం తెలుసుకోండి: