ಒಂದೇ ಒಂದು ದಿನದಲ್ಲೇ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?  ನಿಜವಾಗ್ಲು ಭಯ ಹುಟ್ಟಿಸುತ್ತದೆ ಈ ವಿಷ್ಯ..!!

 

ಕೊರೋನಾ ದಿನದಿಂದ ದಿನಕ್ಕೆ ತನ್ನ ಪರಿಧಿಯನ್ನು ವಿಸ್ತರಿಸುತ್ತಲೇ ಇದೆ ಇದಕ್ಕೇ ಸೂಕ್ತವಾದ ಕ್ರಮಗಳನ್ನು ಸರ್ಕಾರದಿಂದ ಕೈಗೊಂಡರೂ ಯಾವುದೇ ಪ್ರಯೋಜನವಾಗದೇ ಕೊರೋನಾ ಸೋಂಕಿತರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಹಾಗಾದರೆ ಇಂದು ಕರ್ನಾಟಕದಲ್ಲಿ ಅದೆಷ್ಟು ಮಂದಿಗೆ ಸೋಂಕು ದೃಡ ಪಟ್ಟಿದೆ ಗೊತ್ತ? 

 

 

ರಾಜ್ಯ ಸರ್ಕಾರದಿಂದ ಕೊರೊನಾ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡರೂ ಕೂಡ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೇ. ನೆನ್ನೆಯ ತನಕ ಕರ್ನಾಟಕದಲ್ಲಿ ೪೧ರಷ್ಟು ಇದ್ದ ಸೋಂಕಿತರ ಸಂಖ್ಯೆ ಇಂದು ಒಂದೇ ಒಂದು ದಿನ ೧೦ಜನರಲ್ಲಿ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ   

 

 

ಮಾರಕ ಕೊರೊನಾ ಸೋಂಕು ದಿನೇ ದಿನೇ ಆತಂಕ ಹೆಚ್ಚಿಸಿದ್ದು, ಜನತೆ ತಲ್ಲಣಗೊಂಡಿದ್ದಾರೆ. ಈ ನಡುವೆ, ಇಂದು ಒಂದೇ ದಿನ ರಾಜ್ಯದಲ್ಲಿ ೧೦ ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ೫೧ಕ್ಕೆ ಏರಿಕೆಯಾಗಿದೆ.

 

 

ಕಳೆದ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಒಂದೇ ದಿನ ೭ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು, ಇನ್ನು ನಿನ್ನೆ ೮ ಮಂದಿಯಲ್ಲಿ ಸೋಂಕು ಪಾಸಿಟಿವ್ ಬಂದಿತ್ತು. ಇಂದು ಒಂದೇ ದಿನ ೧೦ ಮಂದಿಯಲ್ಲಿ ಕೋವಿಡ್-೧೯ ಸೋಂಕು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಕ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ವಿವರಿಸಿದರು. ರಾತ್ರಿಯ ವೇಳೆಗೆ ಸೋಂಕು ಪೀಡಿತರ ಸಂಖ್ಯೆ ಎಷ್ಟು ಆಗಲಿದೆಯೇ ಗೊತ್ತಿಲ್ಲ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

 

 

ಇನ್ನು ವಾರ್ ರೂಂಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಆರೋಗ್ಯ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದು, ಕೋವಿಡ್ ಸೋಂಕಿತ ರೋಗಿಗಳಿಗೆ ಇನ್ನು ಯಾವಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು. ಇನ್ನು ಲಾಕ್ ಡೌನ್ ಅನಿರೀಕ್ಷಿತವಾಗಿ ಎಲ್ಲರೂ ಇದಕ್ಕೆ ಬೆಂಬಲಿಸಬೇಕಿದೆ ಎಂದರು

మరింత సమాచారం తెలుసుకోండి: