ಪ್ರಧಾನಿ ನರೇಂದ್ರ ಮೋದಿ ಇಡೀ ಭಾರತಕ್ಕೆ ನೀಡಿರುವ 21 ದಿನಗಳ ಲಾಕ್ ಡೌನ್ ಆದೇಶ ಮುಂದುವರೆಯುತ್ತದಾ ಅಥವಾ ಮುಗಿಯುತ್ತದಾ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

 

ಇಡೀ ವಿಶ್ವದಾಧ್ಯಂತ ವ್ಯಾಪಕವಾಗಿ ಆವರಿಸಿರುವ ಕೊರೋನಾ ವೈರಸ್  ಭಾರತ ದೇಶಕ್ಕೆ ಕಾಲಿಟ್ಟ ದಿನಗಳಲ್ಲಿ ಹೆಚ್ಚಿನ ಜನರಿಗೆ ಹರಡದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಡೀ ಭಾರತ ದೇಶವನ್ನೇ ಲಾಕ್ ಡೌನ್ ಮಾಡುವಂತೆ ಆದೇಶವನ್ನು ಹೊರಡಿಸಿದ್ದರು.

 

ದೇಶದಲ್ಲಿ ಈ ಲಾಕ್ ಡೌನ್ ಆದೇಶವನ್ನು ಮೀರಿ ಯಾರಾದರೂ ಕೂಡ ಮನೆಯಿಂದ ಹೊರಬಂದಿದ್ದೇ ಆದರೆ ಅವರ ಮೇಲೆ ಪ್ರಕರಣವನ್ನು ದಾಖಲಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿತ್ತು. ಹಾಗೂ ಎಲ್ಲಾ ರಾಜ್ಯಗಳ ಗಡಿ ಭಾಗಗಳನ್ನು ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿತ್ತು.

 

ಇದರ ಜೊತೆಗೆ  ಈ ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಎಲ್ಲಾ ಮಾರುಕಟ್ಟೆಗಳು ಹಾಗೂ ಎಲ್ಲಾ ವ್ಯಾಪಾರ ಕೇಂದ್ರಗಳು ಹಾಗೂ ಎಲ್ಲಾ ಸಾರಿಗೆಗಳು ಸ್ಥಗಿತಗೊಂಡಿರುವುದರಿಂದ ದೇಶದ ಮೇಲೆ ಆರ್ಥಿಕವಾಗಿ ಬಹಳವಾದ ಹೊಡೆತ ಬಿದ್ದಿದೆ.

 

ಇದರ ಜೊತೆಗೆ ಕೂಲಿ ಕಾರ್ಮಿಕರು, ಬಡವರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಇದರ ಬೆನ್ನಲ್ಲೇ ಕೆಲವು ದಿನಗಳಿಂದ ಇನ್ನು 3 ತಿಂಗಳುಗಳ ಕಾಲ ಲಾಕ್‌ಡೌನ್ ಮುಂದುವರಿಯಲಿದೆ ಎಂಬ ಪೋಸ್ಟರ‍್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿರುವುದರಿಂದ ದೇಶದ ಎಲ್ಲಾ ಜನರೂ ಕೂಡ ಒಂದು ಕ್ಷಣಕ್ಕೆ ಆಶ್ಚರ್ಯ ಪಟ್ಟಿದ್ದರು ಆದರೆ ಇವೆಲ್ಲದ್ದಕ್ಕೂ ಕೂಡ ತೆರೆಯನ್ನು ಎಳೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬರವರ ಕಡೆಯಿಂದ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ.

 

ಲಾಕ್ ಡೌನ್ ಅನ್ನು ಮುಂದುವರಿಸುವುದರ ಬಗ್ಗೆ ಯಾವುದೇ ವಿಚಾರಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿಲ್ಲ. 21 ದಿನಗಳ ಲಾಕ್ ಡೌನ್‌ನ್ನು ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ ಏಪ್ರಿಲ್ 14ರವರೆಗಿನ ನಂತರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಂತರದ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ರಾಜೀವ್‌ಗೌಬ ಹೇಳಿದರು.

 

ಇಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಿರುವ 21 ದಿನಗಳ ಲಾಕ್ ಡೌನ್‌ನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸುತ್ತದೆ ಎಂದು ಕೇಳಿಬರುತ್ತಿರುವ ಸುದ್ದಿಗಳು ಕೇವಲ ವದಂತಿಯಷ್ಟೆ. ಅದು ನಿಜವಲ್ಲ, ಸರ್ಕಾರದ ಮುಂದೆ ಅಂತಹ ಯಾವುದೇ ಚಿಂತನೆಗಳಿಲ್ಲ ಎಂದಿದ್ದಾರೆ.

 

 

 

మరింత సమాచారం తెలుసుకోండి: