ಕೊರೋನಾ ಸೋಂಕು ಇಡೀ ದೇಶವನ್ನು ವ್ಯಾಪಿಸಿ ಜನರನ್ನು ಬಲಿತೆಗೆದುಕೊಂಡು ಸಾಕಷ್ಟು ಜನರನ್ನು ಸೋಂಕಿನಿಂದ ನರಳುವಂತೆ ಮಾಡಿದೆ. ಈ ಕೊರೋನಾ ವೈರಸ್ ಮಲೇರಿಯಾ ಔಷಧಿಯಿಂದ ನಿವಾರಣೆಯಾಗುತ್ತದೆ ಎಂಬ ವಿಷಯ ತಿಳಿದ ತಕ್ಷಣ ಅಮೇರಿಕಾ ಮಲೇರಿಯಾ ಔಷಧಿಯನ್ನು ನಮಗೆ ಕಳಿಸಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತೀಕಾರದ ಮಾತನ್ನಾಡಿದ್ದಾರೆ. ಆದರೆ ಇದಕ್ಕೆ ಸಂಬಂದ ಪಟ್ಟಂತೆ  ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿಯವರಿಗೆ ಮನವಿಯೊಂದನ್ನು ಮಾಡಿದ್ದಾರೆ. ಅಷ್ಟಕ್ಕೂ  ರಾಹುಲ್ ಗಾಂಧಿಯ ಮನವಿಯಾದರೂ ಏನು?

 

ಜೀವ ರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮಾತ್ರ ದೊರೆಯಬೇಕು. ಆ ನಂತರ ಅವಶ್ಯವಿರುವ ಇತರೆ ರಾಷ್ಟ್ರಗಳಿಗೆ ಸರ್ಕಾರ ನೆರವು ನೀಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

 

ಮಲೇರಿಯಾ ನಿರೋಧಕ ಹೈಡ್ರೋಕ್ಸಿಕ್ಲೋರೋಕ್ವೀನ್ ಔಷಧವು ಕೋವಿಡ್ ೧೯ ಸೋಂಕಿಗೆ ಪರಿಹಾರ ಒದಗಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಷೆಗಷ್ಟೇ ಉಲ್ಲೇಖಿಸಿದ್ದರು. ಇದರ ನಡುವೆಯೇ ಭಾರತ ಹೈಡ್ರೋಕ್ಸಿಕ್ಲೋರೋಕ್ವೀನ್ ರಫ್ತು ಮಾಡುವುದನ್ನು ನಿಷೇಧಿಸಿತು. ಇದರಿಂದ ನಿರಾಶೆ ಗೊಂಡ ಟ್ರಂಪ್, ಹೈಡ್ರೋಕ್ಸಿಕ್ಲೋರೋಕ್ವೀನ್ ರಫ್ತು ಮಾಡದಿದ್ದರೆ, ಭಾರತದ ವಿರುದ್ಧ ಪ್ರತಿಕಾರದ ಮಾತುಗಳನ್ನು ಆಡಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಸ್ನೇಹವು ಪ್ರತೀಕಾರದ ಬಗ್ಗೆ ಅಲ್ಲ. ಸಂಕಷ್ಟದ ಸಮಯದಲ್ಲಿ ಭಾರತ ಇತರೆ ರಾಷ್ಟ್ರಗಳಿಗೆ ಸಹಾಯ ಮಾಡಲಿ. ಆದರೆ, ಜೀವರಕ್ಷಕ ಔಷಧಗಳು ಮೊದಲು ಖಂಡಿತವಾಗಿ ಭಾರತೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕಬೇಕು ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

 

ವಿಶ್ವದ ಬಹುತೇಕ ಜೆನರಿಕ್ ಔಷಧಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನ ಪ್ರಮಾಣವನ್ನು ಭಾರತವೇ ಪೂರೈಸುತ್ತದೆ. ಹೈಡ್ರೋಕ್ಸಿಕ್ಲೋರೋಕ್ವೀನ್ ಸೇರಿದಂತೆ ಸುಮಾರು ೨೬ ಔಷಧೀಯ ಪದಾರ್ಥಗಳ ರಫ್ತನ್ನು ಭಾರತ ಕಳೆದ ತಿಂಗಳು ನಿಷೇಧಿಸಿತು. ದೇಶಿ ಉಪಯೋಗಕ್ಕೆ ಬೇಕಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.

 

ಆದರೆ, ಇದರಿಂದ ನಿರಾಶೆಗೊಂಡಿರುವ ಟ್ರಂಪ್ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪಿಎಂ ಮೋದಿ ಜತೆ ಭಾನುವಾರ ಬೆಳಗ್ಗೆ ಮಾತನಾಡಿದೆ. ಅದೇ ರೀತಿ ನಮ್ಮ ಬೇಡಿಕೆಯ ಪೂರೈಕೆಯನ್ನು (ಹೈಡ್ರೋಕ್ಸಿಕ್ಲೋರೋಕ್ವಿನ್)ಯನ್ನು ನೀವು ಒದಗಿಸಿದರೆ ನಾವು ಅದನ್ನು ಮೆಚ್ಚುತ್ತೇವೆ. ಒಂದೊಮ್ಮೆ ಅವರು ಅದನ್ನು ಕಳುಹಿಸಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ, ಸಹಜವಾಗಿಯೇ ಪ್ರತೀಕಾರವೂ ಇರಬಹುದು. ಯಾಕೆ ಇರಬಾರದು ಎಂದು ಪ್ರಧಾನಿ ಮೋದಿಯವರಿಗೆ ಸವಾಲನ್ನು ಎಸೆದಿದ್ದಾರೆ ಟ್ರಂಪ್. 

 

మరింత సమాచారం తెలుసుకోండి: