ನವದೆಹಲಿ: ಕೊರೋನಾ ವೈರಸ್‌ಗೆ ಮಲೇರಿಯಾ ಔಷಧಿಯಾದ ಹೈಡ್ರೋಕ್ಸಿಕ್ಲೋರೋಕ್ವಿನ್ ಎಂದು ತಿಳಿದ ತಕ್ಷಣ ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಅಮೇರಿಕಾಕ್ಕೆ ರಪ್ತು ಮಾಡಬೇಕು ಇಲ್ಲದಿದ್ದರೆ ಪ್ರತೀಕಾರದ ಬಗೆಗೆ ಡೋನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಅದೇ ಡೊನಾಲ್ಡ್ ಟ್ರಂಪ್ ತನ್ನ ವರಸೆಯನ್ನು ಇಂದು ಬದಲಾಯಿಸಿಕೊಂಡು  ಮೋದಿ ಈಸ್ ಗ್ರೇಟ್ ಎಂದು ಹೇಳುತ್ತಿದ್ದಾರೆ ಅಷ್ಟಕ್ಕೂ ಡೊನಾಲ್ಡ್ ಟ್ರಂಪ್ ಈ ರೀತಿ ಹೇಳಲು ಕಾರಣ ಏನು ಗೊತ್ತಾ?

 

ಕೊರೋನಾ ವೈರಸ್ ಇಡೀ ವಿಶ್ವವನ್ನು ವ್ಯಾಪಿಸಿ ಸಾವಿನ ಭಯವನ್ನು ಜನರಲ್ಲಿ ಮೂಡಿಸಿ ತನ್ನ ಎಲ್ಲೆಯನ್ನು ಪ್ರತಿನಿತ್ಯ ವಿಸ್ತರಿಸುತ್ತಿರುವಂತಹ ಸಂದರ್ಭದಲ್ಲಿ  ವಿಶ್ವದ ಅನೇಕ ರಾಷ್ಟ್ರಗಳು ಈ ಕೊರೋನಾ ವಿರುದ್ಧ ಹೋರಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಮಡಿದೆ  ಅದೇ ರೀತಿ ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಲು ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ ಅದೇ ರೀತಿ ಸಾಕಷ್ಟು ಸಂಶೋಧಕರು ಈ ಕೊರೋನಾ ಸೋಂಕಿಗೆ ಔಷಧಿಯ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

 

ಈ ಸಂದರ್ಭಲ್ಲಿ ಕೆಲವು ಸಂಶೋಧನೆಯಿಂದ ಮಲೇರಿಯಾ ಔಷಧಿಗೆ ಬಳಸಲಾಗಿದ್ದ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಗಳಿಂದ ಕೊರೋನಾ ಗುಣ ಮುಖವಾಗುತ್ತದೆ ಎಂದು ತಿಳಿದ ತಕ್ಷಣ ಸಾಕಷ್ಟು ದೇಶಗಳು ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಭಾರತ

ಮಾರಣಾಂತಿಕ ಕೋವಿಡ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಿ ಅಮೆರಿಕ ಸೇರಿದಂತೆ ಕೋವಿಡ್ ಸಂಕಷ್ಟದಲ್ಲಿರುವ ದೇಶಗಳಿಗೆ ಪೂರೈಕೆ ಮಾಡಲು ಭಾರತ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗ್ರೇಟ್ ಎಂದು ಹೊಗಳಿರುವುದಾಗಿ ವರದಿ ತಿಳಿಸಿದೆ.

 

ಕೋವಿಡ್ ವೈರಸ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ತುಂಬಾ ಪರಿಣಾಮಕಾರಿ ಔಷಧಿ ಎಂದು ನಂಬಿರುವ ಹಿನ್ನೆಲೆಯಲ್ಲಿ ಭಾರತ ಕೂಡಲೇ ಹೈಟ್ರೋಕ್ಸಿಕ್ಲೋಕ್ವಿನ್ ಮಾತ್ರೆಯನ್ನು ರಫ್ತು ಮಾಡಬೇಕು ಇಲ್ಲದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದರು.

 

ಇದೀಗ ಗುಜರಾತ್ ನ ಮೂರು ಕಾರ್ಖಾನೆಗಳಿಂದ ಒಟ್ಟು 29 ಮಿಲಿಯನ್ ಡೋಸ್ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ತುಂಬಿದ ಹಡಗು ಅಮೆರಿಕದತ್ತ ತೆರಳುತ್ತಿದೆ ಎಂಬ ಮಾಹಿತಿ ಪಡೆದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ತನ್ನ ವರಸೆಯನ್ನು ಬದಲಿಸಿ ಮೋದಿ ಗ್ರೇಟ್ ಎಂದು ಹೊಗಳಿದ್ದಾರೆ ಎಂದು ವರದಿ ವಿವರಿಸಿದೆ.

 

ಅಮೆರಿಕದಲ್ಲಿ ನಾಲ್ಕು ಲಕ್ಷ ಮಂದಿಗೆ ಕೋವಿಡ್ 19 ವೈರಸ್ ಹರಡಿದ್ದು, ಬರೋಬ್ಬರಿ 13 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. “ನಾನು ಲಕ್ಷಾಂತರ ಡೋಸ್ ಅಂದರೆ 29 ಮಿಲಿಯನ್ ಗಿಂತಲೂ ಅಧಿಕ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಖರೀದಿಸಿದ್ದೇನೆ. ನಾನು ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ್ದೆ. ಇದೀಗ ಭಾರತ ಬೇಕಾದಷ್ಟು ಡೋಸ್ ಅನ್ನು ಕಳುಹಿಸಿದೆ. ನಿಜಕ್ಕೂ ಮೋದಿ ಗ್ರೇಟ್, ನಿಜಕ್ಕೂ ಒಳ್ಳೆಯ ನಿರ್ಧಾರ ಎಂದು ಶ್ಲಾಘಿಸಿರುವುದಾಗಿ” ಫೋಕ್ಸ್ ಚಾನೆಲ್ ವರದಿ ಮಾಡಿದೆ.

 

 

 

మరింత సమాచారం తెలుసుకోండి: