ಇಡೀ ವಿಶ್ವಕ್ಕೆ ಕೊರೋನಾ ಸೋಂಕನ್ನು ಹಂಚಿರುವಂತರಹ ಚಿನಾ ಕೆಲವು ದಿನಗಳ ಹಿಂದೆ ಕೊರೋನಾ ವೈರಸ್ ನಮ್ಮ ಲ್ಲಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿತ್ತು ಅದರಂತೆ ಎರಡು ತಿಂಗಳ ನಂತರ ಕೊರೋನಾದ ತವರು ನಗರವಾದ ವುಹಾನ್ ಮೇಲೆ ಹೇರಿದ್ದ ಲಾಕ್‌ಡೌನ್ ಅನ್ನು ಹಿಂತೆಗೆಯಲಾಗಿತ್ತು. ಆದರೆ ವುಹಾನ್ ನಗರವನ್ನು ಬಿಡುಗಡೆಗೊಳಿಸುತ್ತಲೇ ಮತ್ತಷ್ಟು ಸೋಂಕಿನ ಪ್ರಕರನಗಳು ದಾಖಲಾಗಿದೆ ಈಗ ಮತ್ತಷ್ಟು ಆತಂಕ ಚೀನಾದಲ್ಲಿ ಎದುರಾಗಿದೆ. ಆಗಾದರೇ ಚೀನಾದಲ್ಲಿ ಕಾಣಿಸಿಕೊಂಡ ಪ್ರಕರಣಗಳು ಎಷ್ಟು ಗೊತ್ತಾ?

 

ಚೀನಾದಲ್ಲಿ ಕರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ವೇಗವನ್ನು ಪಡೆದುಕೊಂಡಿವೆ. ದೀರ್ಘಕಾಲದ ವಿನಾಶದ ನಂತರ, ಚೀನಾದಲ್ಲಿ ಕರೋನಾದ ಹೊಸ ಪ್ರಕರಣಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಆದರೆ, ಇದೀಗ ಅವು ಮತ್ತೆ ಮರಳುತ್ತಿವೆ. ಬುಧವಾರ, ಸುಮಾರು 63 ಹೊಸ ಕರೋನಾ ವೈರಸ್ ಪ್ರಕರಣಗಳು ಕಂಡುಬಂದಿದ್ದು, ಎರಡನೇ ಹಂತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಇದೀಗ 1000 ದಾಟಿದೆ.

 

 

ಚೀನಾದ ಆರೋಗ್ಯ ಇಲಾಖೆಯ ಪ್ರಕಾರ, ಬುಧವಾರ ವರದಿಯಾದ ಒಟ್ಟು 63 ಹೊಸ ಪ್ರಕರಣಗಳ ಪೈಕಿ 61 ಜನರು ಹೊರಗಿನಿಂದ ಬಂದವರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ವೈರಸ್ ಅಲೆ ಮತ್ತೆ ಏಳುವ ಅಪಾಯ ಎದುರಾಗಿದೆ. ಸುರ್ಮಾರು ಎರಡು ತಿಂಗಳ ಸುದೀರ್ಘ ಅವಧಿಯ ಬಳಿಕ ವುಹಾನ್ನಿಂದ ಲಾಕ್ ಡೌನ್ ತೆರವುಗೊಲಿಸಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಜನ ಇದ್ದಕ್ಕಿದ್ದಂತೆ ರಸ್ತೆಗೆ ಇಳಿದಿರುವ ಸಮಯದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುವುದು ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗಿದೆ.

 

ಹೊಸದಾಗಿ ವರದಿಯಾಗಿರುವ 63  ಪ್ರಕರಣಗಳಲ್ಲದೆ, ಚೀನಾದಲ್ಲಿ ಎರಡು ಸಾವುಗಳು ಕೂಡ ಸಂಭವಿಸಿವೆ, ಇದರೊಂದಿಗೆ ಕರೋನಾ ವೈರಸ್ ನಿಂದ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 3335 ಕ್ಕೆ ತಲುಪಿದೆ. ಇನ್ನೊಂದೆಡೆ ಈ ಮಾರಕ ಕಾಯಿಲೆಯ ಸೋಂಕಿಗೆ ಗುರಿಯಾದವರ ಸಂಖ್ಯೆ 81 ಸಾವಿರ ದಾಟಿದೆ. ಎರಡನೇ ಹಂತದಲ್ಲಿ, ಚೀನಾದಲ್ಲಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಇದೀಗ 1108 ಕ್ಕೆ ಏರಿಕೆಯಾದಂತಾಗಿದೆ .

 

ಮೂರು ತಿಂಗಳ ಸತತ ಪ್ರಯತ್ನದ ನಂತರ, ಕರೋನಾ ವೈರಸ್ ಅನ್ನು ಸೋಲಿಸುವಲ್ಲಿ ಚೀನಾ ಯಶಸ್ವಿಯಾಗಿತ್ತು . ವುಹಾನ್ನಿಂದ ಸುಮಾರು 73 ದಿನಗಳ ಸುದೀರ್ಘ ಅವಧಿಯ ಬಳಿಕ ನಿನ್ನೆಯೇ ಲಾಕ್ಡೌನ್ ಅನ್ನು ತೆಗೆದುಹಾಕಲಾಗಿದೆ. ಆದರೆ, ಇದೀಗ ಇದ್ದಕ್ಕಿದ್ದಂತೆ ಕಳೆದ ಒಂದು ವಾರದಲ್ಲಿ ಕೆಲವು ಹೊಸ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಲಾಕ್ಡೌನ್ ತೆರವುಗೊಳಿಸಿದ ಬಳಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿರುವುದೇ ಇದಕ್ಕೆ ಕಾರಣ ಎಂದು ಚೀನಾದ ಆರೋಗ್ಯ ಇಲಾಖೆ ಹೇಳಿಕೊಂಡಿದೆ.

 

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ , ನಂತರ ಅದು ನಿಧಾನವಾಗಿ ತನ್ನ ಪ್ರಭಾವವನ್ನು ಇಡೀ ಪ್ರಪಂಚದ ಮೇಲೆ ಹರಡಲು ಪ್ರಾರಂಭಿಸಿದೆ. ಪ್ರಸ್ತುತ, ವಿಶ್ವದ 1  ಮಿಲಿಯನ್ಗಿಂತಲೂ ಹೆಚ್ಚು ಜನರು ಕರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದರೆ , ಸುಮಾರು 70 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೇರಿಕಾದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಕೊರೊನಾ ವೈರಸ್ ಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಇಡೀ ಅಮೇರಿಕ ಕೊರೊನಾ ವೈರಸ್ ನ ಕಪಿಮುಷ್ಟಿಗೆ ಸಿಲುಕಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು.

 

 

 

మరింత సమాచారం తెలుసుకోండి: