ಕೊರೋನಾ ವೈರಸ್ ಇಂದಾಗಿ ಇಡೀ ಭಾರತ ದೇಶವನ್ನೇ ಲಾಕ್ ಡೌನ್ ಮಾಡಿರುವಂತಹ ಸಂದರ್ಭದಲ್ಲಿ ಎಲ್ಲಾ ಸೌಲಭ್ಯಗಳನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಈ ನಡುವೆ ನಡೆಯ ಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಕೈಬಿಡಲಾಗಿದೆ ಹಾಗೂ ಇನ್ನು ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದರನ್ವಯ ಎಸ್‌ಎಸ್‌ಸಿ ಪರೀಕ್ಷೆಯೂ ಕೂಡ ದಿನದಿಂದ ದಿನಕ್ಕೆ ಮುಂದೂಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದುವಂತಹ ಆಸಕ್ತಿ ಕಡಿಮೆಯಾದಂತೆನಿಸಿದೆ.  ಅಂದು ಕೊಂಡತೆ ನಡೆದಿದ್ದರೆ ಏಪ್ರಿಲ್ ೯ರಂದೇ ಮುಗಿಯಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನದಿಂದ ದಿನಕ್ಕೆ ಮುಂದುಕೋಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಢಾಳಾಗಿ ಕಾಣಿಸುತ್ತಿದೆ. ಈ ಕುರಿತು ರಾಜ್ಯದ ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಧೈರ್ಯ  ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

 

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೇರಳವಾಗಿ ವ್ಯಾಪಿಸಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ಈ ಸೋಂಕಿನಿಂದ ತಪ್ಪಿಸಿಕೋಳ್ಳಲು ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡುವಂತೆ ಆದೇಶವನ್ನು  ಹೊರಡಿಸಲಾಗಿತ್ತು. ಇದರ ಅನ್ವಯದಂತೆ ಲಾಕ್ಡೌನ್ ಮೇ.೩ ರ ವರೆಗೆ ವಿಸ್ತರಣೆಯಾಗಿರುವುದಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅನಗತ್ಯ ಆತಂಕ ಬೇಡ ಎಂದು ಸಚಿವ ಸುರೇಶ್ ಕುಮಾರ್ ಅಭಯ ನೀಡಿದ್ದಾರೆ.

 

ಲಾಕ್ ಡೌನ್ ಅವಧಿ ಮುಗಿದ ಬಳಿಕ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ಹಿತ ಕಾಯುವ ತೀರ್ಮಾನವನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇನೆ. ಪೋಷಕರು, ವಿದ್ಯಾರ್ಥಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಧೈರ್ಯ ತುಂಬಿದರು.

 

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿ, ಪೋಷಕರಲ್ಲಿ ಸಚಿವ ಸುರೇಶ್ ಕುಮಾರ್ ವಿಶೇಷ ಮನವಿ

 

ಪ್ರಧಾನಿ ನರೇಂದ್ರ ಮೋದಿಯವರು ಕರೋನಾ ಲಾಕ್ ಡೌನ್ ಅವಧಿಯನ್ನು ಮೇ.೦೩ರ ವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಅವಧಿಯನ್ನು ಸದ್ಯಕ್ಕೆ ಪ್ರಕಟಿಸಲಾಗುವುದಿಲ್ಲ. ಜನ ಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿದರು.

 

ಅಲ್ಲದೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆಯೆಂದು ಸುದ್ದಿ ಹರಿದಾಡುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂತಹ ಯಾವುದೇ ಕ್ರಮವನ್ನು ಆರಂಭಿಸಿಲ್ಲ. ಪೋಷಕರು, ವಿದ್ಯಾರ್ಥಿಗಳು ಇಂತಹ ಮಾಹಿತಿಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು.

 

ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪಾಠ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ವಿನೂತನ ಕಾರ್ಯ..!

 

ಲಾಕ್ಡೌನ್ ಜಾರಿ ಆಗಿದ್ದಾಗಿನಿಂದ ಸುರೇಶ್ ಕುಮಾರ್ ಅವರೇ ಖುದ್ದು ಫೇಸ್ಬುಕ್ ಲೈವ್ ಬಂದು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯ ಸಂಬಂಧಿಸಿದಂತೆ ಮಾಹಿತಿ ಕೊಡುತ್ತಲೇ ಇದ್ದಾರೆ.

 

 

 

మరింత సమాచారం తెలుసుకోండి: