ಕೊರೋನಾ ವೈರಸ್ ಇಂದಾಗಿ ಸಾಕಷ್ಟು ದೇಶಗಳು ನರಳುತ್ತಿರುವಾಗ. ಈ ವೈರಸ್‌ನನ್ನು ತಡೆಗಟ್ಟುವ ದೃಷ್ಟಿಯಿಂದ ವಿಶ್ವದ ಅನೇಕ ದೇಶಗಳು ವೈರಸ್‌ಗೆ ಔಷಧಿಯನ್ನು ಕಂಡುಹಿಡಿಯಲು ತಾಮುಂದು ತಾಮುಂದು ಎಂದು ಪೈಪೋಟಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಕೊರೋನಾ ವೈರಸ್ ಅನ್ನು ತಡೆಯಲು ಮಲೇರಿಯಾ ಔಷಧಿಗಾಗಿ ಬಳಸುತ್ತಿದ್ದ ಹೈಡ್ರೋಕ್ಲೊರೋಕ್ವಿನ್ ಔಷಧಿಯು ಸೂಕ್ತವೆಂದು ಕೆಲವು ಸಂಶೋಧನಾ ವರದಿಗಳು ತಿಳಿಸಿದ ಬೆನ್ನಲ್ಲೇ ಪ್ರಪಂಚದ ನಾನಾ ದೇಶಗಳಿಂದ ಬೇಡಿಕೆಯನ್ನು ಇಡಲಾಗಿತ್ತು. ಇದಕ್ಕೆ ಮಣೆ ಹಾಕಿದ ಭಾರತ ಎಲ್ಲಾ ದೇಶಕ್ಕೂ ಔಷಧಿಯನ್ನು ರಪ್ತು ಮಾಡಿದೆ ಇದರಿಂದ ವಿಶ್ವದಲ್ಲಿ ಭಾರತದ ಸ್ಥಾನ ಮಾನ ಬದಲಾಗಿದೆ. ಅಷ್ಟಕ್ಕೂ ವಿಶ್ವದ ಎದುರಿನಲ್ಲಿ ಭಾರತದ ಸ್ಥಾನ ಯಾವುದು ಗೊತ್ತಾ..?

 

ಆರ್ಥಿಕವಾಗಿ ಪ್ರಬಲವಾಗಿರುವ ಅಮೆರಿಕವನ್ನು ಇಡೀ ಜಗತ್ತೇ ದೊಡ್ಡಣ್ಣ ಎಂದು ಕರೆಯುವುದು ರೂಢಿ. ಆದರೆ ಕರೊನಾ ವೈರಸ್ನ ಹಾವಳಿಯ ಈ ಕಷ್ಟ ಕಾಲದಲ್ಲಿ ಭಾರತವೇ ಇಡೀ ಜಗತ್ತನ್ನು ದೊಡ್ಡಣ್ಣನಂತೆ ಸಲಹುತ್ತಿದೆ.

 

ಕರೊನಾ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ ನೆರವಿನ ಹಸ್ತ ಚಾಚಿದೆ. ಕರೊನಾ ಚಿಕಿತ್ಸೆಗೆ ಬಳಸುವ ಔಷಧಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ರ್ತು ಮಾಡುತ್ತಿದೆ.

 

ಭಾರತ ಕಳೆದ ಎರಡು ವಾರಗಳಿಂದ 108 ರಾಷ್ಟ್ರಗಳಿಗೆ ಸುಮಾರು 8.5 ಕೋಟಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳು ಹಾಗೂ ಸುಮಾರು 50 ಕೋಟಿಯಷ್ಟು ಪ್ಯಾರಾಸೆಟೆಮಾಲ್ ಮಾತ್ರೆಗಳನ್ನು ರವಾನಿಸಿದೆ.

 

ಇದರ ಹೊರತಾಗಿ ಪ್ಯಾರಾಸೆಟೆಮಾಲ್ ಮಾತ್ರೆಗಳ ತಯಾರಿಕೆಗೆ ಬಳಸುವ ಸುಮಾರು 1 ಸಾವಿರ ಟನ್ನಷ್ಟು ಕಚ್ಚಾ ವಸ್ತುಗಳನ್ನೂ ರ್ತು ಮಾಡಿದೆ. ಭಾರತೀಯ ವಾಯುಪಡೆ ಹಾಗೂ ಸರ್ಕಾರಿ ಸ್ವಾಮ್ಯದ ವಾಯುಯಾನ ಸಂಸ್ಥೆ ವಿಮಾನಗಳ ಮೂಲಕ ಔಷಧ ಸರಕುಗಳನ್ನು ರ್ತು ಮಾಡಲಾಗಿದೆ.

 

ವೈರಸ್ನ ತೀವ್ರ ಪರಿಣಾಮ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮೊದಲು ಔಷಧಗಳನ್ನು ತಲುಪಿಸಲಾಗುತ್ತಿದ್ದು, ಇದಕ್ಕೂ ಮುಂಚೆ ನಮಗೆ ಬೇಕಾದಷ್ಟು ಔಷಧ ದಾಸ್ತಾನು ಇರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ.

 

ಕೆಲ ಮಿತ್ರ ರಾಷ್ಟ್ರಗಳಿಗೆ ಉಡುಗೊರೆ ರೂಪದಲ್ಲಿ ಔಷಧ ಕಳುಹಿಸಲಾಗಿದ್ದು, ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್, ಸ್ಪೇನ್ ಮತ್ತು ನೆದರ್ಲೆಂಡ್ ಸೇರಿದಂತೆ ಸುಮಾರು ೨೪ ರಾಷ್ಟ್ರಗಳಿಗೆ ವಾಣಿಜ್ಯ ಒಪ್ಪಂದಗಳ ಅಡಿಯಲ್ಲಿ ಔಷಧ ರ್ತು ಮಾಡಲಾಗುತ್ತಿದೆ.

ಭಾರತಕ್ಕೆ ಐಎಂಎಫ್ ಶ್ಲಾಘನೆ:

 

ಭಾರತ ವಿಧಿಸಿರುವ ಲಾಕ್ಡೌನ್ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಶಂಸೆ ವ್ಯಕ್ತಪಡಿಸಿದೆ. ಆರ್ಥಿಕ ಹಿಂಜರಿತದಂತಹ ಪರಿಸ್ಥಿತಿಯಲ್ಲಿ ಭಾರತ ಕರೊನಾ ಹಾವಳಿಗೆ ತುತ್ತಾಯಿತು. ಆದಾಗ್ಯೂ ಭಾರತ ಸರ್ಕಾರ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೆ ತಂದಿದೆ. ಈ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಐಎಂಎಫ್ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಚಾಂಗ್ ಯೋಂಗ್ ರೀ ಹೇಳಿದ್ದಾರೆ.

 

 

 

మరింత సమాచారం తెలుసుకోండి: