ಕೋವಿಡ್19 ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ 20ಲಕ್ಷ ಕೋಟಿ ಲಕ್ಷಕೋಟಿ ರೂಗಳ ಪ್ಯಾಕೇಜ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಣವನ್ನು ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಹಣವನ್ನು ನೀಡಲಾಗುವುದು ಎಂಬುದರ ಬಗ್ಗೆ ಎಂಬುದರ ಬಗ್ಗೆ ತಿಳಿಸದ್ದಾರೆ ಅದೇ ರೀತಿ ಕೈಗಾರಿಕಾ ವಲಯಕ್ಕೆ 3ಲಕ್ಷ ಕೋಟಿ ನೆರವನ್ನು  ನೀಡಿರುವುದಕ್ಕೆ ಸಿಎಂ ಯಡಿಯೂರಪ್ಪ ಸ್ವಾಗತಿಸಿದ್ದಾರೆ

 

ಪ್ರಧಾನಿಯವರು ಆರ್ಥಿಕ ಪುನಶ್ಚೇತನಕ್ಕಾಗಿ 20 ಲಕ್ಷ ಕೋಟಿಗಳ ಪ್ಯಾಕೇಜ್ ಘೋಷಿಸಿದ್ದರು. ಇದಕ್ಕೆ ಅನುಗುಣವಾಗಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೂರು ಲಕ್ಷ ಕೋಟಿ ಹಣಕಾಸು ನೆರವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚಿದ್ದು ಶ್ಲಾಘನೀಯ. ಮೂರು ಲಕ್ಷ ಕೋಟಿ ಹಣಕಾಸು ಸಹಾಯ ಕೇವಲ ಆರ್ಥಿಕ ಸಹಾಯವಾಗಿರದೆ ದೇಶದ ಉದ್ಯಮಿಗಳಿಗೆ ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ಪುನಶ್ಚೇತನಗೊಳ್ಳುವಲ್ಲಿ ವರದಾನವಾಗಲಿದೆ ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 

ಇಂದಿನ ಆರ್ಥಿಕ ಪುನಶ್ಚೇತನ, ಸಮಯೋಚಿತ ಮತ್ತು ವೈಜ್ಞಾನಿಕವಾಗಿದ್ದು, ಬಹಳ ಆರ್ಥಿಕ ನೈಪುಣ್ಯತೆಯಿಂದ ಕೂಡಿದ್ದು, ಎಂ.ಎಸ್.ಎಂ.ಇ.ಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆಗಳನ್ನು ಪುನರಾರಂಭಿಸಲು ಉತ್ತೇಜನಕಾರಿಯಾಗಿ ಪರಿಣಮಿಸುತ್ತದೆ.

 

ಈ ಹಣಕಾಸು ನೆರವು ದೇಶದ 45 ಲಕ್ಷ ಎಂ.ಎಸ್.ಎಂ.ಇ. (MSME) ಗಳಿಗೆ ಲಾಭವಾಗಲಿದೆ. ಇದರ ಜೊತೆಗೆ ರಾಜ್ಯದ ವಿದ್ಯುತ್ ಕಂಪನಿಗಳಿಗೆ 90 ಸಾವಿರ ಕೋಟಿ ಧನ ಸಹಾಯ, 50 ಸಾವಿರ ಕೋಟಿ ಆದಾಯ ತೆರಿಗೆ ಬಾಕಿ ವಾಪಾಸ್ ಮತ್ತು ತೆರಿಗೆ ವಿನಾಯಿತಿ, 6750 ಕೋಟಿ ರೂ ನೌಕರದಾರರ ಭವಿಷ್ಯ ನಿಧಿಗೆ ನೌಕರದಾರರ ಮತ್ತು ಉದ್ಯಮಿಗಳ ವಂತಿಗೆ ಪಾವತಿ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ಹಣಕಾಸು ಸಹಾಯ ಇವುಗಳು ಕೋವಿಡ್-19ರಿಂದ ತತ್ತರಿಸಿದ ಔದ್ಯೋಗಿಕ ವಲಯಕ್ಕೆ ಸಂಜೀವಿನಿಯಾಗಿ ಪರಿಣಮಿಸಲಿದೆ ಎಂದು ಸಿಎಂ ಹೇಳಿದ್ದಾರೆ.

 

ಇವತ್ತಿನ ವಿಶೇಷತೆ ಏನೆಂದರೆ, 200 ಕೋಟಿ ವರೆಗಿನ ಟೆಂಡರ್ ಪ್ರಕ್ರಿಯೆಯಲ್ಲಿ ಭಾರತೀಯ ಕಂಪನಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾತ್ರ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದು ಸ್ವದೇಶಿ ಕಂಪನಿಗಳು ಬೆಳೆಯುವಲ್ಲಿ ದೊಡ್ಡ ಪ್ರೇರಕ ಯೋಜನೆಯಾಗಲಿದೆ.

 

ಕೋವಿಡ್-19ರಿಂದ ತತ್ತರಿಸಿದ ಜಗತ್ತಿನ ಯಾವುದೇ ದೇಶ ಔದ್ಯೋಗಿಕ ವಲಯಕ್ಕೆ ಇಂತಹ ಆರ್ಥಿಕ ಪುನಶ್ಚೇತನ ಕಾರ್ಯಕ್ರಮವನ್ನು ಘೋಷಿಸಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಲಾಕ್ ಡೌನ್ ವ್ಯವಸ್ಥೆಯಿಂದ ಹೊರಬಂದು ಜನತೆ ತಮ್ಮ ತಮ್ಮ ದಿನನಿತ್ಯದ ದುಡಿಮೆಯನ್ನು ಪ್ರಾರಂಭಿಸಲು ಪ್ರೇರೇಪಿಸಿದ ಮೊದಲ ದಿಟ್ಟ ಹೆಜ್ಜೆ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ.

 

మరింత సమాచారం తెలుసుకోండి: