ಕೊರೋನಾ ವೈರಸ್ ಜಗತ್ತಿನಾಧ್ಯಂತ ವ್ಯಾಪಿಸಿ ಸಾಷ್ಟು ಜನರನ್ನು ಬಲಿತೆಗೆದುಕೊಂಡಿದ್ದಷ್ಟೆ ಅಲ್ಲದೆ, ಸಾಕಷ್ಟು ಜನರ ಜೀವನವನ್ನು ಅತಂತ್ರಮಾಡಿ ಹೋಗಿದೆ, ಅನೇಕ ಜನರ ಬದುಕನ್ನು ನುಚ್ಚು ನೂರು ಮಾಡಿದೆ. ಕಷ್ಟಪಟ್ಟು ಹಣವನ್ನು ಸಂಪಾದಿಸಿ ಜೀವನವನ್ನು ನಡೆಸುತ್ತಿದ್ದ ಜನರು ಇಂದು ಅಕ್ಷರಸಃ ನಿರ್ಗತಿಕರಾಗಿದ್ದಾರೆ. ಈ ನಡುವೆ ವಿಶ್ವ ಬ್ಯಾಂಕ್  ಕೊರೋನಾ ವೈರಸ್ ಪರಿಣಾಮ ಜಗತ್ತಿನಾಧ್ಯಂತ ಅತೀ ಹೆಚ್ಚು ಮಂದಿಗೆ ಕಡು ಬಡತನದ ಪರಿಸ್ಥಿತಿ ಬರಲಿದೆ ಎಂದು ಆತಂಕದ ಸುದ್ದಿಯನ್ನು ನೀಡಿದೆ.

 

ಹೌದು ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಣ ಹೋಮ ನಡೆಸುತ್ತಿರುವ ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಜಗತ್ತಿನ ಸುಮಾರು 6 ಕೋಟಿಗೂ ಅಧಿಕ ಮಂದಿ ಕಡು ಬಡತನಕ್ಕೆ ಜಾರಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ.

 

ಈ ಬಗ್ಗೆ ಮಾತನಾಡಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅವರು, 'ಕೋವಿಡ್-19 ಪಿಡುಗು ವಿಶ್ವದ ವಿವಿಧ ದೇಶಗಳಲ್ಲಿ 6 ಕೋಟಿ ಮಂದಿಯನ್ನು 'ಅತಿ ಬಡತನ'ಕ್ಕೆ ದೂಡಲಿದೆ. ಕಳೆದ ಮೂರು ವರ್ಷಗಳ ದುಡಿಮೆಯನ್ನು ಈ ಪಿಡುಗು ಕಿತ್ತುಕೊಂಡಿದೆ ಎಂದು ಹೇಳಿದ್ದಾರೆ.

 

ಅಂತೆಯೇ ಕೊರೋನಾ ಸಾಂಕ್ರಾಮಿಕ ಪಿಡುಗು ನಿರ್ವಹಣೆ ಕುರಿತಂತೆ ವಿಶ್ವ ಬ್ಯಾಂಕ್ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ ಅವರು, 'ವಿಶ್ವದ ಆರ್ಥಿಕತೆ ಈ ವರ್ಷ ಶೇ 5ರಷ್ಟು ಕಡಿಮೆಯಾಗಬಹುದು. ಬಡ ದೇಶಗಳ ಮೇಲೆ ಈ ಪರಿಣಾಮ ಕೆಟ್ಟದಾಗಿರಲಿದೆ. ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ಕಾರ್ಯಕ್ರಮಗಳ ಮೂಲಕ ಸಾಧಿಸಲಾದ ಪ್ರಗತಿಯನ್ನು ಕೊರೊನಾ ಕೊಚ್ಚಿ ಹಾಕಲಿದೆ. ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ನಮ್ಮನ್ನು ಕಾಡಲಿದೆ. ವಿಶ್ವದ ವಿವಿಧೆಡೆ ಸುಮಾರು 50 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೆ ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಚೀನಾನದಲ್ಲಿ 2019ರ ಕೊನೆಯ ದಿನಗಳಲ್ಲಿ ಕಾಣಿಸಿಕೊಂಡಿತ್ತು ಎಂದು ಹೇಳಿದರು.

 

ಅಂತೆಯೇ ವಿಶ್ವದ 100 ದೇಶಗಳಲ್ಲಿ ವಿಶ್ವಬ್ಯಾಂಕ್ ವಿವಿಧ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದೆ. ಮುಂದಿನ 15 ತಿಂಗಳಿನಲ್ಲಿ 160 ಶತಕೋಟಿ ಡಾಲರ್ ಮೊತ್ತವನ್ನು ವಿವಿಧ ದೇಶಗಳಲ್ಲಿ ವಿನಿಯೋಗಿಸಲಿದೆ. ಬಡ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಲು, ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ವಿಶ್ವಬ್ಯಾಂಕ್ ಈವರೆಗೆ 5.5 ಶತಕೋಟಿ ಡಾಲರ್ ವ್ಯಯಿಸಿದೆ. ಬಡ ರಾಷ್ಟ್ರಗಳಿಗೆ ಕೇವಲ ವಿಶ್ವಬ್ಯಾಂಕ್‌ ನೆರವು ನೀಡಿದರೆ ಅವುಗಳ ಪರಿಸ್ಥಿತಿ ಸುಧಾರಿಸುವುದಿಲ್ಲ. ಶ್ರೀಮಂತ ದೇಶಗಳು ದ್ವಿಪಕ್ಷೀಯ ಸಹಕಾರಕ್ಕೆ ಒತ್ತು ನೀಡಿ, ಬಡ ದೇಶಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಮಾಲ್ಪಾಸ್ ಸಲಹೆ ಮಾಡಿದರು.

 

ಬೇರೆ ದೇಶಗಳಿಗೆ ಹೋಗಿರುವ ಕಾರ್ಮಿಕರು ಅಲ್ಲಿಂದ ದುಡಿದು ಕಳಿಸುವ ಹಣ ಮತ್ತು ಪ್ರವಾಸೋದ್ಯಮ ಆದಾಯಗಳು ಅಭಿವೃದ್ಧಿಶೀಲ ದೇಶಗಳ ಮುಖ್ಯ ಆದಾಯದ ಮೂಲ. ಆರ್ಥಿಕತೆಯ ಪುನಶ್ಚೇತನಕ್ಕೆ ಇದು ಅನಿವಾರ್ಯ. ಅಭಿವೃದ್ಧಿ ಪ್ರಮಾಣ ಕಡಿಮೆಯಿರುವ ದೇಶಗಳಿಗೆ ನೀಡಿರುವ ಸಾಲದ ಮರುಪಾವತಿ ಕಂತನ್ನು ಒಂದು ವರ್ಷದ ಅವಧಿಗೆ ಮುಂದೂಡುವ ಪ್ರಸ್ತಾವಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ 14 ದೇಶಗಳು ಈ ಪ್ರಸ್ತಾವವನ್ನು ಅನುಮೋದಿಸಿವೆ. ಉಳಿದ ದೇಶಗಳಿಂದ ಆಶಾದಾಯಕ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.

 

మరింత సమాచారం తెలుసుకోండి: