ಕೊರೋನಾ ಸೋಂಕನ್ನು ದೇಶದಲ್ಲಿ ತಡೆಯುವ ಉದ್ದೇಶದಿಂದ ಮೂರು ಬಾರಿ ಲಾಕ್ ಡೌನ್ ಮಾಡಲಾಗಿತ್ತು ಈ ಸಮಯದಲ್ಲಿ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ಉದ್ದಿಮೆಗಳು ಹಾಗೂ ಎಲ್ಲಾ ಸೇವೆಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು ಇದರಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾದ್ದರಿಂದ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಕೆಲವೊಂದು ಮಾರ್ಗ ಸೂಚಿಗಳಂತೆ ಲಾಕ್ ಡೌನ್ ಮಾಡುವಂತೆ ಆದೇಶವನ್ನು ನೀಡಿ ಲಾಕ್ ಡೌನ್ 4.0 ವನ್ನು ಸಡಿಲ ಗೊಳಿಸಿ ಸಾಕಷ್ಟು ನಿಗದಿತ ಪ್ರದೇಶಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಡೆ ಲಾಕ್ ಡೌನ್ ಸಡಿಲ ಗೊಳಿಸಿದ ನಂತರ ದೇಶದಲ್ಲಿ ಕೊರೋನಾ ಸೋಂಕು ಹಚ್ಚಾಗುತ್ತಲೇ ಇದರುವುದರಿಂದ ವಿರೋಧ ಪಕ್ಷಗಳಿಂದ ಇದಕ್ಕೆ ವಿರೋಧಗಳೂ ಬರುತ್ತಿದೆ.

 

ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಿಸಲು ಲಾಕ್‍ಡೌನ್ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸೋಂಕು ಪ್ರಕರಣ ದ್ವಿಗುಣಗೊಳ್ಳುವ ದರವು 13 ದಿನಕ್ಕೆ ಇಳಿದಿದೆ. ಹಾಗಾಗಿ ಲಾಕ್‍ಡೌನ್ ಯಶಸ್ವಿಯಾಗಿದೆ ಎಂದಿದೆ.

ಅಮೆರಿಕ, ಫ್ರಾನ್ಸ್ ಮತ್ತು ಸ್ಪೇನ್‌ಗೆ ಹೋಲಿಸಿದರೆ ಭಾರತದಲ್ಲಿ ಲಾಕ್‍ಡೌನ್‌ನಿಂದಾಗಿ ಸಮಸ್ಯೆಯಾಗಿದ್ದು ಕಡಿಮೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 

ಕಾಂಗ್ರೆಸ್ ಯಾವ ರೀತಿ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ರಾಹುಲ್ ಗಾಂಧಿ ಇವತ್ತು ನಡೆಸಿದ ಪತ್ರಿಕಾಗೋಷ್ಠಿಯೇ ಉದಾಹರಣೆ. ಲಾಕ್‍ಡೌನ್‌ಗಿಂತ ಮುಂಚೆ ಸೋಂಕು ಪ್ರಕರಣ ದುಪ್ಪಟ್ಟಗಾಗುವ ಅವಧಿ ಮೂರು ದಿನ ಆಗಿತ್ತು. ಲಾಕ್‌ಡೌನ್ ನಂತರ ಅದು 13 ದಿನ ಆಗಿದೆ. ಇದು ಭಾರತದ ಯಶಸ್ಸು ಎಂದಿದ್ದಾರೆ ಜಾವಡೇಕರ್.

 

: ಲಾಕ್‌ಡೌನ್ ಉದ್ದೇಶ ವಿಫಲ, ಮುಂದಿನ ಯೋಜನೆಯೇನು: ಪ್ರಧಾನಿ ಮೋದಿಗೆ ರಾಹುಲ್ ಪ್ರಶ್ನೆ

 

ಲಾಕ್‍ಡೌನ್ ಘೋಷಿಸಿದಾಗ ಯಾಕೆ ಲಾಕ್‍ಡೌನ್ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್, ಈಗ ಲಾಕ್‍ಡೌನ್ ಯಾಕೆ ಸಡಿಲಿಸುತ್ತಿದ್ದೀರಿ ಎಂದು ಕೇಳುತ್ತಿದೆ. ಎರಡು ರೀತಿಯ ಮಾತು ಅಂದರೆ ಇದೇ. ಇದು ಕಾಂಗ್ರೆಸ್‌ನ ಬೂಟಾಟಿಕೆ. 3000 ರೈಲುಗಳಲ್ಲಿ ಸುಮಾರು 45 ಲಕ್ಷ ಕಾರ್ಮಿಕರನ್ನು ಅವರವರ ಮನೆಗೆ ಸೇರಿಸಲಾಗಿದೆ. ಇದು ಐತಿಹಾಸಿಕ ಸಂಗತಿ.

 

ಬಡವರಿಗೆ ನಗದು ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದರು.ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ವಲಸೆ ಕಾರ್ಮಿಕರಿಗೆ ನಗದು ನೀಡಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯ ಈ ರೀತಿ ಮಾಡಿದೆ?. ಕೇಂದ್ರ ಸರ್ಕಾರ ನೀಡಿದ ಸವಲತ್ತುಗಳ ಬಗ್ಗೆ ಉಲ್ಲೇಖಿಸಿದ ಸಚಿವರು 80 ಕೋಟಿಗಿಂತಲೂ ಹೆಚ್ಚು ಬಡವರಿಗೆ 5 ತಿಂಗಳು ಉಚಿತ ಪಡಿತರ ನೀಡಲಾಗಿದೆ. 9 ಕೋಟಿ ರೈತರಿಗೆ ₹ 2000 ಹಣ ವರ್ಗಾವಣೆ ಮಾಡಲಾಗಿದೆ. 20 ಕೋಟಿ ಮಹಿಳೆಯರಿಗೆ ತಲಾ ₹ 500 ಮತ್ತು 8 ಕೋಟಿ ಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಬಡವರಿಗೆ ₹ 7,500 ನೀಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದರು. ಇದು ಅದಕ್ಕಿಂತಲೂ ಹೆಚ್ಚು.


ಜನರು ಈ ರೀತಿಯ ನಕಾರಾತ್ಮಕ ರಾಜಕೀಯವನ್ನು ಇಷ್ಟಪಡುವುದಿಲ್ಲ. ಇಡೀ ದೇಶವೇ ಒಂದೇ ದನಿಯಲ್ಲಿರುವಾಗ ಕಾಂಗ್ರೆಸ್ ಭಿನ್ನ ಸ್ವರವನ್ನೆತ್ತಿದೆ. ಹಾಗಾಗಿಯೇ ಅವರ ಪಕ್ಷ ಜನರಿಂದ ದೂರವಾಗಿರುವುದು ಎಂದಿದ್ದಾರೆ ಜಾವಡೇಕರ್

 

మరింత సమాచారం తెలుసుకోండి: