ಕೊರೋನಾ ಸೋಮಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಮಾಡಲಾಗಿತ್ತ ಲಾಕ್ಡೌನ್ 4.0 ಅವದಿ ಮೇ.31 ಕ್ಕೆ ಮುಗಿಯುತ್ತಿದ್ದರೂ ಕೂಡ ಯಾವುದೇ ರೀತಿಯ ಸೋಂಕು ಕಡಿಮೆಯಾದಂತೆ ಕಾಣುತ್ತಿಲ್ಲ. ಹಾಗಾಗಿ ಲಾಕ್ ಡೌನ್ ಮುಂದುವರಿಯುವ ನಿರೀಕ್ಷೆಯಿದೆ. ಮೇ.31ರಂದು ನಡೆಯುವ ಮನ್ ಕಿ ಬಾತ್ ನಲ್ಲಿ ಲಾಕ್ ಡೌನ್ ಬಗ್ಗೆ ಮಾತನಾಡುವ ನಿರೀಕ್ಷೆ ಇದೆ. ಅಷ್ಟಕ್ಕೂ ಮೋದಿ ಮೇ 31ರ ಮನ್ ಕಿ ಬಾತ್ ನಲ್ಲಿ ಏನನ್ನು ಮಾತನಾಡಲಿದ್ದಾರೆ ಗೊತ್ತಾ..?

 

ಕರೊನಾ ವೈರಸ್​ ಕೊಂಡಿ ತುಂಡರಿಸಲು ರಾಷ್ಟ್ರದಲ್ಲಿ ಜಾರಿಗೆ ತಂದಿರುವ ಲಾಕ್​ಡೌನ್​ 4.0 ಕೊನೆ ದಿನ ಮೇ 31 ಹೀಗಾಗಿ ಅಂದು ನಡೆಯಲಿರುವ ಮನ್​ ಕಿ ಬಾತ್​ ಕಾರ್ಯಕ್ರಮದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 

ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅಂದೇ ಲಾಕ್​ಡೌನ್​ 4.0 ಕೊನೆ ದಿನವಾಗಿದ್ದು, ವಿಸ್ತರಣೆಯಾಗುವುದೊ ಅಥವಾ ಅಂತ್ಯಗೊಳ್ಳುವುದೊ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ.

 

ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಲಾಕ್​ಡೌನ್​ 5.0 ವಿಸ್ತರಣೆ ಮಾಡಬಹುದು ಅಥವಾ ಇನ್ನಷ್ಟು ಸಡಿಲಗೊಳಿಸಬಹುದು ಎನ್ನುವ ನೀರಿಕ್ಷೆ ಇದೆ.

 

ಇನ್ನಷ್ಟು ಸಡಿಲ : ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಲಾಕ್​ಡೌನ್​ ಇನ್ನಷ್ಟು ಸಡಿಲಗೊಳಿಸುವ ಬಗ್ಗೆ ಗಮನ ಹರಿಸಲಿದ್ದಾರೆ. ಕರೊನಾ ಸೋಂಕು ಅಧಿಕವಾಗಿರುವ ನಗರಗಳಲ್ಲಿ ಮಾತ್ರ ಲಾಕ್​ಡೌನ್​ 5.0 ಜಾರಿಗೆ ತರುವ ಬಗ್ಗೆ ಒಲವು ಹೊಂದಿದ್ದಾರೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಶೇ.70ರಷ್ಟು ಕರೊನಾ ಸೋಂಕು ಹರಡಿರುವ 11 ನಗರಗಳಲ್ಲಿ ಲಾಕ್​ಡೌನ್​ 5.0 ವಿಸ್ತರಣೆಯಾಗಲಿದೆ. ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಥಾಣೆ, ಇಂದೋರ್​, ಚೆನ್ನೈ, ಅಹಮದಾಬಾದ್​, ಜೈಪುರ, ಸೂರತ್​ ಹಾಗೂ ಕೋಲ್ಕತ್ತಾದಲ್ಲಿ ಲಾಕ್​ಡೌನ್​ ವಿಸ್ತರಣೆಯಾಗಲಿದೆ ಎಂದ ಸುಳಿವು ಇದೆ.

 

ರಾಷ್ಟ್ರದ ಒಟ್ಟು 1.51 ಲಕ್ಷ ಕರೊನಾ ವೈರಸ್​ ಸೋಂಕಿತರಲ್ಲಿ ಅಹಮದಾಬಾದ್​, ದೆಹಲಿ, ಪುಣೆ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಸೋಂಕಿತರು ಇದ್ದಾರೆ. ಹೀಗಾಗಿ ಈ ನಗರಗಳಲ್ಲಿ ಲಾಕ್​ಡೌನ್​ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆ ಇದೆ.

 

ದೇವಾಲಯ, ಮಸೀದಿ ಹಾಗೂ ಚರ್ಚ್​ಗಳ ಬಾಗಿಲು ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ವಿವಿಧ ಸಂಘಟನೆಗಳು ರಾಜ್ಯಗಳ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿವೆ. ಕರ್ನಾಟಕದಲ್ಲಿ ಈಗಾಗಲೇ ಜೂ.1ರಿಂದ ಕೇವಲ ದೇವಾಲಯಗಳ ಬಾಗಿಲು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ದೇವಾಲಯ ಬಾಗಿಲು ತೆರೆದರೂ ಜಾತ್ರೆ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ. ಚರ್ಚ್​ ಹಾಗೂ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಲ್ಲ.

 

మరింత సమాచారం తెలుసుకోండి: