ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದು ಅದೇ ರೀತಿ ರಾಜ್ಯದಲ್ಲೂ ಕೂಡ ಕೊರೋನಾ ಪ್ರಕರಣಗಳು ಅಧಿಕವಾಗುತ್ತಲೇ ಹೋಗುತ್ತಿದೆ. ಇದರಲ್ಲಿ ಸಾಕಷ್ಟು ಸೋಂಕುಗಳು ಮುಂಬೈನ ನಂಟನ್ನು ಹೊಂದಿದ ಕೇಸ್‍ ಗಳೇ ಹೆಚ್ಚಾಗಿ ದಾಖಲಾಗುತ್ತದೆ. ಅದರಂತೆ ಕೃಷ್ಣನ ಊರು ಉಡುಪಿಯಲ್ಲೂ ಕೂಡ ಅಧಿಕ ಸಂಖ್ಯೆ ಕೊರೋನಾ ಕೇಸ್ ದಾಖಲಾಗುತ್ತಲೇ ಇದೆ. ಈ ಕೇಸ್ ಗಳು ಮುಂಬೈನ ಹಿನ್ನಲೆಯನ್ನು ಹೊಂದಿದೆ.  ಎಂದು  ಹೇಳಲಾಗುತ್ತಿದೆ. ಅಷ್ಟಕ್ಕೂ ಇದುವರೆಗೂ ಉಡುಪಿಯಲ್ಲಿ ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

 

ಕೊರೋನ ಲಾಕ್‌ಡೌನ್ ಬಳಿಕ ಅಂತಾರಾಜ್ಯ ಹಾಗೂ ವಿದೇಶಗಳಲ್ಲಿ ಸಿಕ್ಕಿಬಿದ್ದವರಿಗೆ ಹುಟ್ಟೂರಿಗೆ ಬರಲು ಹಸಿರು ನಿಶಾನೆ ತೋರಿದ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಆಗುತ್ತಿರುವವರ ಸಂಖ್ಯೆ ಒಂದೇ ಸಮನೆ ಏರುಗತಿ ಯಲ್ಲಿದ್ದು, ಇಂದು ಮತ್ತೆ 15 ಮಂದಿ ಈ ಪಟ್ಟಿಗೆ ಸೇರ್ಪಡೆಗೊಂಡರು.

 

 ಮಹಾರಾಷ್ಟ್ರದ ವಿವಿದೆಡೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 15 ಮಂದಿ ಶುಕ್ರವಾರ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಬಾಲಕ ಸೇರಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

 

ಇದರಿಂದ ಜಿಲ್ಲೆಯಲ್ಲೀಗ ಒಟ್ಟು 164 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನಕ್ಕೆ ನೆಗೆದಿದೆ. ಉಳಿದಂತೆ ಪಶ್ಚಿಮ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ 12ನೇ (97ಕೇಸು) ಹಾಗೂ ಉತ್ತರ ಕನ್ನಡ ಜಿಲ್ಲೆ 16ನೇ (75) ಸ್ಥಾನದಲ್ಲಿವೆ.

 

ಇಬ್ಬರು ಬಿಡುಗಡೆ: ಜಿಲ್ಲೆಯಲ್ಲೀಗ 158 ಸಕ್ರೀಯ ಪ್ರಕರಣಗಳಿವೆ. ಮಾ.29ರವರೆಗೆ ಪಾಸಿಟಿವ್ ಬಂದ ಮೂವರು ಚಿಕಿತ್ಸೆಯ ಬಳಿಕ ಚೇತರಿಸಿ ಕೊಂಡು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದರೆ, ಒಮ್ಮೆ ಪಾಸಿಟಿವ್ ಬಂದ ಬಳಿಕ ಮರು ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ಬಂದ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿ ಹಾಗೂ ಜಿಪಂನ ಸಿಬ್ಬಂದಿ 30ರ ಹರೆಯದ ಕಟಪಾಡಿಯ ಯುವಕನನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ಇವರಿಬ್ಬರು ತಮ್ಮ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು, ಇದೀಗ ಅದರಿಂದ ಮುಕ್ತರಾಗಿದ್ದಾರೆ.

 

ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಐವರು ಆಸ್ಪತ್ರೆಯಿಂದ ಬಿಡುಗಡೆ ಗೊಂಡಂತಾಗಿದೆ. ಮುಂಬೈಯಿಂದ ಬಂದ ಒಬ್ಬರು ಹೃದಯಾಘಾತ ದಿಂದ ನಿಧನರಾಗಿದ್ದು, ಅವರಲ್ಲೂ ಕೊರೋನ ಸೋಂಕು ಕಂಡು ಬಂದಿತ್ತು. ಹೀಗಾಗಿ ಈಗ ಸದ್ಯಕ್ಕೆ 158 ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ. ಸೂಡ ತಿಳಿಸಿದರು.

ಶುಕ್ರವಾರ ಪಾಸಿಟಿವ್ ಬಂದ ಎಲ್ಲಾ 15 ಮಂದಿಯೂ ಮಹಾರಾಷ್ಟ್ರದಿಂದ ಊರಿಗೆ ಬಂದವರಾಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು 10 ವರ್ಷದೊಳಗಿನ ಬಾಲಕರು. ಇವರೆಲ್ಲರನ್ನೂ ಈಗಾಗಲೇ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಡಿಎಚ್‌ಓ ಹೇಳಿದರು.

 

 

మరింత సమాచారం తెలుసుకోండి: