ಪ್ರಪಂಚದಲ್ಲಿ ಭಾರತದ ಪ್ರಧಾನಿಗೆ ಒಂದು ಅತ್ಯಮೂಲ್ಯವಾದ ಸ್ಥಾನವಿದೆ, ಮೋದಿ ದೇಶದಲ್ಲಿ ಸಾಕಷ್ಟು ಜನರ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ತನ್ನ ಭ್ರಷ್ಟಾಚಾರವಿಲ್ಲದ ಆಡಳಿತದಿಂದಾಗಿ ಮೋದಿ ದೇಶದ ಜನರ ಮನವವನ್ನು ಗೆದ್ದಿದ್ದಾರೆ ಹಾಗಾಗಿ ಮೋದಿ ಸರ್ಕಾರವನ್ನು ಜನರು ಎರಡನೇ ಭಾರಿಗೆ ಸರ್ಮಾನು ಮತದಿಂದ  ಆಯ್ಕೆ ಮಾಡಿದ್ದಾರೆ. ಇದರ ಜೊತೆಗೆ ಕೊರೋನಾ ವೈರಸ್ ಇಂದಾಗಿ ಇಡೀ ಪ್ರಪಂಚದ ವಿವಿಧ ರಾಷ್ಟ್ರದ ನಾಯಕರ ಜನಪ್ರಿಯ ರೇಟಿಂಗ್ ಗಳು ಕೆಳಗೆ ಇಳಿಯುತ್ತಿದ್ದರೆ ಭಾರತದ ಪ್ರಧಾನಿ ಮಾತ್ರ ರೇಟಿಂಗ್ ಪಟ್ಟಿಯಲ್ಲಿ ಮೇಲೇರುತ್ತಿದ್ದಾರೆ. ಅಷ್ಟಕ್ಕೂ ಜನಪ್ರಿಯತೆಯಲ್ಲಿ ಮೋದಿಯ ರೇಟಿಂಗ್ ಎಷ್ಟನೇ ಸ್ಥಾನ ಗೊತ್ತಾ,..?

 

 ಇದರ ಜೊತೆಗೆ ಕರೊನಾ ವೈರಸ್​ನಿಂದಾಗಿ ವಿಶ್ವ ನಾಯಕರ ರೇಟಿಂಗ್​ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, ನಂ.1 ಸ್ಥಾನವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಐಎಎನ್‌ಎಸ್-ಸಿ ವೋಟರ್ ಸ್ಟೇಟ್ ಆಫ್ ದಿ ನೇಷನ್ 2020 ಸಮೀಕ್ಷೆ ನಡೆಸಿದ್ದು, ಶೇಕಡಾ 65.69 ರಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತೃಪ್ತರಾಗಿದ್ದಾರೆ ಎಂದು ತಿಳಿಸಿದೆ. ಕುತೂಹಲದ ಸಂಗತಿ ಎಂದರೆ ಬಿಜೆಪಿ ಆಡಳಿತ ಇಲ್ಲದ ಒಡಿಶಾದಲ್ಲಿ ನರೇಂದ್ರ ಮೋದಿಯವರಿಗೆ ಅತ್ಯಧಿಕ ಬೆಂಬಲಿಗರು ಇದ್ದು, ಅಲ್ಲಿ ಇವರಿಗೆ ಅಗ್ರ ಶ್ರೇಯಾಂಕ ಸಿಕ್ಕಿದೆ. ಶೇ.93.95ರ ಶ್ರೇಯಾಂಕವು ಹಿಮಾಚಲ ಪ್ರದೇಶದಲ್ಲಿ ಸಿಕ್ಕಿದ್ದರೆ, ಬಿಜೆಪಿಯೇತರ ಆಡಳಿತದಲ್ಲಿರುವ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶಗಳು ಕ್ರಮವಾಗಿ ಶೇ.92.73 ಮತ್ತು ಶೇ.83.6 ರಷ್ಟು ರೇಟಿಂಗ್‌ಗಳೊಂದಿಗೆ ಮೋದಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ.



ಬಿಜೆಪಿ ಆಡಳಿತವಿರುವ ಪ್ರಧಾನಿಯ ತವರು ಗುಜರಾತ್​ನಲ್ಲಿ ಸಹಜವಾಗಿ ಮೋದಿ ಅವರಿಗೆ ಅತ್ಯುತ್ತಮ ರೇಟಿಂಗ್‌ ಸಿಕ್ಕಿದೆ. ಆದರೆ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಸಂಯೋಜನೆಯ ಆಡಳಿತ ಪಕ್ಷ ಇರುವ ಮಹಾರಾಷ್ಟ್ರದಲ್ಲಿಯೂ ಮೋದಿಯವರಿಗೆ ಅತ್ಯುತ್ತಮ ಸ್ಪಂದನೆ ದೊರಕಿದೆ. ಮಹಾರಾಷ್ಟ್ರದ ಶೇ. 71.48ರಷ್ಟು ಮಂದಿ ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ ತೃಪ್ತರಾಗಿದ್ದಾರೆ. ಈಶಾನ್ಯದಲ್ಲೂ ಶೇ. 69.45 ಜನರು ಮೋದಿಗೆ ಬೆಂಬಲಿಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

 

ಇನ್ನು, ಭಾರತದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಇಲ್ಲಿ ಶೇ. 58.36ರಷ್ಟು ಭಾರತೀಯರು ತಾವು ಮೋದಿಯವರ ಕಾರ್ಯಕ್ಷಮತೆಯಿಂದ 'ತೃಪ್ತರಾಗಿದ್ದೇವೆ' ಎಂದಿದ್ದಾರೆ. ಕೇವಲ ರಾಜ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಶೇ. 24.01 ರಷ್ಟು ಮಂದಿ 'ಸ್ವಲ್ಪಮಟ್ಟಿಗೆ ತೃಪ್ತರಾಗಿದ್ದೇವೆ' ಎಂದು ಹೇಳುತ್ತಿದ್ದರೆ, ಶೇ.16.71ರಷ್ಟು ಜನರು ತಮಗೆ ಈ ಆಡಳಿತದಿಂದ ತೃಪ್ತರಾಗಿಲ್ಲ ಎಂದು ಹೇಳಿರುವುದಾಗಿ ಸಮೀಕ್ಷೆ ಹೇಳಿದೆ.

 

 

ಇತ್ತೀಚೆಗೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ ಜಾರ್ಖಂಡ್‌ನಲ್ಲಿ ಪ್ರಧಾನಿಗೆ ಉತ್ತಮ ಅನುಮೋದನೆ ಸಿಕ್ಕಿದೆ. ಶೇ. 64.26ರಷ್ಟು ಜನರು ಪ್ರಧಾನಿಯ ಬಗ್ಗೆ ತೃಪ್ತಿ ಹೊಂದಿದ್ದಾರೆಂದು ಹೇಳಿದ್ದಾರೆ. ಇದರೊಂದಿಗೆ ರಾಜ್ಯದಿಂದ ನಿವ್ವಳ ಅನುಮೋದನೆ ರೇಟಿಂಗ್ ಶೇಕಡಾ 82.97 ರಷ್ಟು ಮೂಡಿದೆ.

ಇನ್ನು ಪಶ್ಚಿಮ ಬಂಗಾಳದಲ್ಲಿ 64.06ರಷ್ಟು ಮೋದಿಯ ಪರವಾಗಿ ರೇಟಿಂಗ್​ ಇದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ, 50.84 ರಷ್ಟು ಜನರು ಈ ಆಡಳಿತದ ಬಗ್ಗೆ ತೃಪ್ತಿ ಹೊಂದಿದ್ದಾರೆಂದು ಸಮೀಕ್ಷೆ ತಿಳಿಸಿದೆ.

 

ಅದೇ ಇನ್ನೊಂದೆಡೆ, ಬಿಜೆಪಿಯ ಆಡಳಿತ ಇರುವ ಉತ್ತರಾಖಂಡ, ಗೋವಾ ಮತ್ತು ಹರಿಯಾಣದಲ್ಲಿ ಮೋದಿ ಅವರಿಗೆ ಅಷ್ಟೊಂದು ರೇಟಿಂಗ್​ ಸಿಗದಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ಕ್ರಮವಾಗಿ ಶೇ.53.53, ಶೇ.52.54 ಹಾಗೂ ಶೇ.51.25 ರೇಟಿಂಗ್​ ಇದೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕಡಿಮೆ ಎನ್ನಲಾಗಿದೆ. ಕಮ್ಯುನಿಸ್ಟ್‌ ಆಡಳಿತ ಕೇರಳದಲ್ಲಿ ಶೇ.32.89ರಷ್ಟು ಅನುಮೋದನೆ ಸಿಕ್ಕರೆ ಎಐಎಡಿಎಂಕೆ ಆಡಳಿತದ ತಮಿಳುನಾಡಿನಲ್ಲಿ ಶೇ.32.15 ರಷ್ಟು ಜನರು ಮಾತ್ರ ಮೋದಿ ಕಾರ್ಯವೈಖರಿಯನ್ನು ಬೆಂಬಲಿಸಿದ್ದಾರೆ.

 

2009ರ ಮೇ ತಿಂಗಳಿನಿಂದ ಪ್ರತಿ ವಾರ ಐಎಎನ್‌ಎಸ್-ಸಿ ವೋಟರ್ ಸಮೀಕ್ಷೆ ನಡೆಸಲಾಗುತ್ತಿದೆ. ಒಂದು ವರ್ಷದಲ್ಲಿ 52 ಬಾರಿ ಹಾಗೂ 11 ರಾಷ್ಟ್ರೀಯ ಭಾಷೆಗಳಲ್ಲಿ ನಡೆಸಲಾಗುತ್ತದೆ.

 

మరింత సమాచారం తెలుసుకోండి: