ಚೀನಾದಲ್ಲಿ ಜನಮ ತಾಳಿದ ಕೊರೋನಾ ವೈರಸ್ ಇಂದ ಇಡೀ ಜಗತ್ತೇ ನಲುಗಿ ಹೋಗಿರುವಂತಹ ಈ ಸಂದರ್ಭದಲ್ಲಿ ಭಾರತ ದೇಶಕ್ಕೆ ಕೊರೋನಾ ವೈರಸ್ ಸೋಂಕು ಹಾಗೂ ಚೀನಾದ ಗಡಿ ಬಿಕ್ಕಟ್ಟು ಶುರುವಾಗಿದೆ. ಈ ಕುರಿತಾಗಿ ಉಭಯ ದೇಶಗಳು ಜೂನ್ 6ರಂದು ಮಾತುಕತೆಯನ್ನು ನಡೆಸಿ ಈ ಗಡಿ ವಿವಾದದ ಬಗ್ಗೆ ಚರ್ಚಿಸಿದ್ದಾರೆ ಅಷ್ಟಕ್ಕೂ ಈ ಒಂದು  ಚರ್ಚೆಯಲ್ಲಿ ಆದ ಮಾತುಕತೆ ಏನು..?

 

ಏಷ್ಯಾದ ಎರಡು ಪ್ರಬಲ ದೇಶಗಳಾದ ಭಾರತ ಮತ್ತು ಚೀನಾದಲ್ಲಿ ಕಿಲ್ಲರ್ ವೈರಸ್ ಕೊರೊನಾ ವಾವಳಿ ತೀವ್ರಗೊಂಡಿರುವಾಗಲೇ ಉಭಯ ರಾಷ್ಟ್ರಗಳ ನಡುವೆ ಉಲ್ಬಣಗೊಂಡಿರುವ ಗಡಿ ಬಿಕ್ಕಟ್ಟು ವಿಶ್ವದ ಅನೇಕ ದೇಶದಲ್ಲಿ ಆತಂಕ ಉಂಟು ಮಾಡಿದೆ. ಲಡಾಖ್ ಮತ್ತು ಸಿಕ್ಕಿಂ ಗಡಿ ಪ್ರದೇಶಗಳಲ್ಲಿ ತಲೆದೋರಿರುವಗಡಿ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಭಾರತ ಮತ್ತು ಚೀನಾ ನಡುವೆ  ಜೂನ್ 6ರಂದು ನಡೆಯುತ್ತಿರುವ ಮಾತು ಕತೆ ಫಲಪ್ರದವಾಗುವ ಲಕ್ಷಣಗಳು ಗೋಚರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 

ಇಂಡೋ-ಚೀನಾ ಲೆಫ್ಟಿನೆಂಟ್ ಜನಲರ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಗಡಿಯಲ್ಲಿ ಸಂಯಮ ಕಾಯ್ದು ಕೊಳ್ಳುವುದೂ ಸೇರಿದಂತೆಉಭಯ ದೇಶಗಳ ನಡುವೆ ಪ್ರಸ್ತುತ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ತಿಳಿಗೊಳಿಸುವ ಸಂಬಂಧ ಮಹತ್ವದ ಮಾತುಕತೆ ನಡೆಯಿತು. ಈ ಹಿಂದೆಜರುಗಿದ ಸಮಾಲೋಚನೆಗಳ ಮುಂದುವರಿದ ಭಾಗವಾಗಿ ನಡೆದ ಈ ಸಭೆಯಲ್ಲಿ ವಿವಾದಗಳನ್ನು ಸದ್ಯಕ್ಕೆ ಅಂತ್ಯಗೊಳಿಸುವುದಕ್ಕೆ ಅಧ್ಯತೆ ನೀಡಲಾಗಿದೆ.

 

ಲಡಾಕ್‍ಚುಶೂಲ್ ವಲಯದ ಮಾಲ್ಕೋದಲ್ಲಿಇಂದು ಬೆಳಗ್ಗೆ 8 ಗಂಟೆಗೆ ಸಭೆ ಆರಂಭವಾಯಿತು. ಲೇಹ್ ವಲಯದ 14 ಕೋರ್ ಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು. ಗಡಿ ವಿಷಯದಲ್ಲಿ ಭಾರತದ ನಿಲುವನ್ನುಅವರು ಚೀನಾದ ತಮ್ಮ ಸಹವರ್ತಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟರು.


ಲಡಾಕ್‍ನ ಪಾಂಗಾಂಗ್ ಸರೋವರ, ಗಲ್ವಾನ್‍ಕಣಿವೆ ಮತ್ತುಡಮ್ಟೋಕ್ ಪ್ರದೇಶಗಳಲ್ಲಿ ಚೀನಾದ ನಿರ್ಮಾಣ ಚಟುವಟಿಕೆಗಳ ಬಗ್ಗೆ ಭಾರತ ಈಗಾಗಲೇ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ತಿಂಗಳು ಎರಡೂ ಸೇನಾಪಡೆಗಳ ನಡುವೆ ಘರ್ಷಣೆ ನಡೆದು, ಆಗಿನಿಂದ ಪರಿಸ್ಥಿತಿ ಉಲ್ಬಣಗೊಂಡಿದೆ.

 

ಗಡಿ ಭಾಗದಲ್ಲಿಕದನ ಕಾರ್ಮೋಡಗಳು ಕವಿದಿದ್ದು, ಭಾರತತನ್ನ ಮೂರು ಸಶಸ್ತ್ರ ಪಡೆಗಳನ್ನು ನಿಯೋಜಿಸಿ ಚೀನಾಗೆ ಬಿಸಿ ಮುಟ್ಟಿಸಿದೆ. ಭಾರತಕ್ಕೆ ಸೇನಾ ಸಾಮಥ್ರ್ಯ ಮತ್ತು ವಿವಿಧ ದೇಶಗಳ ಬೆಂಬಲವನ್ನುಕಂಡು ಈಗಾಗಲೇ ಚೀನಾದ ಅಧ್ಯಕ್ಷ ಕ್ಸಿಜಿನ್‍ಪಿಂಗ್ ಮೆತ್ತಗಾಗಿದ್ದು, ಶಾಂತಿಸೂತ್ರ ಸಂಧಾನಕ್ಕೆ ಒಲವು ತೋರಿದ್ದಾರೆ.

 

మరింత సమాచారం తెలుసుకోండి: