ರತ ಹಾಗೂ ಚೀನಾದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಅಲ್ಲದೇ ಚೀನಾದ ಕುತಂತ್ರಕ್ಕೆ ನಮ್ಮ ದೇಶದ 20 ಜನ ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ಇಡೀ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕೆಲವರು ನಾವು ರಕ್ತವನ್ನು ಕೊಡುತ್ತೇವೆ. ರಕ್ತ ಕುದಿಯುತ್ತದೆ ಎಂದು ಭಾವೋದ್ವೇಗದಲ್ಲಿ ಮಾತನಾಡುವುದು ಸಹಜ ಆದರೆ ಇಲ್ಲೊಬ್ಬ ಗೃಹ ರಕ್ಷಕ ದಳದ ಸಿಬ್ಬಂದಿ ಚೀನಾ ವಿರುದ್ದ ಪ್ರತೀಕಾರಕ್ಕೆ ಸೇನೆಯಲ್ಲಿ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರ ಅಷ್ಟಕ್ಕೂ ಆ ಸಿಬ್ಬಂದಿ ಯಾರು ಗೊತ್ತಾ..?

ಭಾರತ ಚೀನಾ ನಡುವೆ ಯುದ್ದದ ಮಾತು ಆವರಿಸಿದೆ. ಇದರಿಂದ ಭಾರತದ ಪ್ರತಿಯೊಬ್ಬರಲ್ಲಿ ರಕ್ತ ಕುದಿಯುತ್ತಿದೆ. ಇದರ ಮಧ್ಯೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೃಹ ರಕ್ಷಕ ದಳದ ಸಿಬ್ಬಂದಿ ಲಕ್ಷ್ಮಣ ಮಡಿವಾಳ ತನ್ನ ರಕ್ತದಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆದು, ನಾನು ಸಹ ದೇಶಕ್ಕಾಗಿ ಹೋರಾಡಲು ಸಿದ್ದನಿದ್ದೇನೆ. ದೇಶ ಸೇವೆಗಾಗಿ ನನ್ನ ರಕ್ತ ಕುದಿಯುತ್ತಿದೆ. ಗುಲ್ವಾನ್ ಪ್ರದೇಶದಲ್ಲಿ ಕುತಂತ್ರ ಬುದ್ದಿಯಿಂದ ಚೀನಾ ದೇಶದರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ,

ನಮ್ಮ ಸೈನಿಕರು ಹುತಾತ್ಮರಾದಾಗಿನಿಂದ ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ನನಗೆ ಸೇನೆಯ ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಡಿ. ನನ್ನ ದೇಶದ ಸೈನಿಕರ ಹತ್ಯೆಗೆ ಪ್ರತೀಕಾರ ತೀರಿಸಲು ಸೇನೆಯಲ್ಲಿ ಅವಕಾಶ ಮಾಡಿಕೊಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ. ಈಗಾಗಲೇ ಇಡೀ ದೇಶದಾದ್ಯಂತ ಆವರಿಸಿರುವ ಚೀನಾದ ವಸ್ತುಗಳನ್ನ ಬಹಿಷ್ಕರಿಸುವಂತೆ ದೇಶದಲ್ಲಿ ದೊಡ್ಡ ಮಟ್ಟದ ಆಂದೋಲನವೇ ಶುರುವಾಗಿದೆ. ಬಾಯ್ಕಾಟ್ ಚೀನಾ ಎನ್ನುವ ಮಾತುಗಳು ಎಲ್ಲೆಡೆ ಬರುತ್ತಿರುವ ಜೊತೆಗೆ ಎಲ್ಲರೂ ಚೀನಾ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ದೇಶದ ಗಡಿ ಭಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ, ಮೋಸ, ವಂಚನೆಯಿಂದ ನಿಯಮಗಳನ್ನ ಉಲ್ಲಂಘಿಸಿ ನಮ್ಮ ಸೈನಿಕರನ್ನ ಹತ್ಯೆ ಮಾಡಿದ ಚೀನಾದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎನ್ನುವ ಕೂಗು ಕೂಡಾ ಜೋರಾಗಿ ಕೇಳಿ ಬರುತ್ತಿದೆ.


ಸಧ್ಯ ಚೀನಾದ ವಿರುದ್ದ ಪ್ರತೀಕಾರಕ್ಕೆ ಇಡೀ ದೇಶದಲ್ಲಿ ಯುವಕರು ಸೇನೆಯೊಂದಿಗೆ ಕೈ ಜೋಡಿಸಲು ನಾವೂ ಸಿದ್ದ ಎಂದು ಹೇಳುತ್ತಿದ್ದಾರೆ. ಇದರ ಮಧ್ಯೆ ರಾಯಚೂರು ಜಿಲ್ಲೆಯ ಲಕ್ಷ್ಮಣ ಮಡಿವಾಳರ ರಕ್ತ ಪತ್ರದ ಕ್ರಾಂತಿಕಾರಿ ನಿರ್ಧಾರ ಚೀನಾದವರ ಮೇಲಿನ ಸೇಡಿಗೆ ಇಡೀ ದೇಶದ ಯುವಜನರ ರಕ್ತ ಕುದಿಯುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

మరింత సమాచారం తెలుసుకోండి: