ಕೊರೋನಾ ವೈರಸ್ ಇಂದಾಗಿ ಮಕ್ಕಳನ್ನು ರಕ್ಷಿಸುವ ಸಲುವಾಗಿ  ದೇಶದ ವಿವಿಧ  ರಾಜ್ಯಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬಹಳಷ್ಟು ಜನರ ವಿರೋಧದ ನಡುವೆಯೂ ಕೂಡ ಗಟ್ಟಿ ನಿರ್ಧಾರವನ್ನು ಕೈಗೊಂಡು ಎಸ್ಎಸ್ಎಲ್ ಸಿ  ಪರೀಕ್ಷೆಯನ್ನು ಮಾಡುವುದಾಗಿ ಘೋಷಣೆಯನ್ನು ಮಾಡಲಾಗಿದೆ. ಇದರಿಂದ ಸಾಕಷ್ಟು ಪೋಷಕರು ಆತಂಕದಲ್ಲಿ ಕಾಲವನ್ನು ಕಳೆಯುತ್ತಿದ್ದಾರೆ. ಈ ಆತಂಕವನ್ನು ಇವರಿಂದ ದೂರ ಮಾಡಲು ಸರ್ಕಾರ ಪರೀಕ್ಷ ಕೇಂದ್ರಗಳಲ್ಲಿ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸನ್ಮಾನ್ಯ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳೂ ಕೂಡ ಸಿಕ್ಕವೆ..

 

ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಾಳೆ ಆತಂಕದ ನಡುವೆಯೇ ಆರಂಭವಾಗಲಿದೆ. ಒಂದೆಡೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಪರೀಕ್ಷೆ ಎದುರಿಸುವ ಆತಂಕ ಎದುರಾಗಿದೆ.

 

ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಲು ರಾಜ್ಯಸರ್ಕಾರ ಕೆಲವು ಮಾರ್ಗೋಪಾಯಗಳನ್ನು ಕಂಡುಕೊಂಡಿದೆ. ನಿಮ್ಹಾನ್ಸ್‍ನ ಖ್ಯಾತ ತಜ್ಞರಿಂದ ವಿದ್ಯಾರ್ಥಿಗಳು ಧೃತಿಗೆಡದಂತೆ ಹೇಗೆ ಪರೀಕ್ಷೆ ಎದುರಿಸಬೇಕೆಂಬ ಬಗ್ಗೆ ವರದಿ ನೀಡುವಂತೆ ಕೇಳಿಕೊಂಡಿತ್ತು.

ಈ ಪ್ರಕಾರ ನುರಿತ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದ್ದು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪರೀಕ್ಷೆ ಎದುರಿಸಲು ಕೆಲವು ಸಲಹೆಗಳನ್ನು ನೀಡಿದೆ.

 

ತಜ್ಞರು ಕೊಟ್ಟಿರುವ ಸಲಹೆಗಳು: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ವಿದ್ಯಾರ್ಥಿಗಳು ಸ್ನೇಹಿತರ ಜತೆ ಗುಂಪು ಗುಂಪು ಚರ್ಚೆಯಲ್ಲಿ ತೊಡಗಿಸಿಕೊಳ್ಳಬಾರದು.ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಮ್ಮ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಕುಳಿತುಕೊಳ್ಳಬೇಕು.

ಮಾಸ್ಕ ಧರಿಸಿ ಪರೀಕ್ಷೆ ಬರೆಯುವುದು ಕಿರಿಕಿರಿ ಎನಿಸಿದಲ್ಲಿ ಆಗಾಗ ಮಾ¸್ಕï ತೆಗೆಯಿರಿ. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದಲೇ ಕುಡಿಯುವ ನೀರು ತೆಗೆದುಕೊಂಡು ಹೋಗುವುದು ಉತ್ತಮ. ಸಾಧ್ಯವಾದರೆ ಸ್ಯಾನಿಟೈಸರ್ ಇಟ್ಟುಕೊಳ್ಳಿ. ಆಗಾಗ ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಿ.

 

ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಪರೀಕ್ಷಾ ಸಿಬ್ಬಂದಿಗೆ ತಿಳಿಸಿ. ಅಲ್ಲದೆ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದ ನಂತರವೂ ಗುಂಪು ಗುಂಪಾಗಿ ಹೊರಗೆ ಬರಬಾರದು. ಸಾಮಾಜಿಕ ಅಂತರ ಪಾಲನೆ ಮಾಡಬೇಕು.ಪರೀಕ್ಷಾ ಹಿಂದಿನ ದಿನ ಮಿತವಾದ ಊಟ ಮಾಡಬೇಕು. ಕಣ್ಣು ತುಂಬಾ ನಿದ್ರೆ ಮಾಡಬೇಕು. ಸ್ಪೆ ೈಸಿ ಪದಾರ್ಥಗಳನ್ನು ಪರೀಕ್ಷೆ ಮುಗಿಯುವವರೆಗೂ ತಿನ್ನುವುದನ್ನು ಕಡಿಮೆ ಮಾಡಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಜಾಗೃತರಾಗಿರುವುದು ಉತ್ತಮ.

 

ಸಾಧ್ಯವಾದಷ್ಟು ತಮ್ಮ ತಮ್ಮ ಖಾಸಗಿ ವಾಹನಗಳನ್ನು ಉಪಯೋಗಿಸುವುದು ಒಳಿತು. ಸಾಮೂಹಿಕ ಸಾರಿಗೆ ಉಪಯೋಗ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿ ಸೋಂಕಿತರಿದ್ದರೆ, ಕ್ವಾರಂಟೈನ್‍ಲ್ಲಿದ್ದರೆ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ. ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ. ಪೂರಕ ಪರೀಕ್ಷೆಯಲ್ಲಿ ನಿಮಗೆ ಅವಕಾಶ ಸಿಗುತ್ತದೆ.

 

ಪರೀಕ್ಷೆ ಆತಂಕದಿಂದ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ಮಾಡುವುದು ಬೇಡ. ಈ ಪರೀಕ್ಷೆ ಬರೆಯದೇ ಹೋದರೂ ಚಿಂತೆ ಇಲ್ಲ. ಇನ್ನೊಂದು ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಸರಿ ಇಲ್ಲದೆ ಹೋದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ಕೋರಿದೆ.

 

మరింత సమాచారం తెలుసుకోండి: