ಲಡಾಖ್​ ಗಡಿ ಸಂಘರ್ಷದ ಬೆನ್ನಲ್ಲೇ ಭಾರತ ಸರ್ಕಾರ ಚೀನಾಗೆ ಡಿಜಿಟಲ್​ ತಿರುಗೇಟು ನೀಡಿದ್ದು, ತುಂಬಾ ಪ್ರಖ್ಯಾತಿ ಪಡೆದಿದ್ದ ಟಿಕ್​ಟಾಕ್​ ಸೇರಿದಂತೆ ಚೀನಾ ನಿರ್ಮಿತ 59 ಆಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಹಿನ್ನಲೆ ಚೀನಾ ಭಾರತದ ಮೇಲೆ ದ್ವೇಶವನ್ನು ಸಾಧಿಸಲು ಈಗಾಗಲೇ ಆರಂಭಿಸಿದೆ. ಅಷ್ಟಕ್ಕೂಅದು ಹೇಗೆ ಅಂತೀರ ಇಲ್ಲಿದೆ ನೋಡಿ

 

ಚೀನಾದ 59 ಮೊಬೈಲ್ ಆಯಪ್ ಗಳಿಗೆ ಭಾರತ ನಿಷೇಧ ವಿಧಿಸಿದ ಬೆನ್ನಲ್ಲೇ ಚೀನಾ ಸರಕಾರ ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಸೆನ್ಸರ್‌ ಕತ್ತರಿ ಪ್ರಯೋಗಿಸಿದೆ. ಈ ಮೂಲಕ ಪರೋಕ್ಷ ತಿರುಗೇಟು ನೀಡಿದೆ.

 

ಭಾರತದಲ್ಲಿ ಚೀನಾದ ಎಲ್ಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಅವಕಾಶವಿದೆ. ಆದರೆ ಚೀನಾದಲ್ಲಿ ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ ಅನ್ನು ಸುಲಭವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

 

ಇಲ್ಲಿಯವರೆಗೆ ಚೀನಾದ ಮಂದಿ ವಿಪಿಎನ್‌ (ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌) ಸರ್ವರ್‌ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದಾಗಿತ್ತು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಈ ಎಲ್ಲಾದಕ್ಕೂ ಚೀನಾ ಕತ್ತರಿ ಹಾಕಿದೆ.

ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಎಕ್ಸ್‌ಪ್ರೆಸ್‌ ವಿಪಿಎನ್‌ ಫೋನ್‌ ಮತ್ತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿಲ್ಲ. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾದ ಶಕ್ತಿಶಾಲಿ ಫೈರ್‌ವಾಲ್‌ ಸೃಷ್ಟಿಸಿ ವಿಪಿಎನ್‌ಗಳನ್ನೇ ಬ್ಲಾಕ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಇಂಟರ್‌ನೆಟ್‌ ಸೆನ್ಸರ್‌ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಚೀನಾ ಸದಾ ಮುಂದು. ಈಗಾಗಲೇ ಇಲ್ಲಿ ಫೇಸ್‌ಬುಕ್‌, ವಾಟ್ಸಪ್‌, ಯೂಟ್ಯೂಬ್‌ಗಳು ಸೇರಿದಂತೆ ಹಲವು ತಾಣಗಳು ನಿಷೇಧವಾಗಿದೆ. ಸುದ್ದಿ ತಾಣಗಳಾದ ಬ್ಲೂಮ್‌ ಬರ್ಗ್‌, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌, ನ್ಯೂಯಾರ್ಕ್‌ ಟೈಮ್ಸ್‌ ಸಹ ಬ್ಲಾಕ್‌ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

 

ಚೀನಾ ತನ್ನದೇ ಆದ ಮಸೇಜಿಂಗ್‌ ಅಪ್ಲಿಕೇಶನ್‌ ಮತ್ತು ಸಾಮಾಜಿಕ ಜಾಲತಾಣವನ್ನು ಹೊಂದಿದ್ದು ಇದರಲ್ಲೂ ದೇಶದ ವಿರುದ್ಧ ಕಮೆಂಟ್‌ ಮಾಡಿದರೆ ಸೆನ್ಸರ್‌ ಮಾಡುತ್ತದೆ. ತನ್ನ ವಿರುದ್ಧ ಯಾವುದೇ ಟೀಕೆಗಳನ್ನು ಚೀನಾ ಸಹಿಸುವುದಿಲ್ಲ. ಟೀಕೆ ಮಾಡುವ ವೆಬ್‌ಸೈಟ್‌ಗಳ ಯುಆರ್‌ಎಲ್‌ಗಳನ್ನು ಚೀನಾ ʼಗ್ರೇಟ್‌ ಫೈರ್‌ವಾಲ್‌ʼ ಮೂಲಕ ಬ್ಲಾಕ್‌ ಮಾಡಿಸುತ್ತದೆ.

 

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ನಲ್ಲಿ ಕಳೆದ ನವೆಂಬರ್‌ನಲ್ಲಿ ಬರೆಯಲಾದ ಅಂಕಣದ ಮಾಹಿತಿ ಪ್ರಕಾರ, 10 ಸಾವಿರ ವೆಬ್‌ಸೈಟ್‌ಗಳನ್ನು ಚೀನಾ ಬ್ಲಾಕ್‌ ಮಾಡಿದೆ. ಚೀನಾ ಸರ್ಕಾರ ಐಪಿ ಅಡ್ರೆಸ್‌, ಯುಆರ್‌ಲ್‌, ಕೀ ವರ್ಡ್‌ಗಳನ್ನು ಸಹ ಬ್ಲಾಕ್‌ ಮಾಡುತ್ತದೆ. ಕೋವಿಡ್‌ 19 ಆರಂಭದಲ್ಲಿ ಈ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳು ಶೇರ್‌ ಆಗದಂತೆ ತಡೆಯಲು ಕೆಲವು ಕೀ ವರ್ಡ್‌ಗಳನ್ನು ತನ್ನ ಬ್ಲಾಕ್‌ ಮಾಡಿ ಸರ್ಚ್‌ ಆಗದಂತೆ ನೋಡಿಕೊಂಡಿತ್ತು.

 

మరింత సమాచారం తెలుసుకోండి: