ಭಾರತ ಚೀನಾದ 59 ಆಫ್ ಗಳನ್ನು ತನ್ನ ರಾಷ್ಟ್ರದಲ್ಲಿ ನಿಷೇಧವನ್ನು ಹೇರಲಾಗಿತ್ತು. ಭಾರತ ಎಲ್ಲಾ ಚೀನೀ ಆಫ್ ಗಳ  ಮೇಲೆ ನಿಷೇಧವನ್ನು ಹೇರಿದ್ರೂ ಕೂಡ ಪಬ್ ಜಿಯನ್ನು ಮಾತ್ರ ನಿಷೇಧಿಸಿರಲಿಲ್ಲ. ಆದರೆ ಭಾರತದ ವೈರಿ  ಪಾಕಿಸ್ಥಾನ ಮಾತ್ರ ಪಬ್ ಜಿ ಗೇಮ್ ಅನ್ನು ತಾತ್ಕಾಲಿಕವಾಗಿ ನಿಷೇಧವನ್ನು ಹೇರಿದೆ. ಅಷ್ಟಕ್ಕೂ ಪಾಕಿಸ್ತಾನ ಪಬ್ ಜಿ ಮೇಲೆ ನಿಷೇಧ ಹೇರಿದ್ದಾದರೂ ಹೇಕೆ ಗೊತ್ತಾ..?

ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿರುವುದು ಗೊತ್ತಿರಬಹುದು. ಆದರೆ, PUBG ನಿಷೇಧದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ, ಪಾಕಿಸ್ತಾನದಲ್ಲಿ ಈ ಬಗ್ಗೆ ಬುಧವಾರದಂದು ನಿರ್ಧಾರ ಕೈಗೊಂಡಿದ್ದು, ತಾತ್ಕಾಲಿಕವಾಗಿ ಪಬ್ಜಿ ಗೇಮ್ ಬಳಕೆ ನಿಷೇಧಿಸಲಾಗಿದೆ.

ಪಬ್ಜಿ ವಿರುದ್ಧ ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ(ಪಿಟಿಎ) ಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಗೇಮ್ ಮೇಲೆ ನಿಷೇಧ ಹೇರಲಾಗಿದೆ. ಪಬ್ಜಿ ಆಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ವರದಿ ಬಂದಿದ್ದರಿಂದ ಈ ಕ್ರಮ ಅನುಸರಿಸಲಾಗಿದೆ ಎಂದು ಪಿಟಿಎ ಹೇಳಿದೆ.

 

ಪಬ್ಜಿ ಗೀಳಿಗೆ ತುತ್ತಾಗಿ ಯುವಕನೊಬ್ಬ ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿತ್ತು. ಇದಾದ ಬಳಿಕ ಲಾಹೋರ್ ಪೊಲೀಸರು ಪಬ್ಜಿ ಮೇಲೆ ಕಡಿವಾಣ, ನಿರ್ಬಂಧ, ನಿಷೇಧ ಹೇರುವ ಬಗ್ಗೆ ಶಿಫಾರಸು ಮಾಡಿದ್ದರು. ಪಾಕಿಸ್ತಾನದಲ್ಲಷ್ಟೇ ಅಲ್ಲ ಜೋರ್ಡಾನ್, ಇರಾಕ್, ನೇಪಾಳ, ಗುಜರಾತ್, ಇಂಡೋನೇಷಿಯಾದ ಪ್ರಾಂತ್ಯವೊಂದರಲ್ಲಿ ಪಬ್ಜಿ ನಿಷೇಧ ಹೇರಲಾಗಿದೆ.

 

ಪ್ಲೇಯರ್ ಅನ್‍ನೋನ್ ಬ್ಯಾಟಲ್‍ಗ್ರೌಂಡ್ (ಪಬ್‍ಜಿ) ವಿಶ್ವದಲ್ಲೇ ಅತಿ ಹೆಚ್ಚು ಇನ್‍ಸ್ಟಾಲ್ ಆದ ಮೊಬೈಲ್ ಗೇಮ್ ಎಂಬ ಖ್ಯಾತಿಗೆ ಪಾತ್ರವಾಗಿದೆ. PUBG Call of Duty ಮೂಲತಃ ಚೀನಾದಲ್ಲಿ ತಯಾರಾದ ಅಪ್ಲಿಕೇಷನ್ ಅಲ್ಲ, ಜಪಾನ್ ಸಿನಿಮಾ ಬ್ಯಾಟಲ್ ರಾಯಲ್ ನಿಂದ ಸ್ಫೂರ್ತಿ ಪಡೆದು ಬ್ರೆಂಡನ್ ಎಂಬಾತ ದಕ್ಷಿಣ ಕೊರಿಯಾದ ಬ್ಲೂಹೋಲ್ ಕಂಪನಿಗಾಗಿ ನಿರ್ಮಿಸಿದ ವಿಡಿಯೋ ಗೇಮ್ ಇದಾಗಿದೆ. ನಂತರ ಚೀನಾದ ಟೆನ್ಸೆಂಟ್ ಕಂಪನಿ ಈ ಜನಪ್ರಿಯ ಗೇಮ್ ನಲ್ಲಿ ಹೂಡಿಕೆ ಮಾಡಿ, ಎಲ್ಲೆಡೆ ಪಬ್ಲಿಷ್, ಪ್ರಚಾರ ಮಾಡಿದೆ.

 

మరింత సమాచారం తెలుసుకోండి: