ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ  ಎಂದು ಹೇಳುತ್ತಿದೆ. ಇದರಿಂದದಾಗಿ ಸಾಫ್ಟ್ ವೇರ್ ಕಂಪನಿಗಳು ಹೀಗಾಗಲೇ ತಮ್ಮ ಕೆಲಸಗಾರರಿಗೆ ಮನೆಯಿಂದ ಕೆಲಸವನ್ನು ನಿರ್ವಹಿಸುವಂತೆ ಹೇಳಿದೆ. ಆದರೆ ಸರ್ಕಾರಿ ಅಧಿಕಾರಿಗಳಿಗೆ ಈ ರೀತಿಯ ಅವಕಾಶವನ್ನು ಮಾಡಿಕೊಟ್ಟಿಲ್ಲ. ಇದರಿಂದ ಸರ್ಕಾರಿ ನೌಕರರು  ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಆದರೆ ಈಗ ಸರ್ಕಾರಿ ನೌಕರರಿಗೆ ಈ ಕುರಿತು ಸರ್ಕಾರದಿಂದ ಗುಡ್ ನ್ಯೂಸ್ ಸಿಗಲಿದೆ.

 

ಹೌದು ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು, ಐಟಿ ಸಂಸ್ಥೆಗಳ ರೀತಿಯಲ್ಲಿ ಸರ್ಕಾರಿ ವಲಯದ ಕೆಲವು ನೌಕರರಿಗೆ ವರ್ಕ್ ಫ್ರಮ್ ಹೋಂ ಜಾರಿ ಮಾಡುವ ಬಗ್ಗೆ ಸರ್ಕಾರದಲ್ಲಿ ಉನ್ನತ ಮಟ್ಟದ ಚಿಂತನೆ ನಡೆದಿದೆ. ಈ ಮೂಲಕ ಸದ್ಯದಲ್ಲಿಯೇ ರಾಜ್ಯದ ಸರ್ಕಾರಿ ನೌಕರರಿಗೂ ವರ್ಕ್ ಪ್ರಂ ಹೋಂ ಎನ್ನುವ ಕೆಲಸ ನಿಗದಿಯಾಗುವ ಮೂಲಕ, ಗುಡ್ ನ್ಯೂಸ್ ಸಿಗಲಿದೆ.

 

ಈಗಾಗಲೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂಎಸ್ ಬಿಲ್ಡಿಂಗ್) ಸೇರಿದಂತೆ ಅನೇಕ ಕಚೇರಿಗಳಲ್ಲಿ ನೌಕರರಿಗೆ ಸೋಂಕು ಕಾಣಿಸಿಕೊಂಡಿದೆ.ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ ಇಲಾಖೆಗಳಿಗೆ ಸಾವಿರಾರು ಜನರು ಬಂದು ಹೋಗುತ್ತಾರೆ. ಯಾರಿಗೆ ಸೋಂಕು ಹಬ್ಬಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಎಷ್ಟೇ ಎಚ್ಚರಿಕೆ ವಹಿಸಿದರೂ ಅಂಥವರಿಗೂ ಸೋಂಕು ಹಬ್ಬಿರುವುದು ತಪ್ಪಿಲ್ಲ. ಇನ್ನು ನಮ್ಮಂತವರ ಗತಿಯೇನು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

 

ಹೀಗಾಗಿ ಸರ್ಕಾರಿ ನೌಕರರು ಖಾಸಗಿ ಕಂಪನಿಗಳಂತೆ ತಮಗೂ ಕೂಡ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗುವಂತಹ ನಿಯಮವನ್ನು ಜಾರಿ ಮಾಡುವಂತೆ ಸಚಿವಾಲಯ ನೌಕರರ ಸಂಘದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಬಹುತೇಕ ನೌಕರರು ಕರ್ತವ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಸಿಬ್ಬಂದಿಗಳಿಗೆ ಈಗಾಗಲೇ ಪಾಸಿಟಿವ್ ಬಂದಿರುವ ಕಾರಣ ಎಲ್ಲಿ ತಮಗೂ ಹಬ್ಬಿ ಬಿಡುತ್ತದೆಯೋ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ.ಹೀಗಾಗಿ ಖಾಸಗಿ ಸಂಸ್ಥೆಗಳ ನೌಕರರಂತೆ ತಮಗೂ ವರ್ಕ್ ಪ್ರಮ್ ಹೋಮ್ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಬಗ್ಗೆ ‌ಚಿಂತನೆ ನಡೆಸಿದೆ.

 

మరింత సమాచారం తెలుసుకోండి: