ಕೊರೋನಾ ವೈರಸ್ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಕೈಮೀರಿ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಮಾತ್ರ  ಹೆಚ್ಚಾಗುತ್ತಲೇ ಇದೆ. ಹಾಗಾಗಿ ಕೊರೋನಾವನ್ನು ತಡೆಗಟ್ಟಲು ಸರ್ಕಾರ ನಾಲ್ಕು  ಸೂತ್ರಗಳನ್ನು ರೂಪಿಸಿದೆ. ಈ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು  ಎಂದು ತಿಳಿಸಿದೆ. ಈ ಮೂಲಕ ಜನರಲ್ಲಿರುವ  ಕೊರೋನಾ ವೈರಸ್ ನ ಆತಂಕವನ್ನು ಕಡಿಮೆಯನ್ನು ಮಾಡಬಹುದಾಗಿದೆ. ಅಷ್ಟಕ್ಕೂ ಕೊರೋನಾ ವೈರಸ್ ಗೆ ಸರ್ಕಾರ ರಚಿಸಿರುವ ಆ ಮೂರು ಸೂತ್ರಗಳು ಯಾವುವು ಗೊತ್ತಾ…?

 

ಕೊರೊನಾ ನಿಯಂತ್ರಣಕ್ಕಾಗಿ 5Tಸೂತ್ರ ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ನುಮುಂದೆ ಇದರ ಜೊತೆಗೆ 4 C ಸೂತ್ರ ಅನುಸರಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗೋಷ್ಠಿ ನಡೆಸಿದ ಅವರು ಕೊರೊನಾ ಸೋಂಕಿತರ ಸಾವಿನ ಪ್ರಮಾಣ 1% ಗಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ .

 

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಸಚಿವರು, ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

 

ಕೊರೋನ ನಿಯಂತ್ರಣಕ್ಕೆ 4 C ಸೂತ್ರ  (Confidence, Collaboration, Communication, Compassion) ಆತ್ಮ ವಿಶ್ವಾಸ, ಸಹಭಾಗಿತ್ವ, ಸಂವಹನ ಮತ್ತು ಅನುಕಂಪಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಸಚಿವರು, ಪ್ರಸ್ತುತ ಕೋವಿಡ್ ಸೇವೆಯಲ್ಲಿ ತೊಡಗಿರುವ ಆರೋಗ್ಯಯೋಧರು ಕಳೆದ 4 ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಖಾಸಗಿ ವಲಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇರುವ ಪರಿಣಿತರು ಕೆಲದಿನಗಳ ಮಟ್ಟಿಗೆ ಅವರ ಸ್ಥಾನ ತುಂಬಬೇಕಿದೆ ಎಂದರು.

 

ಸರ್ಕಾರ, ನಾಗರಿಕರು ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಿಂದ ಕೊರೋನ ಮಣಿಸಲು ಸಾಧ್ಯ ಎಂದು ಸಚಿವರು ಹೇಳಿದರು. ಇದಕ್ಕಾಗಿ ನಾಳೆಯೇ ಸರ್ಕಾರ ಆಪ್ ಬಿಡುಗಡೆ ಮಾಡಲಿದ್ದು ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಬಹುದು ಎಂದು ಹೇಳಿದರು. ಕೊರೋನ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬಾರದು. ಸರಿಯಾದ ಮಾಹಿತಿ ಪಡೆದುಕೊಂಡು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ಮಣಿಸಬೇಕು ಎಂದು ಡಾ.ಸುಧಾಕರ್ ತಿಳಿಸಿದರು.

 

మరింత సమాచారం తెలుసుకోండి: