ಕೊರೋನಾ ವೈರಸ್ ದೇಶಕ್ಕೆ ಪ್ರವೇಶವನ್ನು ಮಾಡಿದಂದಿನಿದ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಹೆಚ್ಚಾಗಿ ಹೋಗಿದೆ. ದೇಶದಲ್ಲಿ ಕೊರೋನಾ ಸೋಂಕನ್ನು ತಡೆಯುವ ದೃಷ್ಠಿಯಿಂದ ಇಡೀ ದೇಶವನ್ನು ನಾಲ್ಕ ಬಾರಿ ಲಾಕ್ ಡೌನ್ ಅನ್ನು ಮಾಡಲಾಯಿತು. ಇದರಿಂದ ಅದೆಷ್ಟೋ ಜನರು ತಮ್ಮ ಕೆಲಸ ಕಾರ್ಯಗಳನ್ನು ಕಳೆದುಕೊಂಡು ನಿರ್ಗತಿಕರಾದರೆ,  ಇದರ ಜೊತೆಗೆ ಸಾಕಷ್ಟು ಜನರ ಬಾಳು ಡೋಲಾಯಮಾನವಾಗಿ ಬಿಟ್ಟಿತು. ಜೊತೆಗೆ ಸರ್ಕಾರದ ಎಲ್ಲಾ ಸೇವೆಗಳು  ಬಂದ್ ಆಗಿದ್ದರಿಂದ ಸರ್ಕಾರ ಕ್ಕೆ ಬರಬೇಕಿದ್ದ ಆದಾಯ ಕಡಿಮೆಯಾಯಿತು ಹಾಗಾಗಿ ಭಾರತೀಯ ಆರ್ಥಿಕತೆ ತಳಮಟ್ಟಕ್ಕೆ ಕುಸಿಯಿತು. ಆದರೆ ಪ್ರಸ್ತುತ ಲಾಕ್ ಡೌನ್ ಅವದಿ ಮುಗಿದಿದ್ದು ಎಲ್ಲಾ ಆರ್ಥಿಕ ಚಟುವಟಿಕೆಗಳು ಆರಂಭವಾದ ನಂತರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಾಣತೊಡಗಿದೆ.

 

ಹೌದು ಶನಿವಾರ ನಡೆದ 7 ನೇ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದ ಶಕ್ತಿಕಾಂತ ದಾಸ್ , ಭಾರತದ ಆರ್ಥಿಕತೆಯು ಕ್ರಮೇಣ ಸಹಜ ಸ್ಥಿತಿಗೆ ಮರಳುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದಾಗಿನಿಂದ ಆರ್ಥಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳಿವೆ ಎಂದು ಅವರು ಹೇಳಿದರು.

 

ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯಸ್ಥ ರಜನೀಶ್ ಕುಮಾರ್ ಅವರ ಜೊತೆ ವಿಡಿಯೋ ಸಂವಾದ ನಡೆಸಿದರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಭಾರತ ಸರ್ಕಾರವು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆರ್ಥಿಕತೆಗೆ ಭಾರಿ ಹಿನ್ನಡೆ ಉಂಟಾಗಿರುವುದರಿಂದ ಆರ್ಥಿಕತೆಯನ್ನು ಮತ್ತೆ ಬಲ ಪಡಿಸಲು ಏನು ಮಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು.

 

ವಿಶೇಷವೆಂದರೆ, ಕೊರೊನಾವೈರಸ್‌ನಿಂದಾಗಿ, ಲಾಕ್‌ಡೌನ್ 2 ತಿಂಗಳಿಗಿಂತ ಹೆಚ್ಚು ಕಾಲ ದೇಶಾದ್ಯಂತ ಜಾರಿಯಲ್ಲಿದೆ. ಇದರಿಂದಾಗಿ ಭಾರತದ ಆರ್ಥಿಕತೆಯು ಬಹಳವಾಗಿ ನರಳಿದೆ. ಆದಾಗ್ಯೂ, ಲಾಕ್‌ಡೌನ್‌ನಿಂದ ಅನ್ಲಾಕ್ ಮಾಡುವ ಪ್ರಕ್ರಿಯೆಯಿಂದ, ದೇಶದ ಜಿಡಿಪಿ ಮತ್ತೊಮ್ಮೆ ವೇಗವನ್ನು ಹಿಡಿಯಲು ಪ್ರಾರಂಭಿಸಿದೆ ಎಂದಿದ್ದಾರೆ.

 

"ಪ್ರಸ್ತುತ ಸಮಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಬೆಳವಣಿಗೆಯ ದರವನ್ನು ವೇಗಗೊಳಿಸುವುದು ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸುವುದು ಅಗತ್ಯವಾಗಿದೆ, ಇದರಿಂದ ನಾವು ಬಲವಾಗಿ ಮರಳಬಹುದು ಲಾಕ್‌ಡೌನ್ ಸಡಿಲಗೊಂಡ ನಂತರ ಭಾರತೀಯ ಆರ್ಥಿಕತೆಯು ಈಗ ಸಹಜ ಸ್ಥಿತಿಗೆ ಮರಳಲು ಸಂಕೇತ ನೀಡುತ್ತಿದೆ ಎಂದು ಶಕ್ತಿಕಾಂತ ಹೇಳಿದರು. ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಕಂಪನಿಗಳು ಮತ್ತು ಕೈಗಾರಿಕೆಗಳು ಉತ್ತಮವಾಗಿ ಪ್ರತಿಕ್ರಿಯಿಸಿವೆ. ಆದರೆ, ಕೊರೊನಾವೈರಸ್ 100 ವರ್ಷಗಳಲ್ಲಿ ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

 

ಕೋವಿಡ್-19 ಭಾರತವನ್ನು ಮಾತ್ರವಲ್ಲದೆ ವಿಶ್ವ ಆರ್ಥಿಕತೆ, ಜಾಗತಿಕ ಮೌಲ್ಯ ಸರಪಳಿ ಮತ್ತು ಕಾರ್ಮಿಕ ಮತ್ತು ಬಂಡವಾಳ ಚಳುವಳಿಯನ್ನೂ ದುರ್ಬಲಗೊಳಿಸಿದೆ ಎಂದು ಅವರು ಹೇಳಿದರು. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಹಣ ಸಂಗ್ರಹಿಸುವಂತೆ ಸಲಹೆ ನೀಡಿದ್ದಾರೆ.

 

మరింత సమాచారం తెలుసుకోండి: