ಸಮ್ಮಿಶ್ರ ಸರ್ಕಾರ ಉರುಳಿಸಿ ಅಧಿಕಾರಕ್ಕೇರಿದ ಬಿಜೆಪಿ ಯು ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನೂತನ ಸ್ಪೀಕರ್ ಆಗಿ ನೇಮಕ ಮಾಡಿದರು. ಇದಾದ ಮೇಲೆ ಒಂದು ಅಧಿವೇಶನ ಕೂಡ ನಡೆದಿದೆ. ಆದರೆ ಇದೀಗ ಸ್ಪೀಕರ್ ಈಗಾ ಮಾಡೋದು! ಈ ಕೆಲಸದಿಂದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಅದೇನೆಂದರೆ ಸ್ಪೀಕರ್ ಹೊಸ ಸಂಪ್ರದಾಯ ವೊಂದಕ್ಕೆ ನಾಂದಿ ಹಾಡಿದ್ದು, ಅದು ಏನಂತ ಮುಂದೆ ಹೇಳ್ತೀವಿ ನೋಡಿ. 


 ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ನೂತನ ಸಲಹೆಗಾರನನ್ನಾಗಿ ನೇಮಿಸಿಕೊಳ್ಳುವ ಮೂಲಕ, ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಸೃಷ್ಠಿಸಿದ್ದಾರೆ. ವಿಧಾನ ಸಭೆಯ ಸ್ಪೀಕರ್ ಅವರ ಸಲಹೆಗಾರನನ್ನಾಗಿ ಓಂಪ್ರಕಾಶ್ ಅವರನ್ನು ನೇಮಿಸಿಕೊಂಡು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ ವಿಧಾನಸಭೆ ಸಚಿವಾಲಯದಲ್ಲಿ ಸಲಹೆಗಾರರು ವರ್ಸಸ್ ಅಧಿಕಾರಿಗಳ ನಡುವೆ ಜಟಾ ಪಟಿ ಕೂಡ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿಪಕ್ಷ ಇದನ್ನು ಯಾವ ರೀತಿ ಸ್ವೀಕರಿಸುತ್ತದೆ ಎಂಬುದು ಸಹ ಮುಖ್ಯವಾಗಿದೆ. 


ಇನ್ನೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಸಲಹೆಗಾರರನ್ನಾಗಿ ಓಂಪ್ರಕಾಶ್ ನೇಮಿಸಿಕೊಳ್ಳುವ ಮೂಲಕ ಸರ್ಕಾರದ ಹಣ ದುಂದುವೆಚ್ಚಕ್ಕೆ ಮುಂದಾದ್ರಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಅಲ್ಲದೇ ಕಾಗೇರಿಯವರಿಗೆ ಅನುಭವದ ಕೊರತೆಯೋ ಅಥವಾ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯಿಂದ ಹೀಗೆ ತಮ್ಮ ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೋ ಎಂಬ ಸಂದೇಹಕ್ಕೂ ಕಾರಣವಾಗಿದೆ.  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಈ ನಿರ್ಧಾರ ಎಷ್ಟರ ಮಟ್ಟಿಗೆ ಸರಿ? ಎಂಬುದೇ ಜನರ ಪ್ರಶ್ನೆಯಾಗಿದೆ. ಇದರಿಂದ ಎಷ್ಟು ಉಪಯೋಗ ವಾಗುತ್ತದೆ ಎಷ್ಟು ಇಲ್ಲ ಎಂದು ಕೂಲಂಕುಷವಾಗಿ ವಿಶ್ಲೇಷಣೆ ನಡೆಸುವ ಅಗತ್ಯತೆ ಯಿದೆ. ಸರ್ಕಾರ ಇದನ್ನು ಒಪ್ಪುತ್ತಾ ಇಲ್ಲವಾ ಅನ್ನೋದು ಇನ್ನೊಂದು ಪ್ರಶ್ನೆಯಾಗಿದೆ. ಏನಾದರೂ ಹೊಸದೊಂದು ಉದ್ಯೋಗ ಸೃಷ್ಠಿ ಯಾದಂತೆಯು ಆಗಿದೆ. 


మరింత సమాచారం తెలుసుకోండి: