ಸರಕಾರ ಬೀಳುತ್ತದೆ ಎಂದು ಬಿಜೆಪಿಯವರು ಆಗಾಗ ಹೇಳುತ್ತಲೇ ಇದ್ದಾರೆ. ಆದರೆ ಇದೀಗ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳು ಸದ್ಯಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಭರವಸೆಯ ಮಾತುಗಳನ್ನು ಆಡಿದರು. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎನ್ನಬಹುದು.

ಹೌದು, ಮಧ್ಯಂತರ ಚುನಾವಣೆ ವಿಚಾರ ಸರ್ಕಾರವನ್ನು ಪತನಗೊಳಿಸಬೇಕು ಎನ್ನುವವರಿಗೆ ಬ್ಲ್ಯಾಕ್‍ಮೇಲ್ ತಂತ್ರವಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ತಿಳಿಸಿದರು. ಜೊತೆಗೆ ಜಿಂದಾಲ್ ಬಗ್ಗೆಯೂ ಮಾತನಾಡಿದ ಅವರು, ಜಿಂದಾಲ್ ಕಂಪನಿಯ ಆಡಿಟ್ ಮಾಡಸಬೇಕು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಜಿಂದಾಲ್ ಕಂಪನಿ ರಾಜ್ಯ ಸರ್ಕಾರದಿಂದ ಕೇಳಿದ್ದೆಷ್ಟು? ನಿಜಕ್ಕೂ ಅವರಿಗೆ ಭೂಮಿ ಅವಶ್ಯಕತೆ ಇದೆಯೇ, ಈ ಎಲ್ಲದರ ಬಗ್ಗೆಯೂ ಆಡಟ್ ಆಗಬೇಕು. ಈ ವಿಚಾರಗಳ ಬಗ್ಗೆ ಸಚಿವ ಸಂಪುಟದ ಉಪಸಮಿತಿ ಮೊದಲು ಗಮನ ಹರಿಸಬೇಕು ಎಂದು ಪಾಟೀಲ್ ಹೇಳಿದರು. 

మరింత సమాచారం తెలుసుకోండి: