ದೇವೇಗೌಡ ಅವರ ಕುಟುಂಬದಲ್ಲಿ ರಾಜಕೀಯವೇ ಹೆಚ್ಚು. ಅದೂ ಅಲ್ಲದೇ, ಹಾಸನದ ನೂತನ ಸಂಸದ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಎ.ಮಂಜು ಅವರು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.


ಹೌದು, ಪ್ರಜ್ವಲ್ ರೇವಣ್ಣ ಕುರಿತು ಪದೇ ಪದೇ ವಾಗ್ದಾಳಿ ನಡೆಸುತ್ತಿರೋ ಎ.ಮಂಜು ಮತ್ತೊಮ್ಮೆ ದೇವೇಗೌಡರ ಕುಟುಂಬಕ್ಕೆ ಕಂಟಕವಾಗಿ ಕಾಡುತ್ತಿದ್ದಾರೆ. ಅಲ್ಲದೇ, ಪ್ರಜ್ವಲ್ ರೇವಣ್ಣ ಅವರು, ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ. ಜೊತೆಗೆ ಚುನಾವಣಾ ಆಯೋಗಕ್ಕೂ ಸುಳ್ಳು ಸುದ್ದಿ ನೀಡಿದ್ದಾರೆ ಎಂದು ಕಿಡಿ ಕಾರಿದರು.
 
ಪ್ರಜ್ವಲ್ ರೇವಣ್ಣ ಅವರು ಹಲವು ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಸರಿಯಾಗಿ ನಮೂದಿಸಿಲ್ಲ. ಇನ್ನು ಇದರ ಜೊತೆಗೆ ಹೆಚ್.ಡಿ. ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಪ್ರಜ್ವಲ್ ಮುಚ್ಚಿಟ್ಟಿದ್ದಾರೆ. ಇದರ ಜೊತೆಗೆ 1.8ಕೋಟಿ ಹಣ ಅವರ ಖಾತೆಗೆ ವರ್ಗಾವಣೆ ಆಗಿದೆ. ಇದ್ಯಾವುದೂ ಚುನಾವಣಾ ಅಫಿಡವಿಟ್ ನಲ್ಲಿ ನಮೂದಾಗಿಲ್ಲ. ಹೀಗಾಗಿ ಈ ಕುರಿತು ಅರ್ಜಿಯಲ್ಲಿ ಬರೆಯಲಾಗಿದೆ. 



మరింత సమాచారం తెలుసుకోండి: