ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂಧಿ, ಆರೋಗ್ಯ ಇಲಾಖೆ ವಿರುದ್ಧ ರೋಸಿ ಹೋಗಿದ್ದಾರೆ. ಐದು ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಕೊನೆಗೂ ಇಲಾಖೆಯ ವಿರುದ್ಧ ರೋಸಿ ಹೋಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 


219 ಜನ ಸಿಬ್ಬಂದಿಗಳಿಗೆ ಸುಮಾರು ಐದು ತಿಂಗಳಿನಿಂದ ಸಂಬಳವೇ ಆಗಿಲ್ಲ. ಇದರಿಂದ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಸಿಬ್ಬಂದಿಯ ಈ ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲವೂ ಇದೆ ಎನ್ನಲಾಗಿದೆ. 


ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಇತ್ತೀಚೆಗೆ ಹರಪನಹಳ್ಳಿ ಸೇರ್ಪಡೆ ಆಗಿತ್ತು. ನಂತರ ಇಲ್ಲಿ ಸಮಸ್ಯೆ ಆರಂಭವಾಯಿತು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕಷ್ಟ ಅನುಭವಿಸುವಂತೆ ಆಗಿದೆ, ಆದರೆ ಕೊನೆಗೆ ಪ್ರತಿಭಟನೆಯ ಅಸ್ತ್ರ ಹಿಡಿದಿರೋ ಸಿಬ್ಬಂಧಿ ಸಂಬಳ ನೀಡಿ ಎಂದು ಒತ್ತಾಯಿಸಿದ್ದಾರೆ.


మరింత సమాచారం తెలుసుకోండి: