ಕಾವೇರಿ ನದಿ ಉಳಿವಿಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರು ಕಾವೇರಿ ಕೂಗು ಎನ್ನುವ ಅಭಿಯಾನ ಆರಂಭಿಸಿದ್ದಾರರೆ. ಇದಕ್ಕೆ ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾವೇರಿ ನದೀ ತೀರದ ಉದ್ದಕ್ಕೆ ಮರಗಳನ್ನು ಬೆಳಸಬೇಕು ಎನ್ನುವುದು ಸದ್ಗುರು ಅವರ ಯೋಜನೆ ಆಗಿದೆ. ಇದಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರೂ ಸಹ ಬೆಂಬಲ ಸೂಚಿಸುತ್ತಿದ್ದಾರೆ. ಅದೇ ರೀತಿ ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಹೀಗಾಗಿ ಅವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಅವರ ಅನೇಕ ಲಕ್ಷಾಂತರ ಅಭಿಮಾನಿಗಳೂ ಸಹ ಈ ಅಭಿಯಾನಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಈ ಕುರಿತು ಇನ್ಸ್ಟಾ ಗ್ರಾಮ್‌ನಲ್ಲಿ ಬರೆದುಕೊಂಡಿರುವ ಅವರು, 'ಕಾವೇರಿ ಕೇವಲ ನದಿಯಷ್ಟೇ ಅಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಅವಳು ನಮ್ಮ ತಾಯಿ'ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ 'ಕಾವೇರಿ ಕೂಗು' ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದ್ದಾರೆ.

ಅಷ್ಟಕ್ಕೂ ಯಶ್ ಹೇಳಿದ್ದೇನು ಗೊತ್ತಾ?

ಇಶಾ ಫೌಂಡೇಶನ್ ಇವತ್ತು ಜೀವನದಿ ಕಾವೇರಿಯನ್ನು ಉಳಿಸುವ ಒಂದು ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ ಇದಕ್ಕೆ ನಾವು ಅಭಿನಂದನೆ ಹೇಳಬೇಕು. ನಿಮಗೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಆಸೆ ಇದೆ ಅಂತ ಗೊತ್ತು. ಅದಕ್ಕೆ ನೀವು ಮಾಡಬೇಕಾಗಿರೋದು ಏನು ಗೊತ್ತಾ?  ಒಂದು ಗಿಡಕ್ಕೆ 42 ರೂ. ಆಗುತ್ತೆ. ಆ ಗಿಡವನ್ನು ಕೊಡಿಸುವ ಶಕ್ತಿಯನ್ನು ನನಗೆ ನಿಮಗೆ ಎಲ್ಲರಿಗೂ ಆ ಭಗವಂತ ಕೊಟ್ಟಿದಾನೆ. 80009 80009 ಗೆ ಕರೆ ಮಾಡಿ ನಿಮ್ಮ ಬೆಂಬಲ ಸೂಚಿಸಿ, ನಿಮ್ಮ ಕೊಡುಗೆ ನೀಡಿ ಎಂದು ಯಶ್​​ ಮನವಿ ಮಾಡಿದ್ದಾರೆ.  

ಕೇವಲ ಯಶ್ ಅಷ್ಟೇ ಅಲ್ಲದೇ, ಕನ್ನಡದ ಇನ್ನಿತರ ನಟ ನಟಿಯರು ಸಹ ಈ ಅಭಿಯಾನಕ್ಕೆ ಬೆಂಬಲಲ ಸೂಚಿಸುತ್ತಿದ್ದಾರೆ. ಇದರಿಂದ ಕಾವೇರಿ ಕೂಗು ಅಭಿಯಾನ ಜೋರಾಗಿ ಕೇಳಿ ಬರುತ್ತಿದೆ. ಸದ್ಗುರು ಅಂದರೆ ಹಾಗೇನೇ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಅದನ್ನು ತುಂಬಾ ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರೋರು. ಈ ಹಿಂದೆ ರ್ಯಾಲಿ ಫಾರ್ ರಿವರ್ ಮಾಡಿ ಇಡೀ ದೇಶದಾದ್ಯಂತ ಸುದ್ದಿ ಆಗಿದ್ದರು.



మరింత సమాచారం తెలుసుకోండి: