ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರಿಗೆ ಇದೀಗ ಕಂಟಕ ಎದುರಾಗಿದೆ. ಹೌದು ಅವರ ವಿರುದ್ಧ 1984ರ ಸಿಕ್ಖ್ ವಿರೋಧಿ ದಂಗೆಗೆ ಸಂಬಂಧಿಸಿದ ಏಳು ಪ್ರಕರಣಗಳಿಗೆ ಇದೀಗ ಮರುಜೀವ ಬಂದಿದೆ. ಯಾಕೆಂದರೆ ಗೃಹ ಸಚಿವಾಲಯ ಈ ಕೇಸುಗಳನ್ನು ಪುನಃ ತೆರೆದಿದೆ. ಅಲ್ಲದೇ ಒಂದು ಪ್ರಕರನೆಯನ್ನು ಹೊರಡಿಸಿದೆ. ಅದೇನಪ್ಪ ಅಂದರೆ, ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳು, ಗುಂಪುಗಳು ಹಾಗೂ ಸಂಘ ಸಂಸ್ಥೆಗಳು ಯಾವುದೇ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಬಹುದು ಎಂದು ಗೃಹ ಸಚಿವಾಲಯ ಹೇಳಿದೆ.


ಹೌದು ಸಿಖ್ ದಂಗೆಗೆ ಸಂಬಂಧಪಟ್ಟ ಏಳು ಪ್ರಕರಣಗಳನ್ನು ಇದೀಗ ಮರು ತೆರೆಯಲಾಗಿದೆ. ಅಷ್ಟಕ್ಕೂ ನಿಮಗೆ ಗೊತ್ತಿರಬಹುದು. ಆವತ್ತಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕವೇ ಸಿಖ್ ವಿರೋದಿ ಗಲಭೆ ಆರಂಭ ಆಗಿತ್ತು. ಈ ಸಂದರ್ಭದಲ್ಲಿ ರಕಬ್‌ಗಂಜ್ ಗುರುದ್ವಾರಕ್ಕೆ ಮುತ್ತಿಗೆ ಹಾಕಲಾಗಿತ್ತು. ಆ ಗುಂಪಿನಲ್ಲಿ ಕಮಲನಾಥ್ ಅವರೂ ಸಹ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬನ ಪ್ರತಿಪಾದನೆಗೆ ಸಂಬಂಧಿಸಿದ ಪ್ರಕರಣವಿದು.


ಅಷ್ಟಕ್ಕೂ ಹೀಗೆ ಪ್ರತ್ಯಕ್ಷದರ್ಶ ಸಾಕ್ಷಿ ಹೇಳಿಕೆ ನೀಡಿದ್ದವರಾರು ಗೊತ್ತೇ? ಅಂದು ಅಪರಾಧ ವರದಿಗಾರ ಆಗಿದ್ದ ಸಂಜಯ್ ಸೂರಿ. ಇವರು ಹೌದು ಕಮಲನಾಥ್ ಅವರು ಈ ಗಲಭೇಯಲ್ಲಿ ಭಾಗಿಯಾಗಿದ್ದರು ಎಂದಿದ್ದರು. ಆದರೆ ಅದನ್ನು ಹಿರಿಯ ಕಾಂಗ್ರೆಸ್ ಮುಖಂಡರು ನಿರಾಕರಿಸಿದ್ದರು. ಯಾಕೆಂದರೆ ಈ ಪಪ್ರಕರಣದ ಎಫ್‌ಐಆರ್‌ ನಲ್ಲಿ ಕಮಲನಾಥ್ ಅವರ ಹೆಸರಿಲ್ಲ. ಆದರೆ ಇದೀಗ ತನಿಖೆ ನಡೆದರೆ ಸತ್ಯ ಬಯಲಾಗಲಿದೆ.


ಕೇವಲ ಇಷ್ಟೇ ಅಲ್ಲದೇ, ಕಮಲನಾಥ್ ಅವರ ಮೇಲೆ ಮತ್ತೊಂದು ಆರೋಪವಿದೆ. ಅದೇನಪ್ಪ ಅಂದರೆ,  ಏಳು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಶಾಮೀಲಾಗಿದ್ದ ಐದು ಆರೋಪಿಗಳಿಗೆ ಕಮಲ್‌ನಾಥ್ ಆಶ್ರಯ ನೀಡಿದ್ದರು ಎನ್ನಲಾಗಿದೆ. ಹೌದು ಈ ಹೇಳಿಕೆಯನ್ನು ದಿಲ್ಲಿ ಶಾಸಕ ಮಜೀಂದರ್ ಸಿಂಗ್ ಸಿಸ್ರಾ ನೀಡಿದ್ದರು.


ಹೀಗಾಗಿ ಈ ಎರಡು ಸಾಕ್ಷಿ ಹಾಗೂ ಇನ್ನಿತರೇ ಸಾಕ್ಷಿಯ ಕಾರಣಗಳಿಂದ ಕಮಲನಾಥ್ ಅವರಿಗೆ ಸಂಕಟ ಎದುರಾಗಿದೆ. ಇದೀಗ ಇಂಗ್ಲೆಂಡಿನಲ್ಲಿರುವ ಸಂಜಯ್ ಸೂರಿ ಹಾಗೂ ಪಾಟ್ನಾದಲ್ಲಿರುವ ಮುಕ್ತಿಯಾರ್ ಸಿಂಗ್ ಎಂಬ ಇಬ್ಬರು ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಂಡಿ ತನಿಖೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಅವರಿಬ್ಬರೂ ಈಗಾಗಲೇ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲಿದ್ದಾರೆ ಎನ್ನಲಾಗಿದೆ.


మరింత సమాచారం తెలుసుకోండి: