ಮಾಜಿ ಪ್ರಧಾನಿ ದೇವೇಗೌಡ ಅವರ ಬೀಗರು ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಆದ ಪ್ರೊಫೆಸರ್ ಕೆ.ಎಸ್.ರಂಗಪ್ಪ ಅವರಯ ಮನೆಯಲ್ಲಿ ಇಂದು ಸಿದ್ದರಾಮಯ್ಯ ಅವರು ಉಪಹಾರ ಸೇವನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ. ಹೀಗಾಗಿ ಇದು ಸದ್ಯಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 


ಪ್ರೊಪೆಸರ್ ರಂಗಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗು ಸ್ಪರ್ಧೇ ಮಾಡಿ ಸೋತಿದ್ದರು. ನಂತರ ಜೆಡಿಎಸ್ ಪಕ್ಷದೊಂದಿಗೆ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ. ಆದರೆ ಇದೀಗ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಯ ರಂಗಪ್ಪ ಅವರ ಮೆನೆಗ ಹೋಗಿರುವುದು ನಿಜಕ್ಕೂ ಚರ್ಚೆಯನ್ನೇ ಹುಟ್ಟು ಜಾಕಿದೆ. 


ಇದ್ದಕ್ಕಿಂತೆಯೇ ಸಿದ್ದರಾಮಯ್ಯ ಅವರು ಅದ್ಯಾಕೆ ರಂಗಪ್ಪ ಅವರ ಮನೆಗೆ ಹೋದರು? ಅಲ್ಲಿ ಯಾಕೆ ಉಪಹಾರ ಸೇವಿಸಿದರು? ಏನಾದರೂ ರಾಜಕೀಯ ಬೆಳವಣಿಗೆ ನಡೆದಿದ್ಯಾ ಎನ್ನುವ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.  ಆದರೆ ಸಿದ್ದರಾಮಯ್ಯ ಅವರು ರಂಗಪ್ಪ ಅವರ ಜಿತೆಗೆ ಯಾವೆಲ್ಲ ವಿಚಾರವನ್ನು ಚರ್ಚೆ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ನಿಖರವಾದಂತಹ ಮಾಹಿತಿಯು ತಿಳಿದು ಬಂದಿಲ್ಲ ಎನ್ನಲಾಗಿದೆ. 


ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಪ್ರೊಫೆಸರ್ ಕೆ. ರಂಗಪ್ಪ ಮಾತನಾಡಿದ್ದಾರೆ. ಸೌಹಾರ್ದಯುತ ಸಂಬಂಧದಿಂದಾಗಿ ಸಿದ್ದರಾಮಯ್ಯ ಮನೆಗೆ ಬಂದಿದ್ದು, ಇಲ್ಲಿ ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಿಲ್ಲ ಎಂದು ರಂಗಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೇ ವೇಳೆ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಹೌದು ಜೆಡಿಎಸ್ ಪಕ್ಷ ತಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ರಂಗಪ್ಪ ಅವರು ಕಾಂಗ್ರೆಸ್ ಸೇರುತ್ತಾರೆಯೇ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ.


ಹೌದು ರಾಜಕೀಯ ಚತುರ ಸಿದ್ದರಾಮಯ್ಯ, ಹಾಗೂ ರಂಗಪ್ಪ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ರಂಗಪ್ಪ ಅವರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆಯೇ ಎನ್ನುವ ಅನುಮಾನಗಳೂ ದಟ್ಟವಾಗಿ ಕಾಡುತ್ತಿವೆ. ಅದರೆ  ಮುಂದಿನ ದಿನಗಳಲ್ಲಿ ಇವೆಲ್ಲವೂ ಗೊತ್ತಾಗಲಿದೆ. ಸದ್ಯಕ್ಕೆ ಕಾದು ನೋಡಬೇಕಿದೆ ಅಷ್ಟೇ. 


మరింత సమాచారం తెలుసుకోండి: