ಮನಮೋಹನ್ ಸಿಂಗ್ ಅವರನ್ನು ಕೆಲವರು ಮೌನ ಮೋಹನ್ ಸಿಂಗ್‌ ಎಂದೇ ಹೀಯಾಳಿಸುತ್ತಾರೆ. ಅವರು ಸೋನಿಯಾ ಗಾಂಧಿಯ ಅವರ ಕೈಗೊಂಬೆ ಎಂದು ಕರೆಯುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ರಬ್ಬರ್ ಸ್ಟ್ಯಾಫ್ ಆಗಿದ್ದರು ಎನ್ನಲಾಗಿತ್ತು. ಅಲ್ಲದೇ ಮನಮೋಹನ್ ಸಿಂಗ್ ಅವರನ್ನು ಸೌಮ್ಯ ಸ್ವಭಾವದ ವ್ಯಕ್ತಿ ಎಂದೇ ಗುರುತಿಸಲಾಗುತ್ತಿದೆ. ಆದರೆ ಇದೀಗ ಅಚ್ಚರಿ ಪಡುವ ಅಂಶ ಹೊರ ಬಿದ್ದಿದೆ.


ಹೌದು. ಮನಮೋಹನ್ ಸಿಂಗ್ ಅವರು ಎಷ್ಟು ಸೌಮ್ಯ ಸ್ವಭಾವದವರೋ, ದೇಶದ ವಿಚಾರ ಅಂತ ಬಂದಾಗ ಅವರು ಅಷ್ಟೇ ಕಠೋರ ಆಗುತ್ತಿದ್ದರು ಎನ್ನುವ ಅಂಶವನ್ನು ಇದೀಗ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕೆಮರೂನ್ ಅವರು ಬಹಿರಂಗ ಪಡಿಸಿದ್ದಾರೆ. ಹೌದು ಕ್ಯಾಮರೂನ್ ಅವರು ತಮ್ಮ ಆತ್ಮ ಚರಿತ್ರೆ ಬಹಿರಂಗ ಮಾಡಿದ್ದಾರೆ. ಅದರಲ್ಲಿ ಮನಮೋಹನ್ ಸಿಂಗ್ ಅವರ ಬಗ್ಗೆಯೂ ಬರೆದಿದ್ದಾರೆ.


ಹೌದು ಸಾಧು ಮನುಷ್ಯ ಎಂದೇ ಖ್ಯಾತರಾದ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪಾಕಿಸ್ತಾನದ ಮೇಲೆ ಸಮರ ಸಾರಲು ಮುಂದಾಗಿದ್ದರು  ಎಂದು ಅವರು ಹೇಳಿದ್ದಾರೆ. ಹೌದು ಫಾರ್ ದಿ ರೆಕಾರ್ಡ್ ಎಂಬ ಆತ್ಮಚರಿತ್ರೆಯಲ್ಲಿ 52 ವರ್ಷದ ಕ್ಯಾಮರೂನ್ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಮಾಹಿತಿಯನ್ನ ಬಿಚ್ಚಿಟ್ಟಟಿದ್ದಾರೆ. 


ಇನ್ನೂ ಅದರಲ್ಲೂ ವಿಶೇಷ ಎಂದರೆ 2010ರಿಂದ 2016ರ ವರೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನೆನಪುಗಳನ್ನು ಡೇವಿಡ್ ಕ್ಯಾಮರೂನ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಭಾರತ ಎದುರಿಸುವ ಬೆದರಿಕೆಗಳ ಬಗ್ಗೆ ಅವರು ತುಂಬಾ ಕಠಿಣವಾಗಿದ್ದರು ಎಂದಿದ್ದಾರೆ.


ಹೌದು ಒಂದು ಸಾರಿ ಡೇವಿಡ್ ಕ್ಯಾಮರೂನ್ ಅವರು ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಆಗ ಮುಂಬೈ ಅಂತಹ ಮತ್ತೊಂದು ಉಗ್ರ ದಾಳಿ ನಡೆದರೆ, ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಬ್ರಿಟನ್ ಮಾಜಿ ಪ್ರಧಾನಿ ಉಲ್ಲೇಖಿಸಿದ್ದಾರೆ. 


మరింత సమాచారం తెలుసుకోండి: