ತುಮಕೂರು: ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನವರು ಸಿ ಎಂ ಆಗಬೇಕೆಂದು ಕುಟುಂಬ ಸದಸ್ಯರು ಹರಕೆ ಹೊರುವುದು ಸಾಮಾನ್ಯ. ಆದರೆ ಯಡಿಯೂರಪ್ಪ ಅವರ ಆಪ್ತ ಸಹಾಯಕ ಕೂಡ ಬಿಎಸ್‌ವೈ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತಿದ್ದರು. ಅದನ್ನೀಗ ಯಡಿಯೂರಪ್ಪ ತೀರಿಸಿಲು ಟೆಂಪಲ್ ರನ್ ಶುರು ಮಾಡಿದ್ದಾರೆ. 
 
 ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಆಪ್ತ ಸಹಾಯಕ ಹಾಗೂ ಸೆಕ್ರೆಟರಿ ಸಂತೋಷ್ ಅವರು ಯಡಿಯೂರಪ್ಪ ಸಿ ಎಂ ಆಗಲೂ ಬಹು ಮುಖ್ಯ ಪಾತ್ರ ವಹಿಸಿದ್ದರು. ತಮ್ಮ ಪ್ರಾಣದ ಹಂಗನ್ನು ತೊರೆದು ಅತೃಪ್ತ ಶಾಸಕರನ್ನು ಮುಂಬೈ ಪ್ಲೈಟ್ ಹತ್ತಿಸಿದ್ದರು. ಆದ್ದರಿಂದಲೇ ಬಹುತೇಕ ಸಮ್ಮಿಶ್ರ ಸರ್ಕಾರ ಉರುಳಿತು. ಇದರ ಯಶಸ್ಸಿನ ಬಹುಪಾಲು ಸಂತೋಷ್ ಗೆ ಸಲ್ಲಬೇಕು. 


ಇದೆಲ್ಲಾ ನಡೆಯುವ ಮುಂಚೆಯೇ ಯಡಿಯೂರಪ್ಪ ಆಪ್ತ ಸಂತೋಷ್ ಮಾಡಿಕೊಂಡಿದ್ದ ಹರಕೆಯನ್ನು ಶನಿವಾರ ತೀರಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಬೇಕು ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಹೊನ್ನಾಂಬಿಕ ದೇವಿಯಲ್ಲಿ ಅವರ ಆಪ್ತ ಸಹಾಯಕ ಸಂತೋಷ್ ಹರಕೆ ಮಾಡಿಕೊಂಡಿದ್ದರು.ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಎರಡು ತಿಂಗಳು ಸಮೀಪಿಸುತ್ತಿದ್ದಂತೆ, ಶನಿವಾರ ಖುದ್ದಾಗಿ ಆಗಮಿಸಿ ಹೊನ್ನಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.


ಮಧ್ಯಾಹ್ನ 12.40 ರ ಸುಮಾರಿಗೆ ಆಗಮಿಸಿದ ಅವರು ಹೊನ್ನಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಆಪ್ತ ಸಹಾಯಕ ಸಂತೋಷ್‌ ಕೂಡ ಹಾಜರಿದ್ದರು. ಹೊನ್ನಾಂಬಿಕಾ ದೇವಿ ದೇಗುಲದಲ್ಲಿ ಪೂಜೆ ಮಾಡಿಸಿ ಹರಕೆ ತೀರಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ, ಯಡಿಯೂರು ಸಿದ್ದಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಲು ಪ್ರಯಾಣ ಬೆಳೆಸಿದರು ಎಂಬ ಸುದ್ದಿ ತಿಳಿದು ಬಂದಿದೆ.  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೊದಲಿನಿಂದಲೂ ದೈವಭಕ್ತಿ ಉಳ್ಳವರು. ಆದ್ದರಿಂದಲೇ ಪ್ರಮಾಣ ವಚನ ಸ್ವೀಕರಿಸುವ ಮುನ್ನವು ಸಹ ಸರಿಯಾದ ಸಮಯ, ಮುಹೂರ್ತ ನಿಗದಿ ಪಡಿಸಿದ್ದರು.  ಅದರ ಮೇಲಿಂದ ಮೇಲೆ ದೇಗುಲ ಗಳಿಗೆ ಭೇಟಿ ನೀಡಿದ್ದರು.


మరింత సమాచారం తెలుసుకోండి: