ಬೆಂಗಳೂರು:  ಯಡಿಯೂರಪ್ಪನವರು ಈ ಬಾರಿಯ ಶತಾಯ ಗತಾಯ ನಾನು ಮುಖ್ಯಮಂತ್ರಿ ಆಗಲೇ ಬೇಕೆಂದು ಆಪರೇಷನ್ ಕಮಲ ಮಾಡಿ, ಕೊನೆಗೂ ರಾಜ್ಯದಲ್ಲಿ 4ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ದುಖ:ದ ಮಡಿಲಲ್ಲಿಯೇ  ರಾಜೀನಾಮೆ ನೀಡಿದ್ದರು. ಇದೆಲ್ಲಾ ನಡೆದು ಬರೋಬ್ಬರಿ  ಒಂದೂವರೆ ತಿಂಗಳೇ ಕಳೆಯಿತು. ಇದೀಗ ಉಪ ಚುನಾವಣೆಗೆ ಡಿಸೆಂಬರ್ 05 ಎಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಇದೀಗ ಕುಮಾರಸ್ವಾಮಿ ಅವರು ಮತ್ತೇ ಉಪ ಚುನಾವಣೆಗೆ ತಯಾರಾಗುತ್ತಿದ್ದಾರೆ.  ಇತ್ತೀಚೆಗೆ ಅವರು ಯಡಿಯೂರಪ್ಪ ಅವರ ಕುರಿತು ನೀಡಿದ ಟಾಂಗ್ ಭಾರೀ ಟ್ರೋಲ್ ಆಗುತ್ತಿದೆ. 


ತಂತಿ ಮೇಲೆ ನಿಂತು ಆಡಳಿತ ನಡೆಸುತ್ತಿರುವ ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಹತ್ತು ಬಾರಿ ಯೋಚನೆ ಮಾಡಬೇಕು ಎಂಬ ಸಿಎಂ ಬಿಎಸ್​ ಯಡಿಯೂರಪ್ಪ ಮಾತಿಗೆ ವ್ಯಂಗ್ಯವಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ತಂತಿ ಮೇಲಿಂದಲೇ ಪ್ರವಾಹ ಸಂತ್ರಸ್ತರ ಜನರ ಕಡೆಗೂ ನೋಡಿ ಎಂದು ಕುಟುಕಿದ್ದಾರೆ.  ಅತೃಪ್ತ ಶಾಸಕರನ್ನು ಆಮಿಷಕ್ಕೆ ಒಳಗಾಗುವಂತೆ ಮಾಡಿ ಮೈತ್ರಿ ಸರ್ಕಾರ ಬೀಳಿಸಿ ಸಿಎಂ ಆಗಿದ್ದೀರಾ. ಈಗ ಅತೃಪ್ತ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವೆ ಸಿಲುಕಿಕೊಂಡು ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಿದ್ದಾರಾ. ಅತೃಪ್ತ ಶಾಸಕರನ್ನು‌ ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ ಸಿಎಂ ‌ಪದವಿಗೆ ಏರಿದ ಯಡಿಯೂರಪ್ಪನವರೇ ತಂತಿ‌ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ‌. ಮನೆ ಮಠ ಕಳೆದುಕೊಂಡು ‌ಬೀದಿಗೆ ಬಿದ್ದಿರುವ ಅವರ ಬದುಕನ್ನು ನಿಮ್ಮ ಸರ್ಕಾರಕ್ಕೆ ‌ಕಟ್ಟಿ ಕೊಡೋಕೆ ಸಾಧ್ಯವಾಗದಿದ್ದರೆ‌, ಜನರೇ ನಿಮ್ಮನ್ನು 'ತಂತಿ‌' ಮೇಲಿಂದ ಇಳಿಸುತ್ತಾರೆ.


ತಂತಿ ಮೇಲೆ ನೀವು ನಡೆಯಿರಿ. ಹಾಗೇಂದ ಮಾತ್ರಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನಿದ್ದಾರೆ ನಿಮಗೆ ಆಪತ್ತು. ನೀವು ಸಿಎಂ ಆದ ಬಳಿಕ ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದೀರಾ. ಅವರ ಕಡೆಗೂ ಒಂದು ಚೂರು ಗಮನಹರಿಸಿದೆ. ಜನರೇ ನಿಮ್ಮನ್ನು ತಂತಿ ಮೇಲಿಂದ ನಿಮ್ಮನ್ನು ಕೆಳಗೆ ಇಳಿಸುತ್ತಾರೆ ಎಂದು ಟಾಂಗ್​ ನೀಡಿದ್ದಾರೆ.


మరింత సమాచారం తెలుసుకోండి: