ಮುಂಬೈ: ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಯುವಕರು ಕೇಂದ್ರ ಸರ್ಕಾರವನ್ನು ಕೆಲಸದ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರ ಚಂದ್ರನ ಕಡೆ ತೋರಿಸುತ್ತಾರೆ. ದೇಶದ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು.

ತ್ತೀಚಿಗೆ ಪ್ರಧಾನಿ ಮೊದಿ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದರು, ಈ ಭೇಟಿಯಲ್ಲಿ ಅವರು 2017ಚೀನಾದ ಸೈನ್ಯ ಭಾರತೀಯ ಭೂಪ್ರದೇಶದ ಮೇಲೆ ಅಕ್ರಮಣ ಮಾಡಿದರ ಬಗ್ಗೆ ಕೇಳಿಲ್ಲ. ಮೋದಿ ಅವರು ಮೇಕ್ ಇನ್ ಇಂಡಿಯಾ ಮಾಡುತ್ತಿಲ್ಲ. ಬದಲಾಗಿ ಮೇಕ್ ಇನ್ ಚೀನಾ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.  ರಾಷ್ಟ್ರದ ಯುವಕರ ಉದ್ಯೋಗ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ, ಚಂದ್ರಯಾನ, 370ನೇ ವಿಧಿ ರದ್ದು ಈ ರೀತಿಯ ವಿಚಾರಗಳನ್ನು ತೋರಿಸಿ ಜನರ ಗಮನವನ್ನು ಬೇರೆ ಕಡೆ ಸಳೆಯುವುದು ಮಾಧ್ಯಮ, ಮೋದಿ ಮತ್ತು ಅಮಿತ್ ಶಾ ಅವರ ಕೆಲಸವಾಗಿದೆ. 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಸದಾ ಮಾತನಾಡುವ ಕೇಂದ್ರ ಸರ್ಕಾರ ದೇಶದ ಸಮಸ್ಯೆ ಬಗ್ಗೆ ಮೌನ ವಹಿಸಿದೆ ಎಂದರು. ಇ

ದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು 15ಜನ ಶ್ರೀಮಂತರ 5.5ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆಗ ಈ ಮಾಧ್ಯಮಗಳು ಮೋದಿಯನ್ನು ಪ್ರಶ್ನೆ ಮಾಡಲಿಲ್ಲ.ಮೋದಿ ಅವರ ನೋಟು ಅಮಾನೀಕರಣದಿಂದ ಯಾರಿಗೆ ಲಾಭ ಸಿಕ್ಕಿತು. ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು. ಪ್ರಧಾನಿ ಅವರ ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಚಂದ್ರನ ಬಳಿ ರಾಕೆಟ್ ಕಳುಹಿಸುವುದರಿಂದ ಮಹಾರಾಷ್ಟ್ರದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಮೋದಿ ಅವರ ಯೋಜನೆಗಳ ಮೇಲೆ ಸಿಡಿಲಬ್ಬರದಂತೆ ಗುಡುಗಿದ್ದಾರೆ.


మరింత సమాచారం తెలుసుకోండి: