ಬೆಂಗಳೂರು: ಬಿಜೆಪಿ ಹೈಕಮಾಂಡ್ ಅಮಿತ್ ಶಾ ಅವಕಾಶ ನೀಡಿದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗೋಕೆ ನಾನು ರೆಡಿ ಇದ್ದೇನೆ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಉಮೇಶ್ ಕತ್ತಿ ತಿಳಿಸಿದ್ದಾರೆ.  ಇದಕ್ಕೆ ಪೂರಕವಾಗಿರುವಂತೆ  ಪ್ರಭಾಕರ್ ಕೋರಿ ಅವರು ಉಮೇಶ್ ಕತ್ತಿ ಸಿಎಂ ಆಗಲಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಪ್ರತಿಕ್ರಿಯಿಸಿದ ಉಮೇಶ್ ಕತ್ತಿ ಅವರು ನನಗೆ  ಅವಕಾಶ ಸಿಕ್ಕರೆ ನಿಮ್ಮ ಎದುರಿನಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದರು. 


ಬುಧವಾರ ಬೆಳಗಾವಿಯಲ್ಲಿ  ಮಾತಾಡಿದ ಉಮೇಶ್​​ ಕತ್ತಿ, ಈಗಾಗಲೇ ರಾಜ್ಯಕ್ಕೆ ಸಿಎಂ ಇದ್ದಾರೆ. ಮೂರು ಜನ ಡಿಸಿಎಂ, ರಾಜ್ಯಪಾಲರು ಇದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಇನ್ಯಾವ ದೊಡ್ಡ ಹುದ್ದೆ ಇದೆಯೋ ಗೊತ್ತಿಲ್ಲ. ಇನ್ನೂ ದೇಶದಲ್ಲೇ ಯಾವುದಾದರೂ ದೊಡ್ಡ ನೀಡಿದರೆ ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ನನ್ನ ಮೇಲೆ ವಿಶೇಷ ಪ್ರೀತಿಯಿದೆ. ಮುಂದಿನ ಡಿಸೆಂಬರ್​​ನೊಳಗೆ ದೊಡ್ಡ ಹುದ್ದೆ ನೀಡುತ್ತೇನೆ ಎಂದಿದ್ದಾರೆ. ಆದರೆ, ನಾನು ಹೇಳಿದಂತೆ ಇಷ್ಟು ಹುದ್ದೆಗಳಿರುವಾಗ, ಇನ್ಯಾವ ದೊಡ್ಡ ಹುದ್ದೆ ಇದೆಯೋ ಖಂಡಿತಾ ಗೊತ್ತಿಲ್ಲ. ನನಗೆ ಮಂತ್ರಿಯಾಗುವ ಯೋಗ್ಯತೆ ಇದೆ.


ಹಾಗಾಗಿ ಸಿಎಂ ಈ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯವನ್ನು ಸಿಎಂ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರವೂ ಸಹಾಯ ಮಾಡುತ್ತಿದೆ. ಹಾಗಾಗಿ ಕನ್ನಡಿಗರಿಗೆ ಒಳ್ಳಯದಾಗಲಿ ಎಂದಷ್ಟೇ ಹೇಳುತ್ತೇನೆ. ಇನ್ನೂ ಉಪಚುನಾವಣೆಗೆ ಯಾವ ಕ್ಷೇತ್ರದ ಜವಾಬ್ದಾರಿಯೂ ನೀಡಿಲ್ಲ. ಏನೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ ಮೋಡ ಬಿತ್ತನೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಕ್ಕೆ ಸಿಎಂ ಉತ್ತರ ನೀಡಲಿದ್ದಾರೆ ಎಂದರು. ಹಾಗೇನಾದರೂ ಅವ್ಯವಹಾರ ನಡೆದಿದ್ದರೆ, ಸಿಎಂ ತನಿಖೆ ಮಾಡಿಸಲಿದ್ದಾರೆ ಎಂದು ಸಹ ಪ್ರತಿಕ್ರಿಯಿಸಿದರು. ಸಿಎಂ ಅವರೇ ಭರವಸೆ ನೀಡಿರುವುದರಿಂದ ಉಮೇಶ್ ಕತ್ತಿ ಅವರ ವಿಶ್ವಾಸ ಹೆಚ್ಚಾಗಿದೆ. ದೊಡ್ಡ ಹುದ್ದೆಯ ಕನಸು ಏನಾಗುತ್ತದೆ ಎಂಬುದು ಕಾದು ನೋಡ ಬೇಕಾಗಿದೆ.


మరింత సమాచారం తెలుసుకోండి: