ಅರ್ಜುನ ಕೃಷ್ಣ ಅಣ್ಣ ಯುಧಿಷ್ಠಿರನು ಹೇಳಬೇಕಾದ್ದನ್ನೆಲ್ಲಾ ನಿನಗೆ ಹೇಳಿಬಿಟ್ಟಿದ್ದಾನೆ ಕೌರವರು ನಮ್ಮನ್ನು ಮೊದಲಿನಿಂದಲೂ ನಮ್ಮನ್ನು ಅಪಾಯಗಳಲ್ಲಿ ಸಿಕ್ಕಿಸುತ್ತಿದ್ದಾರೆ , ಅದಕ್ಕೆ ಫಲವೇನೂ ಆಗಿಲ್ಲ. ನೀನು ಈಗ ಪಾಂಡವ ಕೌರವರ ನಡುವೆ ಸಂಧಾನ ನಡೆಸಿದರೆ ಸಫಲವಾದರೂ ಆಗಬಹುದು , ಒಟ್ಟಿನಲ್ಲಿ ಹೇಗೋ ಶತ್ರುಗಳಿಂದ ಸಮಾಧಾನ ದೊರಕು ವಂತೆ ಮಾಡು ; ನೀನು ಎರಡು ಕಡೆಗೂ ಬೇಕಾದವನು . ನೀನು ಅಲ್ಲಿಗೆ ಹೋದರೆ ಸಾಕು , ನಮ್ಮ ಕಾರ್ಯ ಕೈಗೂಡುತ್ತದೆ. 

 

ಎಲ್ಲವೂ ನಿನ್ನ ಇಷ್ಟದಂತೆ ನಡೆಯುವ ಹಾಗಾಗುತ್ತದೆ ಎಂದು ನಾನು ತಿಳಿದಿದ್ದೇನೆ . ಸಂಧಿಯಾಗಲಿ , ನೀನು ಒಪ್ಪಿದ್ದು ಮತ್ತೇನೇ ಆಗಲಿ , ಅದು ನಮಗೆ ಸಮ್ಮತ , ಧರ್ಮರಾಜನಿಗೆ ಮೋಸಮಾಡಿ ನಮ್ಮೆ ಲ್ಲರನ್ನು  ಗೋಳಾಡಿಸಿ ನಮ್ಮನ್ನೆಲ್ಲಾ ಕಾಡಿಗೆ ಅಟ್ಟಿದವನನ್ನು ಸಕಲ ಬಂಧು ಬಾಂಧವರೊಡನೆ ಕೊನೆ ಗಾಣಿಸಲೇಬೇಕು . ಮೃದುವಾದ ಮಾರ್ಗದಿಂದಾಗಲಿ ಬೇರೆ ಮಾರ್ಗದಿಂದಾಗಲಿ , ಹೋದ ಕೆಲಸವನ್ನು ಮಾಡಿ ಕೊಂಡು ಬರುವುದು ಮುಖ್ಯ . ಅವರನ್ನು ಕೊಲ್ಲುವುದೇ ಉತ್ತಮ ಎಂದು ನೀನು ತಿಳಿಯು ವುದಾದರೆ ಅದನ್ನೇ ಬೇಗ ಆಗಿಸಿಬಿಡು. 

 

ಇದಕ್ಕೆಲ್ಲ ವಿಚಾರ ಮಾಡಬೇಡ ; ಆವನು ನಮ್ಮಲ್ಲಿ ಸಲಗೆಯಿಂದ ನಡೆದುಕೊಳ್ಳುತ್ತಾನೆ ಎಂದು ನಾನೇನೂ ತಿಳಿದುಕೊಂಡಿಲ್ಲ . ಆದ್ದರಿಂದ ಯಾವುದು ಸರಿಯೆಂದು ನೀನು ಶಿಳಿಯುತ್ತೀಯೋ! ಯಾವುದು ನಮಗೆ ಹಿತವೋ ಅದನ್ನು ಬೇಗ ಮಾಡಿಬಿಡು ; ಆಮೇಲೆ ಅದರಂತೆ ನಾವು ನಡೆಯುತ್ತೇವೆ ' ಎಂದನು . - ಕೃಷ್ಣನು ' ಪ್ರಪಂಚದ ಕೆಲಸಗಳೆಲ್ಲಾ ದೈವ ಮತ್ತು ಮನುಷ್ಯ ಪ್ರಯತ್ನ ಇವೆರಡರಿಂದಲೂ ನಡೆಯ ಬೇಕಾದವುಗಳು ಅದರ ಅರಿವು ನನಗಿದೆ. 

 

ಕೃಷ್ಣ ರೈತನು ನೆಲವನ್ನು ಸರಿಪಡಿಸಿ ಗೊಬ್ಬರ ಗೊಡು ಹಾಕಿದರೂ ಮಳೆ ಬರದಿದ್ದರೆ ಪಸಲಿಲ್ಲ ನಾವು ನೀರೆರೆದರೂ ದೈವವು ಪೈರನ್ನು ಒಣಗಿಸ ಬಹುದು ; ಆ ನೀರೂ ದೊರೆಯದಂತಾಗಬಹುದು . ನಾನೇನೂ ಪುರುಷಪ್ರಯತ್ನದಿಂದ ಏನು ಆಗಬಹುದೋ ಅದನ್ನು ಮಾಡುತ್ತೇನೆ : ದೈವ ನನ್ನ ಅಧೀನವಲ್ಲ . ಆ ದುರ್ಯೋಧನನ ಬುದ್ದಿ ದುರ್ಬುದ್ದಿ . ಅವನಿಗೆ ಸತ್ಯ ಬೇಡ : ಧರ್ಮ ಬೇಡ : ಅವನ ದುರ್ಬುದ್ದಿಯನ್ನು ಅವನ ಸ್ನೇಹಿತರಾದ ಕರ್ಣ ಶಕುನಿ ದುಶ್ಯಾಸನರು ಹೆಚ್ಚಿಸುತ್ತಾರೆ.

 

 

ಆಗ ಕೃಷ್ಣನು ಹೌದು ಅರ್ಜುನ ಆದ್ದರಿಂದ ದುರ್ಯೋಧನ ಸಮಾಧಾನದಿಂದ ರಾಜ್ಯವನ್ನು ಬಿಟ್ಟುಕೊಡುವುದಕ್ಕೆ  ಒಪ್ಪುವುದಿಲ್ಲ , ಅದಕ್ಕೆ ದಂಡನೆಯೇ ಮದ್ದು : ಮಾತಿನಿಂದಲೂ ಕೆಲಸದಿಂದಲೂ ಎಷ್ಟೆಲ್ಲಾ ಸಾಧ್ಯವೋ ಅದನ್ನು ಮಾಡುತ್ತೇನೆ ; ಆದರೆ ನನಗೇನೋ ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯಿಲ್ಲ : ಧರ್ಮರಾಜನಿಗೆ ಯಾವುದರಿಂದ ಹಿತವಾಗಬಹುದೋ , ನನಗೂ ಯಾವುದು ಒಪ್ಪಿಗೆಯಾಗುವುದೋ ಅದನ್ನು ನಾನು ಮಾಡುತ್ತೇನೆ ಎಂದನು. 

మరింత సమాచారం తెలుసుకోండి: