ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯ ಎಂದರೇ ಅದೇನೋ ಒಂಥರಾ ರೋಮಾಂಚನ. ಹೌದು ವಿಶ್ವ ಕ್ರಿಕೆಟ್ ನಲ್ಲಿ ಭಾರತ ಪಾಕಿಸ್ತಾನ ಪಂದ್ಯ ಎಂದರೇ ಹಾಗೆ. ಭಾರತ ಮತ್ತು ಪಾಕಿಸ್ತಾನ ನಡುವಣ ಬಾಂಧವ್ಯ ಸುಧಾರಿಸಲು ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನು ಮರಳಿ ಆರಂಭಿಸಬೇಕು ಎಂದು ಪಾಕ್‌ನ ಮಾಜಿ ಲೆಗ್‌ ಸ್ಪಿನ್‌ ಬೌಲರ್‌ ಮುಷ್ತಾಕ್‌ ಅಹ್ಮದ್‌ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಣ ಬಾಂಧವ್ಯ ಸುಧಾರಿಸಲು ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನು ಮರಳಿ ಆರಂಭಿಸಬೇಕು ಎಂದು ಪಾಕ್‌ನ ಮಾಜಿ ಲೆಗ್‌ ಸ್ಪಿನ್‌ ಬೌಲರ್‌ ಮುಷ್ತಾಕ್‌ ಅಹ್ಮದ್‌ ತಿಳಿಸಿದ್ದಾರೆ. 


ದುಬೈನಲ್ಲಿ ನಡೆಯುತ್ತಿರುವ 2ನೇ ಆವೃತ್ತಿಯ ಅಬುಧಾಬಿ ಟಿ10 ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಮುಷ್ತಾಕ್‌ ಅಹ್ಮದ್‌ ಈ ಸಂದರ್ಭದಲ್ಲಿ ಇಂಡೊ-ಪಾಕ್‌ ಕ್ರಿಕೆಟ್‌ ಸರಣಿ ಆಯೋಜನೆ ಬಗ್ಗೆ ಮಾತಿಗಿಳಿಸಿದ್ದಾರೆ. ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳನ್ನಾಡಿ ಹಲವು ವರ್ಷಗಳೇ ಕಳೆದಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. 2012-13ರಲ್ಲಿ ಭಾರತ ಆತಿಥ್ಯದಲ್ಲಿ ನಡೆದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಮತ್ತು 2 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯೇ ಇತ್ತಂಡಗಳ ನಡುವಣ ಕೊನೆಯ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯಾಗಿದೆ.


"ಪಾಕಿಸ್ತಾನ ಮತ್ತು ಭಾರತ ನಡುವೆ ಕ್ರಿಕೆಟ್‌ ಚಟುವಟಿಕೆ ಆರಂಭವಾಗಬೇಕು. ಎರಡೂ ರಾಷ್ಟ್ರಗಳ ನಡುವೆ ಹದಗೆಟ್ಟಿರುವ ರಾಜಕೀಯ ಸ್ಥಿತಿಗತಿಗಳ ಸುಧಾರಣೆಗೆ ಕ್ರಿಕೆಟ್‌ ಸೂಕ್ತ ಮಾರ್ಗೋಪಾಯವಾಗಿದೆ. ಕ್ರಿಕೆಟ್‌ ಆಟವು ಅಭಿಮಾನಿಗಳಲ್ಲಿ ಸಂಭ್ರಮ ಮತ್ತು ಪ್ರೀತಿ ನೆಲೆಸುವಂತೆ ಮಾಡುತ್ತದೆ," ಎಂದು ಮುಷ್ತಾಕ್‌ ಹೇಳಿದ್ದಾರೆ. "ಅಭಿಮಾನಿಗಳು ಇತ್ತಂಡಗಳ ನಡುವಣ ಕ್ರಿಕೆಟ್‌ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಮರಳಿ ದ್ವಿಪಕ್ಷೀಯ ಸರಣಿಗಳನ್ನು ನಡೆಸುವುದು ಉತ್ತಮ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲೆಲ್ಲಾ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್‌ ಹೊರಬಂದಿದೆ. ನಿಜ ಹೇಳುವುದಾದರೆ ಆ್ಯಷಸ್‌  ಟೆಸ್ಟ್‌ ಸರಣಿಗಿಂತಲೂ ಭಾರತ-ಪಾಕಿಸ್ತಾನ ಸರಣಿ ದೊಡ್ಡದು," ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇದೀಗ ಈ ಸುದ್ದಿ ಜಾಲತಾಣ ಭಾರೀ ವೈರಲ್ ಆಗಿದ್ದು ಪಂದ್ಯ ನಡೆಯಲಿ ಆಶಿಸುತ್ತಿದ್ದಾರೆ.


మరింత సమాచారం తెలుసుకోండి: