ಭಾರತೀಯ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾದ ನೂತನ ಅಧ್ಯಕ್ಷರಾದ ಸೌರವ್‌ ಗಂಗೂಲಿ ತಮ್ಮ ತವರೂರಿನಲ್ಲಿ ಡೇ ನೈಟ್ ಟೆಸ್ಟ್‌ ಪಂದ್ಯ ಆಯೋಜಿಸುವ ಕುರಿತಾಗಿ ಅಧಿಕೃತ ಮಾಹಿ ನೀಡಿದ ದಿನದಿಂದಲೂ, ಹೊನಲು ಬೆಳಕಿನಲ್ಲಿ ಆಡಲಾಗುವ ಪಿಂಕ್‌ ಬಾಲ್‌ ಆಟ ಹೇಗಿರಲಿದೆ! ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.


ಭಾರತ ತಂಡದ ಚೊಚ್ಚಲ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಈ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಆತಿಥ್ಯ ವಹಿಸಿದ್ದು ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕುತೂಹಲಕಾರಿಯಾಗಿದ್ದಾರೆ. ಇದಕ್ಕೆ ತೆರೆ ಎಳೆದಿರುವ ಈಡನ್‌ ಗಾರ್ಡನ್ಸ್‌ನ ಪಿಚ್‌ ಕ್ಯೂರೇಟರ್‌ ಸುಜನ್‌ ಮುಖರ್ಜಿ, ಡೇ-ನೈಟ್ ಟೆಸ್ಟ್‌ ಪಂದ್ಯಕ್ಕೆ ಪಿಚ್‌ ಸಂಪೂರ್ಣ ಸಿದ್ದಗೊಂಡಿದ್ದು, ಉತ್ತಮ ಸ್ಪರ್ಧಾತ್ಮಕ ಕ್ರಿಕೆಟ್‌ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಬಾಂಗ್ಲಾದೇಶ  ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಇಂದೋರ್‌ ಪಂದ್ಯ 3 ದಿನಗಳಲ್ಲಿ ಗೆದ್ದು 1-0 ಅಂತರದ ಮುನ್ನಡೆಯಲ್ಲಿದ್ದು, ಡೇ-ನೈಟ್‌ ಟೆಸ್ಟ್‌ ಗೆದ್ದು ತವರು ನೆಲದಲ್ಲಿ ಸತತ 12ನೇ ಟೆಸ್ಟ್‌ ಸರಣಿ ಗೆದ್ದ ವಿಶ್ವ ದಾಖಲೆ ಬರೆಯುವ ತುಡಿತದಲ್ಲಿದೆ.


ವಿಶೇಷತೆ ಏನಪ್ಪಾ ಅಂದ್ರೆ ಬಂಗಾಳ ಕೊಲ್ಲಿಯಲ್ಲಿಯಲ್ಲಿ ಬೀಸಿದ ಬುಲ್‌ಬುಲ್‌ ಚೆಂಡಮಾರುತ ಕಳೆದವಾರ ಕೋಲ್ಕತಾದ ಹಲವು ಭಾಗಗಳಲ್ಲಿ ಭಾರಿ ಹಾನಿಯನ್ನೇ ಉಂಟು ಮಾಡಿದೆ. ಹೆಚ್ಚು ಮಳೆ ಸುರಿದಿದ್ದರೂ ಕೂಡ ಈಡನ್‌ ಗಾರ್ಡನ್ಸ್‌ನಲ್ಲಿ ಪಿಚ್‌ ನಿರ್ಮಾಣ ಕಾರ್ಯ ಅಚ್ಚುಕಟ್ಟಾಗಿ ನಡೆಸಲಾಗಿದೆ. "ಕಳೆದ ವಾರ ಮಳೆ ಕೆಲ ಸಮಯ ಕೆಲಸವನ್ನು ಹಾಳುಮಾಡಿತ್ತು. ಆದರೀಗ ಹವಾಮಾನ ಸುಧಾರಿಸುತ್ತಿದ್ದು, ನಮ್ಮ ಕೆಲಸಕ್ಕೆ ಬೇಕಿದ್ದ ಅಗತ್ಯದ ಸಮಯ ಲಭ್ಯವಾಗಿದೆ. ಪಿಚ್‌ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಒದಗಿಸಲಾಗಿರುವ ಪಿಚ್‌ನಂತೆಯೇ ಪಂದ್ಯಕ್ಕೆ ಸಂಪೂರ್ಣ ಫಿಟ್‌ ಆಗಿದೆ. ಉತ್ತಮ ಸ್ಪರ್ಧಾತ್ಮಕ ಆಟ ಮೂಡಿ ಬರಲಿದೆ," ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಕ್ಯೂರೇಟರ್‌ ಮುಖರ್ಜಿ ತಿಳಿಸಿದ್ದಾರೆ. ಪಂದ್ಯಕ್ಕಾಗಿ ಪಿಚ್ ಸಿದ್ದವಾಗಿದ್ದು ಪಂದ್ಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


మరింత సమాచారం తెలుసుకోండి: