ಪ್ರಾವಿಡೆನ್ಸ್: ಪ್ರಸ್ತುತ ವಿಶ್ವ ಕ್ರಿಕೇಟ್ ನಲ್ಲಿ ಟೀಂ ಇಂಡಿಯಾ ನಂ 1 ತಂಡವಾಗಿ ಹೊರಹೊಮ್ಮಿದೆ. ಸತತವಾಗಿ ಸರಣಿಗಳನ್ನೇ  ಗೆಲ್ಲುವ ತಂಡವಾಗಿ ಗುರುತಿಸಿಕೊಂಡಿದೆ. ಇದರಂತೆ ಇದೀಗ ಭಾರತದ ಮಹಿಳಾ ತಂಡದವರು ಸಹ ಸತತವಾಗಿ 4 ನೇ ಗೆಲುವಿನ ನಗು ಬೀರಿದ್ದಾರೆ.  ವೆಸ್ಟ್ ಇಂಡೀಸ್ ಪ್ರವಾಸದ ಟಿ 20 ಸರಣಿಯಲ್ಲಿ ಭಾರತ ತಂಡ ಸತತ 4 ನೇ ಗೆಲುವು ದಾಖಲಿಸಿದೆ. ಇತ್ತೀಚೆಗೆ ನಡೆದ ಮಳೆಬಾಧಿತ 4 ಪಂದ್ಯದಲ್ಲಿ ಭಾರತ ತಂಡ 5 ರನ್​ಗಳಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.
 
4ನೇ ಟೀಟ್ವಂಟಿಯಲ್ಲಿ  ಮಳೆಯಿಂದಾಗಿ ತಲಾ 9 ಓವರ್​ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 7 ವಿಕೆಟ್​ಗೆ 50 ರನ್ ಪೇರಿಸಿತು. ಪೂಜಾ ವಸ್ತ್ರಾಕರ್ (10) ಮಾತ್ರ ಎರಡಂಕಿ ತಲುಪಿದರು. ಪ್ರತಿಯಾಗಿ ಭಾರತದ ಬಿಗಿ ಬೌಲಿಂಗ್ ದಾಳಿ ಹಾಗೂ ಶಿಸ್ತುಬದ್ಧ ಫೀಲ್ಡಿಂಗ್ ಎದುರು ವಿಂಡೀಸ್ ತಂಡ 5 ವಿಕೆಟ್​ಗೆ 45 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಸಂಪೂರ್ಣವಾಗಿ ಸ್ಪಿನ್ ಬೌಲರ್​ಗಳನ್ನೇ ಬಳಸಿ ವಿಂಡೀಸ್ ತಂಡವನ್ನು ಕಟ್ಟಿಹಾಕಿತು. ಕೊನೇ ಓವರ್​ನಲ್ಲಿ 13 ರನ್ ಗಳಿಸಬೇಕಾಗಿದ್ದ ವಿಂಡೀಸ್, 2 ವಿಕೆಟ್ ಕಳೆದುಕೊಂಡು 7 ರನ್​ಗಳನ್ನಷ್ಟೇ ಗಳಿಸಿತು. ಇದರೊಂದಿಗೆ ಭಾರತ ಸರಣಿಯಲ್ಲಿ 4-0 ಮುನ್ನಡೆ ದಾಖಲಿಸಿ ಇತಿಹಾಸ ಬರೆದಿದೆ. ಗೆಲ್ಲುವ ಕುದುರೆಯಾಗಿ  ಮುನ್ನುಗ್ಗುತ್ತಿದೆ. 
 
ತಂಡಗಳ ಅಂಕಪಟ್ಟಿ ಹೀಗಿದೆ:
 
ಭಾರತ: 9 ಓವರ್​ಗಳಲ್ಲಿ 7 ವಿಕೆಟ್​ಗೆ 50 (ಶೆಫಾಲಿ 7, ಜೆಮೀಮಾ 6, ವೇದಾ 5, ಹರ್ವನ್​ಪ್ರೀತ್ 6, ದೀಪ್ತಿ 4, ಪೂಜಾ 10, ತಾನಿಯಾ 8*, ಮ್ಯಾಥ್ಯೂಸ್ 13 ಕ್ಕೆ 3, ಫ್ಲೆಚರ್ 2ಕ್ಕೆ 2, ಗ್ರಿಮಂಡ್ 10ಕ್ಕೆ 2). ವೆಸ್ಟ್ ಇಂಡೀಸ್: 9 ಓವರ್​ಗಳಲ್ಲಿ 5 ವಿಕೆಟ್​ಗೆ 45(ಮ್ಯಾಥ್ಯೂಸ್ 11, ಹೆನ್ರಿ11, ಮೆಕ್​ಲೀನ್10, ಅನುಜಾ 8ಕ್ಕೆ 2, ದೀಪ್ತಿ 8ಕ್ಕೆ 1, ರಾಧಾ 8ಕ್ಕೆ 1). ಪಂದ್ಯಶ್ರೇಷ್ಠ: ಹ್ಯಾಲಿ ಮ್ಯಾಥ್ಯೂಸ್

మరింత సమాచారం తెలుసుకోండి: