ಸೇಂಟ್‌ ಜಾನ್ಸ್‌ (ಆ್ಯಂಟಿಗುವಾ): ಹೊಡಿ ಬಡಿ ಆಟಗಾರರ ದಂಡನ್ನೇ ಹೊಂದಿರುವ ವೆಸ್ಟ್ ಇಂಡೀಸ್ ಇದೀಗ ಭಾರತದ ವಿರುದ್ದ ಸರಣಿ ಆಡಲಿದೆ.  ಭಾರತದಲ್ಲಿ ಮುಂದಿನ ತಿಂಗಳು 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿರುವ ವೆಸ್ಟ್‌ ಇಂಡೀಸ್‌ ತಂಡಗಳನ್ನು ಪ್ರಕಟಿ ಸಲಾಗಿದೆ. ಎರಡೂ ತಂಡಗಳಿಂದ ಅನುಭವಿ ಆಲ್‌ರೌಂಡರ್‌ ಮತ್ತು ಸಿಕ್ಸರ್ ಸಿಡಿಸುವ ಏಕಾಂಗಿಗಳಾಗಿ ಪಂದ್ಯಗೆಲ್ಲಿಸಿಕೊಡುವ ಆಟಗಾರರಾದ ಆ್ಯಂಡ್ರೆ ರಸೆಲ್‌ ಮತ್ತು ಡ್ವೇನ್‌ ಬ್ರಾವೊ ಅವರನ್ನು ಕೈಬಿಡಲಾಗಿದ್ದು, ಎಲ್ಲರನ್ನು ಆಶ್ಚರ್ಯ ಪಡಿಸಿದೆ. 
 
ಅಷ್ಟೇ ಅಲ್ಲದೇ 333 ಖ್ಯಾತಿಯ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ “ಬ್ರೇಕ್‌’ ಬಯಸಿದ್ದರಿಂದ ಭಾರತ ಪ್ರವಾಸದಿಂದ ಹೊರಗುಳಿದರು. ಅನುಭವಿ ಆಟಗಾರ ಕೈರನ್‌ ಪೊಲಾರ್ಡ್‌ ಅವರು ನಾಯಕರಾಗಿ ಮುಂದುವರಿದಿದ್ದಾರೆ. ಟಿ20ಯಲ್ಲಿ ನಿಕೋಲಸ್‌ ಪೂರಣ್‌, ಏಕದಿನ ದಲ್ಲಿ ಶೈ ಹೋಪ್‌ ಉಪ ನಾಯಕರಾಗಿದ್ದಾರೆ. ಪ್ರಸ್ತುತ ಲಕ್ನೋದಲ್ಲಿರುವ ವೆಸ್ಟ್‌ ಇಂಡೀಸ್‌ ತಂಡ ಶುಕ್ರವಾರವಷ್ಟೇ ಅಫ್ಘಾನಿಸ್ಥಾನ ವಿರುದ್ಧದ ಸರಣಿ ಯನ್ನು ಮುಗಿಸಿದೆ. ಭಾರತ ಸರಣಿಗೆ ಆಯ್ಕೆಯಾದವರು ಇಲ್ಲೇ ಇರಲಿದ್ದು, ಉಳಿದವರು ಕೆರಿಬಿಯನ್‌ಗೆ ವಾಪ ಸಾಗಲಿದ್ದಾರೆ. ಡಿ. 6ರಿಂದ ಟಿ20 ಸರಣಿ, ಡಿ. 15ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಉಭಯ ತಂಡಗಳಿಗೂ ಸರಣಿಗಳು ಪ್ರಮುಖವಾಗಿವೆ. ಹೊಡಿ ಬಡಿ ಆಟ ವೀಕ್ಷಿಸಲು ಪ್ರೇಕ್ಷಕರು ಕಾತುರರಾಗಿದ್ದಾರೆ. 
 
ಏಕದಿನ ತಂಡದ ಆಟಗಾರರು ಹೀಗಿದ್ದಾರೆ:-
ಕೈರನ್‌ ಪೊಲಾರ್ಡ್‌ (ನಾಯಕ), ಸುನೀಲ್‌ ಆ್ಯಂಬ್ರಿಸ್‌, ಶೈ ಹೋಪ್‌, ಖಾರಿ ಪಿಯರೆ, ರೋಸ್ಟನ್‌ ಚೇಸ್‌, ಅಲ್ಜಾರಿ ಜೋಸೆಫ್, ಶೆಲ್ಡನ್‌ ಕಾಟ್ರೆಲ್‌, ಬ್ರ್ಯಾಂಡನ್‌ ಕಿಂಗ್‌, ನಿಕೋಲಸ್‌ ಪೂರಣ್‌, ಶಿಮ್ರನ್‌ ಹೆಟ್‌ಮೈರ್‌, ಎವಿನ್‌ ಲೆವಿಸ್‌, ರೊಮಾರಿಯೊ ಶೆಫ‌ರ್ಡ್‌, ಜಾಸನ್‌ ಹೋಲ್ಡರ್‌, ಕೀಮೊ ಪೌಲ್‌, ಹೇಡನ್‌ ವಾಲ್ಶ್ ಜೂನಿಯರ್‌.
 
ಟಿ20 ತಂಡದ ಆಟಗಾರರು:-
ಕೈರನ್‌ ಪೊಲಾರ್ಡ್‌ (ನಾಯಕ), ಫ್ಯಾಬಿಯನ್‌ ಅಲೆನ್‌, ಬ್ರ್ಯಾಂಡನ್‌ ಕಿಂಗ್‌, ದಿನೇಶ್‌ ರಾಮದಿನ್‌, ಶೆಲ್ಡನ್‌ ಕಾಟ್ರೆಲ್‌, ಎವಿನ್‌ ಲೆವಿಸ್‌, ಶಫೇìನ್‌ ರುದರ್‌ಫೋರ್ಡ್‌, ಹೆಟ್‌ಮೈರ್‌, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್‌, ಜಾಸನ್‌ ಹೋಲ್ಡರ್‌, ಹೇಡನ್‌ ವಾಲ್ಶ್ ಜೂನಿಯರ್‌, ಪೂರಣ್‌, ಕೀಮೊ ಪೌಲ್‌, ಕೆಸ್ರಿಕ್‌ ವಿಲಿಯಮ್ಸ್‌.

మరింత సమాచారం తెలుసుకోండి: