ಹೊಸದಿಲ್ಲಿ: ಚೇಸಿಂಗ್ ಕಿಂಗ್ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದೀಗ ಮತ್ತೊಮ್ಮೆ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನವಾಗಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ತಮ್ಮ ನಿಕಟ ಪ್ರತಿಸ್ಪರ್ಧಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಇನ್ನೊಂದೆಡೆ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಟಾಪ್ 10 ಪಟ್ಟಿಗೆ ಲಗ್ಗೆಯಿಟ್ಟಿದ್ದು ತಾವೇನೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 
 
ಆಸ್ಟ್ರೇಲಿಯಾದ ಆಡಿಲೇಡ್ ಓವಲ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 48 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ಗೈದಿತ್ತು. ಈ ನಡುವೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿರುವುದು ಸ್ಮಿತ್ (36 ಹಾಗೂ 4) ಹಿನ್ನಡೆಗೆ ಕಾರಣವಾಗಿದೆ.  ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 928 ರೇಟಿಂಗ್ ಪಾಯಿಂಟ್‌ಗಳನ್ನು ಕಾಯ್ದುಕೊಂಡಿದ್ದಾರೆ. ಈ ಮೂಲಕ ಸ್ಟೀವ್ ಸ್ಮಿತ್‌ಗಿಂತಲೂ ಐದು ಅಂಕಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ ಸ್ಮಿತ್ 923 ರೇಟಿಂಗ್ ಅಂಕಗಳಿಗೆ ಇಳಿಕೆ ಕಂಡಿದ್ದಾರೆ.
 
 12 ಸ್ಥಾನಗಳ ನೆಗೆತ ಕಂಡಿರುವ ಚೇತೇಶ್ವರ ಪೂಜಾರ ನಾಲ್ಕು ಹಾಗೂ ಅಜಿಂಕ್ಯ ರಹಾನೆ ಆರನೇ ಸ್ಥಾನದಲ್ಲಿ ಗುರುತಿಸಿದ್ದಾರೆ. ಈ ಪೈಕಿ ರಹಾನೆ ಒಂದು ಸ್ಥಾನದ ಹಿಂದಿದ್ದರೆ,  ವಿರುದ್ಧ ಭರ್ಜರಿ ತ್ರಿಶತಕ ಸಾಧನೆ ಮಾಡಿರುವ ಡೇವಿಡ್ ವಾರ್ನರ್ 12 ಸ್ಥಾನಗಳ ನೆಗೆತ ಕಂಡು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ನಾಲ್ಕು ಸ್ಥಾನಗಳ ಬಡ್ತಿ ಪಡೆದು 7ಕ್ಕೆ ತಲುಪಿದ್ದಾರೆ.
 
ಬೌಲಿಂಗ್ ವಿಭಾಗದಲ್ಲಿ ಒಂದು ಸ್ಥಾನ ನೆಗೆದಿರುವ ಬಲಗೈ ವೇಗಿ ಮೊಹಮ್ಮದ್ ಶಮಿ, ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ. ಬುಮ್ರಾ (5) ಹಾಗೂ ರವಿಚಂದ್ರನ್ ಅಶ್ವಿನ್ (9) ಅಗ್ರ 10ರ ಪಟ್ಟಿಯಲ್ಲಿರುವ ಇತರೆ ಇಬ್ಬರು ಭಾರತೀಯ ಬೌಲರ್‌ಗಳಾಗಿದ್ದಾರೆ.

మరింత సమాచారం తెలుసుకోండి: