ಪದೇ ಪದೇ ಸೋಲುಗಳನ್ನು ಅನುಭವಿಸಿ ಚೋಕರ್ಸ್ ಅನ್ನೋ ಬಿರುದನ್ನೇ ಪಡೆದಿರುವ ದಕ್ಷಿಣ ಆಫ್ರಿಕಾ ಇದೀಗ ಮುಳುಗುತ್ತಿರುವ ಹೀಗಾಗಿದೆ. ಈ ಮುಳುಗುತ್ತಿರುವ ಹಡಗು ಮೇಲೇಳಲು ಇಂಗ್ಲೆಂಡ್ ನ ಮಾಜಿ ಖ್ಯಾತ ಕ್ರಿಕೆಟಿಗ ಪಾಠ ಹೇಳಿದ್ದಾರೆ. ಹೌದು, ಅದು ಟ್ವೀಟ್ ಮಾಡುವ ಮೂಲಕ ಏನೆಂದು ಹೇಳಿದ್ದಾರೆ ನೀವೆ ಓದಿ.
 
ಪೀಟಿರ್ಸನ್‌ ಹುಟ್ಟಿ ಬೆಳೆದದ್ದೆಲ್ಲಾ ದಕ್ಷಿಣ ಆಫ್ರಿಕಾದಲ್ಲಿ ಆದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದು ಇಂಗ್ಲೆಂಡ್‌ ತಂಡವನ್ನು ಇದೀಗ ತಮ್ಮ ತಾಯ್ನಾಡಿನ ಕ್ರಿಕೆಟ್‌ ಉದ್ಧಾರ ಕುರಿತಾಗಿ ಮಾತನಾಡಿರುವ ಪೀಟರ್ಸನ್‌, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಗ್ರೇಮ್‌ ಸ್ಮಿತ್‌ ಮತ್ತು ಕೋಚ್‌ ಸ್ಥಾನಕ್ಕೆ ಮಾಜಿ ವಿಕೆಟ್‌ಕೀಪಿಂಗ್‌ ಬ್ಯಾಟ್ಸ್‌ಮನ್‌ ಮಾರ್ಕ್‌ ಬೌಷರ್‌ ಅವರ ಹೆಸರನ್ನು ಸೂಚಿಸಿದ್ದಾರೆ.
 
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿರುವ ಪೀಟರ್ಸನ್‌, ಮಾಜಿ ವೇಗದ ಬೌಲರ್‌ ಮಖಾಯ ಎನ್ಟಿನಿ ದಕ್ಷಿಣ ಆಫ್ರಿಕಾದ ಬೌಲಿಂಗ್‌ ಕೋಚ್‌ ಆಗಬೇಕು ಎಂದಿದ್ದಾರೆ. ಜೊತೆಗೆ ಆಲ್‌ರೌಂಡರ್‌ ರಾಬಿನ್‌ ಪೀಟರ್ಸನ್‌ಗೆ ಸ್ಪಿನ್‌ ಬೌಲಿಂಗ್‌ ಕೋಚ್‌ ಜವಾಬ್ದಾರಿ ವಹಿಸಬೇಕು ಎಂದಿದ್ದಾರೆ. ಇನ್ನು ಕ್ರಿಕೆಟ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ಗೆ ತಂಡದ ಮುಖ್ಯ ಸಲಹೆಗಾರನಾಗಿ ಹಾಗೂ ಟೈಟನ್ಸ್‌ ಫ್ರಾಂಚೈಸಿ ತಂಡದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಾಕ್‌ ಕೌಲ್‌ ಅವರನ್ನು ಸಿಇಒ ಆಗಿ ನೇಮಕ ಮಾಡುವಂತೆ ಸಲಹೆ ನೀಡಿ ಟ್ವೀಟ್ ಮಾಡಿದ್ದಾರೆ. 
 
ಇದೀಗ ಪೀಟರ್ಸನ್ ಟ್ವೀಟ್ ವೈರಲ್ ಆಗಿದ್ದು, ದ.ಆಫ್ರೀಕಾ ಕ್ರಿಕೆಟ್ ಆಡಳಿತ ಮಂಡಳಿಯು ಸಹ ಈ ವಿಚಾರದ ಕುರಿತು ಯೋಚಿಸುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ತಂದ ಸ್ಟಾರ್‌ಗಳಾದ ಜಾಕ್‌ ಕಾಲಿಸ್‌, ಎಬಿ ಡಿ'ವಿಲಿಯರ್ಸ್‌, ಮೊರ್ನೆ ಮಾರ್ಕೆಲ್‌, ಡೇಲ್‌ ಸ್ಟೇನ್‌ ಹಾಗೂ ಹಶೀಮ್‌ ಆಮ್ಲಾ ಅವರಂತಹ ದಿಗ್ಗಜರು ನಿವೃತ್ತಿ ಹೊಂದಿದೆ ಬಳಿಕ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ ಮಟ್ಟ ಗಣನೀಯ ರೀತಿಯಲ್ಲಿ ಇಳಿಮುಖವಾಗಿದೆ. ಅನುಭವಿ ಆಟಗಾರರ ಸ್ಥಾನ ತುಂಬಬಲ್ಲ ಸಮರ್ಥ್ ಯುವ ಆಟಗಾರರನ್ನು ಕಂಡುಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ವಿಫಲಗೊಂಡಿದೆ.

మరింత సమాచారం తెలుసుకోండి: