ವಿಂಡೀಸ್ ಬ್ಯಾಟ್ಸ್ ಮ್ಯಾನ್ ಗಳ ಸಿಕ್ಸರ್ ಸುರಿಮಳೆಗಳಿಗೆ ಟೀಂ ಇಂಡಿಯಾ 2ನೇ ಟಿ20-ಐ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲುಂಡಿತು. ಇದರೊಂದಿಗೆ 3 ಪಂದ್ಯಗಳ ಚುಟಕು ಕ್ರಿಕೆಟ್‌ ಸರಣಿ 1-ರಲ್ಲಿ ಸಮಬಲಗೊಂಡಿದೆ. ಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. 
 
ತಿರುವನಂತಪುರ: ಸಿಕ್ಸರ್ ಬೌಂಡರಿಗಳ ಸುರಿಮಳೆ ಸುರಿಸಿದ ವೆಸ್ಟ್ ಇಂಡೀಸ್ ಭಾರತಕ್ಕೆ ಸೋಲಿನ ರುಚಿ ತೋರಿಸಿತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಹಿನ್ನಡೆ ಅನುಭವಿಸಿದ ಟೀಮ್‌ ಇಂಡಿಯಾ, ಇಲ್ಲಿ ನಡೆದ ವೆಸ್ಟ್‌ ಇಂಡೀಸ್‌  ವಿರುದ್ಧದ ಸರಣಿಯ 2ನೇ ಟಿ20-ಐ ಪಂದ್ಯದಲ್ಲಿ 8ವಿಕೆಟ್‌ಗಳ ಹೀನಾಯ ಸೋಲುಂಡಿತು. ಇದರೊಂದಿಗೆ 3ಪಂದ್ಯಗಳ ಚುಟಕು ಕ್ರಿಕೆಟ್‌ ಸರಣಿ 1-1ರಲ್ಲಿ ಸಮಬಲಗೊಂಡಿದೆ.
 
ಇಲ್ಲಿನ ಗ್ರೀನ್‌ಫೀಲ್ಡ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆತಿಥೇಯ ಭಾರತ ತಂಡ ಯುವ ಆಟಗಾರ ಶಿವಂ ದುಬೇ ಅವರ ಚೊಚ್ಚಲ ಅರ್ಧಶತಕದ ನೆರವಿನಿಂದ 20ಓವರ್‌ಗಳಲ್ಲಿ 7ವಿಕೆಟ್‌ಗೆ 170 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಲೆಂಡ್ಲ್‌ ಸಿಮನ್ಸ್‌ (ಅಜೇಯ 67 ರನ್‌) ಅವರ ಅರ್ಧಶತಕ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಎವಿನ್‌ ಲೂಯಿಸ್‌40, ಶಿಮ್ರಾನ್‌ ಹೆಟ್ಮಾಯೆರ್‌(23) ಮತ್ತು ನಿಕೊಲಾಸ್‌ ಪೂರನ್‌ (ಅಜೇಯ 38 ರನ್‌) ಆರ್ಭಟದ ನೆರವಿನಿಂದ ಇನ್ನು 9 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್‌ ನಷ್ಟದಲ್ಲಿ 173ರನ್‌ ಸಿಡಿಸಿ ಜಯ ದಾಖಲಿಸಿತು. ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲೇ ಬೇಕಾದ ಒತ್ತಡದಲ್ಲಿರುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, 22 ಎಸೆತಗಳಲ್ಲಿ 3 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 33 ರನ್‌ಗಳ ಕೊಡುಗೆ ಸಲ್ಲಿಸಿದರು.
 
ಸಂಕ್ಷಿಪ್ತ ಸ್ಕೋರ್‌
ಭಾರತ: 20ಓವರ್‌ಗಳಲ್ಲಿ 7 ವಿಕೆಟ್‌ಗೆ170
(ಶಿವಂ ದುಬೇ 54, ರಿಷಭ್‌ ಪಂತ್‌ ಔಟಾಗದೆ 33, ಕೆಸಿರಿಕ್‌ ವಿಲಿಯಮ್ಸ್‌ 30ಕ್ಕೆ 2, ಹೇಡನ್‌ ವಾಲ್ಷ್‌ 28ಕ್ಕೆ 2).
ವೆಸ್ಟ್‌ ಇಂಡೀಸ್‌: 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ173
(ಲೆಂಡ್ಲ್‌ ಸಿಮನ್ಸ್‌ ಅಜೇಯ67, ಎವಿನ್‌ ಲೂಯಿಸ್‌ 40ಮ ಶಿಮ್ರಾನ್‌ ಹೆಟ್ಮಾಯೆರ್‌ 23, ನಿಕೊಲಾಸ್‌ ಪೂರನ್‌ ಅಜೇಯ 38, ವಾಷಿಂಗ್ಟನ್‌ ಸುಂದರ್‌ 26ಕ್ಕೆ 1).

మరింత సమాచారం తెలుసుకోండి: