ಅಥಿತೇಯ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮೊದಲನೇ ಪಂದ್ಯ ಗೆಲ್ಲಿಸಿದ ವಿರಾಟ್ ಕೊಹ್ಲಿ, ಎರಡನೇ ಟೀ-ಟ್ವಂಟಿಯಲ್ಲಿ ಸೋತಿತ್ತು. ಇದೀಗ ಸೋಲಲು ಯಾರು ಕಾರಣ ಮತ್ತು ಯಾಕೆ ಸೋತೆವು  ಎಂದು ಕಾರಣ ಬಿಚ್ಚಿಟ್ಟಿದ್ದಾರೆ. 
 
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 170 ರನ್ ಬಾರಿಸುವ ಮೂಲಕ ಕೆರಿಯನ್ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಟೀಂ ಇಂಡಿಯಾ ಕಳಪೆ ಪೀಲ್ಡಿಂಗ್ ಪಂದ್ಯವನ್ನು ಕೈಚೆಲ್ಲುವಂತೆ ಮಾಡಿತು. ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್ ಬೌಲಿಂಗ್’ನಲ್ಲಿ ಲಿಂಡಲ್ ಸಿಮೊನ್ಸ್ ನೀಡಿದ್ದ ಸುಲಭ ಕ್ಯಾಚನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದ್ದರು. ಆಗ ಸಿಮೋನ್ಸ್ ಕೇವಲ 6 ರನ್ ಬಾರಿಸಿದ್ದರು. ಇದರ ಲಾಭ ಪಡೆದ ಸಿಮೊನ್ಸ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 67 ರನ್ ಚಚ್ಚಿದರು. ಇನ್ನು ಅದೇ ಓವರ್’ನಲ್ಲಿ ಎವಿನ್ ಲೆವಿಸ್[16] ನೀಡಿದ್ದ ಕ್ಯಾಚನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಕೈಚೆಲ್ಲಿದರು. ಲೆವಿಸ್ ಆ ಬಳಿಕ 40 ರನ್ ಬಾರಿಸಿ ಔಟಾಗಿದ್ದರು. 
 
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ನಾವಿಷ್ಟು ಕೆಟ್ಟದಾಗಿ ಕ್ಷೇತ್ರರಕ್ಷಣೆ ಮಾಡಿದರೆ, ಎಷ್ಟು ರನ್ ಬಾರಿಸಿದರೂ ಸಾಕಾಗುವುದಿಲ್ಲ. ನಾವು ಕಳೆದೆರಡು ಪಂದ್ಯಗಳಲ್ಲೂ ಕೆಟ್ಟದಾಗಿ ಫೀಲ್ಡಿಂಗ್ ಮಾಡಿದ್ದೇವೆ. ನಾವು ಒಂದೇ ಓವರ್’ನಲ್ಲಿ 2 ಕ್ಯಾಚ್ ಕೈಚೆಲ್ಲಿದೆವು. ಆ ಎರಡು ವಿಕೆಟ್ ಪಡೆದಿದ್ದರೆ, ಎದುರಾಳಿ ತಂಡ ಒತ್ತಡಕ್ಕೊಳಗಾಗುತ್ತಿತ್ತು. ನಾವು ಕೇತ್ರರಕ್ಷಣೆ ವಿಭಾಗವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಹೇಳಿದ್ದಾರೆ. 
 
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವುದರ ಮೂಲಕ ಸಮಬಲ ಸಾಧಿಸಿವೆ. ಇದೀಗ ನಿರ್ಣಾಯಕ ಪಂದ್ಯವು ಡಿಸೆಂಬರ್ 11ರಂದು ನಡೆಯಲಿದ್ದು, ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ. ರೋಹಿತ್ ತವರು ಮೈದಾನದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರುತ್ತಾ ಎಂಬುದು ಕಾದು ನೋಡಬೇಕಾಗಿದೆ

మరింత సమాచారం తెలుసుకోండి: