ನವದೆಹಲಿ: ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಡೆಡ್ಲಿ ಬೌಲರ್ ಬೂಮ್ ಬೂಮ್ ಬೂಮ್ರಾ ಟೀಂ ಇಂಡಿಯಾ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಹೌದು, ಪದೇ ಪದೇ ವಿಕೆಟ್ ಮೇಲೆ ವಿಕೆಟ್ ಉರುಳಿಸುವ ಬೂಮ್ರಾ ಫಿಟ್ ಆಗುತ್ತಿರುವ ಮುನ್ಸೂಚನೆ ನೀಡಿದ್ದು ಇದೇ ವಿಂಡೀಸ್ ಸರಣಿಗೆ ಲಭ್ಯರಾಗುವ ಅವಕಾಶಗಳು ಕಾಣಿಸಿಕೊಳ್ಳುತ್ತಿವೆ. 
 
 ಪುನಶ್ಚೇತನದ ಹಾದಿಯಲ್ಲಿರುವ  ಬಲಗೈ ವೇಗಿ ಜಸ್‌ಪ್ರೀತ್ಬುಮ್ರಾ, ವೆಸ್ಟ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಭಾರತ ತಂಡದ ನೆಟ್‌ ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ. ಪ್ರಸಕ್ತ ಸಾಲಿನ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿ ವೇಳೆಯಲ್ಲಿ ಸ್ಟ್ರೆಸ್‌ ಫ್ರಾಕ್ಚರ್‌ ಗಾಯದ ಸಮಸ್ಯೆಗೊಳಗಾಗಿ ಬುಮ್ರಾ ಸರಣಿಯಿಂದ ಹೊರಗುಳಿದಿದ್ದರು. 
 
 ಇದೀಗ ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆಗೆ ಟೀಮ್‌ ಇಂಡಿಯಾಗೆ ಪುನರಾಗಮನದ ಸೂಚನೆ ನೀಡಿದ್ದಾರೆ. ಪುನಶ್ಚೇತನದ ಭಾಗವಾಗಿ ಬುಮ್ರಾ ಟೀಮ್‌ ಇಂಡಿಯಾ ನೆಟ್‌ನಲ್ಲಿ ಕಾಣಿಸಿಕೊಳ್ಳು ವೇಳೆ ಅವರ ಪ್ರಗತಿಯನ್ನು ಟೀಮ್‌ ಇಂಡಿಯಾ ಫಿಸಿಸಿಯೋ ನಿತಿನ್‌ ಪಟೇಲ್‌ ಹಾಗೂ ಟ್ರೈನರ್‌ ನಿಕ್‌ ವೆಬ್‌ ನಿಕಟವಾಗಿ ನಿಗಾ ವಹಿಸಲಿದ್ದಾರೆ. ಸದ್ಯ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪುನಶ್ಚೇತನದ ಹಂತದಲ್ಲಿದ್ದಾರೆ. ಇಬ್ಬರು ಸಹ ಭಾರೀ ಜಿಮ್ ವರ್ಕೌಟ್, ರನ್ನಿಂಗ್ ಹಾಗೂ ಪ್ರಾಕ್ಟೀಸ್ ನಲ್ಲಿ ಪುಲ್ ಬ್ಯೂಸಿಯಾಗಿದ್ದಾರೆ. ಹೌದು, ತಮ್ಮ ಫಿಟ್ ನೆಸ್ ಬಗ್ಗೆ ಹಾಗಾಗ ಜಾಲತಾಣಗಳಲ್ಲಿ ಪ್ರಾಕ್ಟೀಸ್ ಪೋಟ್ಸ್  ಗಳನ್ನು ಸಹ ಹಾಕುತ್ತಿದ್ದರು. 
 
ವಿಂಡೀಸ್‌ ಸರಣಿಯ ಬಳಿಕ ಭಾರತ ಹೊಸ ವರ್ಷದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾಗವಹಿಸಲಿದೆ. ಈ ವೇಳೆಗೆ ಬುಮ್ರಾ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಇದರ ಬದಲಾಗಿ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಬುಮ್ರಾ, ಮ್ಯಾಚ್‌ ಪ್ರಾಕ್ಟಿಸ್‌ ಮಾಡುವ ಇರಾದೆಯಲ್ಲಿದ್ದಾರೆ ಎಂಬುದು ಸದ್ಯದ ಮಾಹಿತಿಯಾಗಿದೆ. ಬೂಮ್ರಾ ಟೀಂ ಇಂಡಿಯಾದ ಸ್ಟಾರ್ ಅಷ್ಟೇ ಅಲ್ಲ ಐಸಿಸಿ ನಂಬರ್ ಓನ್ ಬೌಲರ್ ಆಗಿದ್ದು, ದಿಗ್ಗಜರೇ ಇವರ ಬೌಲಿಂಗ್ ಗೆ ಬ್ಯಾಟ್ ಬೀಸಲು ಎದರುತ್ತಾರೆ.

మరింత సమాచారం తెలుసుకోండి: