ಬೆಂಗಳೂರು: ಈ ಸಲ ಕಪ್ ನಮ್ಗೆ, ಐಪಿಎಲ್ ಟೂರ್ನಮೆಂಟ್ ಸ್ಟಾಟ್ ಆಗೋದಕ್ಕೂ ಮುಂಚೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಮೊಳಗುವ ಅತಿ ದೊಡ್ಡ ಡೈಲಾಗ್ ಈ ಸಲ್ಲಿಸಲು ಕಮ್ ನಮ್ಗೆ. ಅದು ಈ ಭಾರೀ ಬೆಂಗಳೂರು ತಂಡಕ್ಕೆ ಈ ಮೂವರಿಂದ ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ. ಯಾರವರು, ಕಪಾ ನಮ್ದಾಗುತ್ತಾ ಇಲ್ವಾ ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ. 
 
ಪ್ರತಿ ವರ್ಷ ಕಪ್ ಗೆಲ್ಲಲೇ ಬೇಕೆಂಬ ಆಲೋಚನೆಯೊಂದಿಗೆ ಬಲಿಷ್ಟ ತಂಡವನ್ನೇ ಕಟ್ಟುವ ರಾಯಲ್ ಚಾಲೆಂಜ್ ಬೆಂಗಳೂರು ಫ್ರಾಂಚೈಸಿ ಈ ಬಾರಿಯೂ ಉತ್ತಮ ಆಟಗಾರರತ್ತ ಕಣ್ಣಿಟ್ಟಿದೆ. ಮುಂದಿನ ಐಪಿಎಲ್ ನ ಮೊದಲು ಆರ್ ಸಿಬಿ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಮುಖರಾಗಿರುವರೆಂದರೆ ನಥನ್  ಕೌಲ್ಟರ್ ನೈಲ್, ಶಿಮ್ರನ್ ಹೆಟ್ಮೈರ್, ಡೇಲ್ ಸ್ಟೈನ್, ಟಿಮ್ ಸೌಥಿ.
ಹರಾಜಿನಲ್ಲಿ ಆರ್ ಸಿಬಿಗೆ 27.90 ಕೋಟಿ ರೂಪಾಯಿ ಖರ್ಚು ಮಾಡುವ ಅವಕಾಶವಿದೆ. ಆರು ವಿದೇಶಿ ಆಟಗಾರರನ್ನು ಆರ್ ಸಿಬಿ ಖರೀದಿಸಲು ಯೋಚಿಸಿದೆ.
 
ಕಾಂಗುರೂ ನಾಡಿನ ಬಲಿಷ್ಠ ಆಟಗಾರ ಗ್ಲೆನ್ ಮ್ಯಾಕ್ಸವೆಲ್. ಆರ್ ಸಿಬಿಯ ವಿರಾಟ್, ಡಿವಿಲಿಯರ್ಸ್ ನಂತರ ಬ್ಯಾಟಿಂಗ್ ಗೆ ಸರಿಯಾದ ಆಟಗಾರನನ್ನು ಹುಡುಕುತ್ತಿರುವ ಆರ್ ಸಿಬಿಗೆ ಮ್ಯಾಕ್ಸ ವೆಲ್ ಸರಿಯಾಗಿ ಫಿಟ್ ಆಗಬಹುದು. ಸ್ಪಿನ್ ಬೌಲಿಂಗ್ ಮಾಡಬಲ್ಲವನಾದ ಕಾರಣ ಉತ್ತಮ ಆಲ್ ರೌಂಡರ್ ಆಗಿ,  ಕೊನೆಯ ಓವರ್ ಗಳಲ್ಲಿ ಹೊಡೆಬಡಿಯ ಆಟದಿಂದ ಫಿನಿಶರ್ ಆಗುವುದರಲ್ಲಿ ಸಂಶಯವೇ ಇಲ್ಲ. 
 
ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮತ್ತೆ ತವರು ತಂಡಕ್ಕೆ ಆಡಬಹುದು. ಆರಂಭಿಕ ಆಟಗಾರರಾಗಿ ದೇವದತ್ತ ಪಡಿಕ್ಕಲ್ ಮತ್ತು ಪಾರ್ಥೀವ್ ಪಟೇಲ್ ತಂಡದಲ್ಲಿದ್ದರೂ ಇಬ್ಬರೂ ಎಡಗೈ ದಾಂಡಿಗರಾಗಿರುವ ಕಾರಣ ಫ್ರಾಂಚೈಸಿ ಉತ್ತಪ್ಪ ಕಡೆಗೆ ಮನಸ್ಸು ಮಾಡಬಹುದು. ಚಿನ್ನಸ್ವಾಮಿ ಅಂಗಳದ ಬಗ್ಗೆ ಚೆನ್ನಾಗಿ ಬಲ್ಲ ಉತ್ತಪ್ಪ ಆರ್ ಸಿಬಿಗೆ ಪ್ಲಸ್ ಆಗಬಹುದು.ಜೊತೆಗೆ ಫ್ಯಾಟ್ ಕಮೀನ್ಸ್ ರನ್ನು ಆಡಿಸುವ ಲೆಕ್ಕಾಚಾರದಿಂದ ಈ ಸಲ ಕಪ್ ನಮ್ಗೆ ಎನ್ನುತ್ತಿದೆ ಆರ್.ಸಿ.ಬಿ.

మరింత సమాచారం తెలుసుకోండి: