ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ, ಹಣೆದ ಹೊಳೆ ಹರಿಸಿದ ಫ್ರಾಂಚೈಸಿ ತಂಡಗಳು ಸ್ಟಾರ್‌ ಆಟಗಾರರನ್ನು ಬೇಟೆಯಾಡಿವೆ. ಆರ್‌ಸಿಬಿ ಹರಾಜಿನಲ್ಲೂ ಸಾಧಾರಣ ಪ್ರದರ್ಶನ ನೀಡಿ 8ಕಡಿಮೆ ಸಾಮರ್ಥ್ಯದ ಆಟಗಾರರನ್ನು ಖರೀದಿಸಿದೆ. ಆದರೂ ಕೂಡ ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ. ಯಾಕೆ ಗೊತ್ತಾ! ಆರ್.ಸಿ.ಬಿಯ ರಣತಂತ್ರವೇನು ಗೊತ್ತಾ! 
 
 ಆರ್‌ಸಿಬಿ 10ಕೋಟಿಗೆ ಕ್ರಿಸ್‌ ಮಾರಿಸ್‌, 4.4ಕೋಟಿಗೆ ಆರೊನ್‌ ಫಿಂಚ್‌ ಅವರನ್ನು ಖರೀದಿಸಿತು. ಕೊನೆಗೆ ಅಳಿದು ಉಳಿದ ಆಟಗಾರರಲ್ಲಿ ಕೆಲ ಆಟಗಾರರನ್ನು ತೆಗೆದುಕೊಂಡು ಒಟ್ಟು 8ಆಟಗಾರರನ್ನು ಖರೀದಿಸಿ, 6.40ಕೋಟಿ ರೂ. ತನ್ನಲ್ಲೇ ಉಳಿಸಿಕೊಂಡಿತು. ಆದರೆ ತಂಡ ಸಾಧಾರಣವಾಗಿ ಕಂಡುಬರುತ್ತಿದ್ದು ಈ ಸಲ ಕಮ್ ನಮ್ದೆ ಎನ್ನುತ್ತಿದ್ದಾರೆ. 
 
ಆರ್‌ಸಿಬಿ ಅಂತಿಮ ತಂಡ ಹೀಗಿದೆ:- 
 
ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್‌, ಪಾರ್ಥಿವ್‌ ಪಟೇಲ್‌, ಗುರುಕೀರತ್‌ ಸಿಂಗ್‌ ಮಾನ್, ದೇವದತ್‌ ಪಡಿಕ್ಕಲ್, ಆರೊನ್‌ ಫಿಂಚ್‌, ಜೊಶುವಾ ಫಿಲಿಪ್, ಪವನ್‌ ದೇಶಪಾಂಡೆ, ಶಹಬಾಝ್‌ ಅಹ್ಮದ್‌, ಶಿವಂ ದುಬೇ, ವಾಷಿಂಗ್ಟನ್‌ ಸುಂದರ್‌, ಮೊಯೀನ್‌ ಅಲಿ, ಪವನ್‌ ನೇಗಿ, ಕ್ರಿಸ್‌ ಮಾರಿಸ್‌, ಇಸುರು ಉದನ, ಯುಜ್ವೇಂದ್ರ ಚಹಲ್, ಉಮೇಶ್‌ ಯಾದವ್‌, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್, ಕೇನ್‌ ರಿಚರ್ಡ್ಸನ್‌, ಡೇಲ್‌ ಸ್ಟೇನ್.
 
ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು
1. ಆರೊನ್‌ ಫಿಂಚ್‌: 4.4ಕೋಟಿ ರೂ. (1ಕೋಟಿ ರೂ. ಮೂಲ ಬೆಲೆ)
2. ಕ್ರಿಸ್‌ ಮಾರಿಸ್‌: 10ಕೋಟಿ ರೂ.(1.5ಕೋಟಿ ರೂ. ಮೂಲ ಬೆಲೆ )
3. ಜೊಶುವಾ ಫಿಲಿಪ್‌: 20ಲಕ್ಷ ರೂ. (20ಲಕ್ಷ ರೂ.)
4. ಕೇನ್‌ ರಿಚರ್ಡ್ಸನ್‌: 4ಕೋಟಿ ರೂ. (1.5 ಕೋಟಿ ರೂ.)
5. ಪವನ್‌ ದೇಶಪಾಂಡೆ: 20ಲಕ್ಷ ರೂ. (20ಲಕ್ಷ ರೂ.)
6. ಡೇಲ್‌ ಸ್ಟೇನ್‌: 2ಕೋಟಿ ರೂ. (2ಕೋಟಿ ರೂ. )
7. ಶಹಬಾಝ್‌ ಅಹ್ಮದ್‌: 20ಲಕ್ಷ ರೂ. (20ಲಕ್ಷ ರೂ.)
8. ಇಸುರು ಉದನ: 50ಲಕ್ಷ ರೂ. (50ಲಕ್ಷ ರೂ.)

మరింత సమాచారం తెలుసుకోండి: