ಕೋಲ್ಕತ್ತಾ: ಮನೆ ಮನೆಯಲ್ಲೂ ಕ್ರಿಕೆಟ್ ರಸದೌತಣ ನೀಡುವ ಐಪಿಎಲ್ ಈ ಭಾರಿಯ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರು ಕೋಟಿ ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದಾರೆ. ಕೋಲ್ಕತ್ತಾದ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಮುಗಿಬಿದ್ದಿದ್ದಾರೆ.
 
 ಕ್ರಿಸ್ ಲಿನ್ ಮುಂಬೈ ಇಂಡಿಯನ್ಸ್ ಪಾಲಾದರು. ಮೂಲ ಬೆಲೆ ಎರಡು ಕೋಟಿ ಕ್ರಿಸ್ ಪಾಲಿಗಾಯಿತು. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೋಲ್ಕತ್ತಾ ಪಾಲದರು. ಮಾರ್ಗನ್ ಗೆ 5.25 ಕೋಟಿ ನೀಡಿ ಶಾರುಖ್ ಒಡೆತನದ ತಂಡ ಖರೀದಿಸಿತು. ಕನ್ನಡಿಗ ರಾಬಿನ್ ಉತ್ತಪ್ಪ  ರಾಜಸ್ಥಾನ ರಾಯಲ್ಸ್ ಪಾಲಾದರು. ಉತ್ತಮ 3 ಕೋಟಿ ಪಡೆದರು. ಜೇಸನ್ ರಾಯ್ 1ಕೋಟಿ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. 
 
ಡೇರ್ ಅಂಡ್ ಡ್ಯಾಶ್ ಆಟಗಾರ ಆರೋನ್ ಫಿಂಚ್ ಭಾರಿ ಪೈಪೋಟಿಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ಫಿಂಚ್ ರನ್ನು 4.40 ಕೋಟಿ ಕೊಟ್ಟು ಆರ್.ಸಿ.ಬಿ ಖರೀದಿಸಿದೆ. ಸಿಕ್ಸರ್ ಮ್ಯಾನ್  ಗ್ಲೆನ್ ಮ್ಯಾಕ್ಸ ವೆಲ್ ಗೆ ಭಾರಿ ಬೇಡಿಕೆ ಕಂಡು ಬಂತು. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಭಾರಿ ಪೈಪೋಟಿ ನಡೆಸಿದವು. ಅಂತಿಮವಾಗಿ 10.75 ಕೋಟಿಗೆ ಪಂಜಾಬ್ ಪಾಲಾದರು.
 
ಈ ವರ್ಷದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಪ್ಯಾಟ್ ಕಮಿನ್ಸ್ ಭಾರಿ ಬೆಲೆಗೆ ಮಾರಾಟವಾದರು. ಆಸೀಸ್ ಬೌಲರ್ ಗೆ ಆರ್ ಸಿ ಬಿ ಮತ್ತು ಡೆಲ್ಲಿ ತಂಡಗಳು ಭಾರಿ ಪೈಪೋಟಿ ನೀಡಿದವು .ನಂತರ ಕೊನೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಯಾಟ್ ಕಮಿನ್ಸ್ ರನ್ನು 15.5 ಕೋಟಿ ಕೊಟ್ಟು ಖರೀದಿಸಿತು. ಆಲ್ ರೌಂಡರ್ ಸ್ಯಾಮ್ ಕರ್ರನ್ 5.5 ಕೋಟಿ ಗೆ ಚೆನ್ನೈ ಪಾಲಾದರು. ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಹತ್ತು ಕೋಟಿಗೆ ಬೆಂಗಳೂರು ತಂಡದ ಖರೀದಿಸಿದೆ. ಚೈನ್ನೈ, ಮುಂಬೈ, ಹೈದರಾಬಾದ್, ಬೆಂಗಳೂರು, ಕೋಲ್ಕತ್ತಾ ಗೆಲ್ಲುವ ಹಾಟ್ ಫೇವರೇಟ್ ತಂಡಗಳಾಗಿವೆ.

మరింత సమాచారం తెలుసుకోండి: