ಹೊಸದಿಲ್ಲಿ: ಇತ್ತೀಚೆಗೆ ಕಲ್ಕತ್ತಾದಲ್ಲಿ ಐಪಿಎಲ್ 2020ರ ಹರಾಜು ಪ್ರಕ್ರಿಯೆ ಮುಗಿದಿದ್ದು, ಇದೀಗ ಫ್ರಾಂಚೈಸಿಗಳಿಗೆ ಐಪಿಎಲ್ ದಿನಾಂಕದ ಬಗ್ಗೆ ಚಿಂತೆ ಶುರುವಾಗಿದೆ. ಹೌದು, ಮಾರ್ಚ್ 28 ರಿಂದ ಶುರುವಾಗುವುದು ಏಪ್ರಿಲ್ 1ಕ್ಕೆ ಪ್ರಾರಂಭಿಸಿ ಬೇಕೆಂದು ಯಾಕೆ ಹೇಳುತ್ತಿದ್ದಾರೆ ಅಂತ ಇಲ್ನೋಡಿ. 
 
ಮಾರ್ಚ್ ಸಮಯದಲ್ಲೇ ಐಪಿಎಲ್‌ ಹಣಾಹಣಿ ಮೊದಲ್ಗೊಂಡರೆ ಭಾರೀ ಹೊಡೆತ ಎದುರಾಗಲಿದೆ ಎಂಬುದು ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ. ಕಾರಣ, ವಿವಿಧ ಫ್ರಾಂಚೈಸಿಗಳಿಗೆ ಆಯ್ಕೆಯಾಗಿರುವ ಬಹುತೇಕ ವಿದೇಶಿ ಕ್ರಿಕೆಟಿಗರು ಈ ಸಮಯದಲ್ಲಿ ಬೇರೆ ಬೇರೆ ಅಂತಾರಾಷ್ಟ್ರೀಯ ಸರಣಿಗಳಲ್ಲಿ ವ್ಯಸ್ತರಾಗಿರುತ್ತಾರೆ. ಇದನ್ನು ಮುಗಿಸಿಯೇ ಅವರು ಐಪಿಎಲ್‌ಗೆ ಹೊರಡಬೇಕಾಗುತ್ತದೆ. ಆದ್ದರಿಂದ ಇದೀಗ ಫ್ರಾಂಚೈಸಿಗಳಿಗೆ ಇದೇ ದೊಡ್ಡ ತಲೆಬಿಸಿಯಾಗಿರುವುದಕ್ಕೆ ಕಾರಣವಾಗಿದೆ. 
 
ಮಾರ್ಚ್‌ ಅಂತ್ಯದಲ್ಲಿ ಆಸ್ಟ್ರೇಲಿಯ- ನ್ಯೂಜಿಲ್ಯಾಂಡ್‌ ಟಿ20 ಸರಣಿ ಜಾರಿಯಲ್ಲಿರುತ್ತದೆ. ಇಂಗ್ಲೆಂಡ್‌-ಶ್ರೀಲಂಕಾ ನಡುವೆ ಟೆಸ್ಟ್‌ ಸರಣಿ ನಡೆಯುತ್ತಿರುತ್ತದೆ. ಹೀಗಾಗಿ ಕೆಲವು ತಾರಾ ಆಟಗಾರರು ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎಪ್ರಿಲ್‌ ಒಂದರ ವೇಳೆ ಐಪಿಎಲ್‌ ಆರಂಭವಾದರೆ ಅನುಕೂಲ ಎಂಬುದು ಅನೇಕ ಫ್ರಾಂಚೈಸಿ ಮಾಲಕರ ಅಭಿಪ್ರಾಯವಾಗಿದ್ದು, ಅದೇ ರೀತಿಯಲ್ಲಿ ನಡೆಯಲಿ ಎಂದು ತಿಳಿಸಿದ್ದಾರೆ. 
 
“ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಮುಗಿಯುವುದು ಮಾ. 29ಕ್ಕೆ. ಹಾಗೆಯೇ ಇಂಗ್ಲೆಂಡ್‌-ಶ್ರೀಲಂಕಾ ಸರಣಿ ಅಂತ್ಯವಾಗುವುದು ಮಾ. 31ಕ್ಕೆ. ಹೀಗಾಗಿ ಎಪ್ರಿಲ್‌ ಒಂದರಿಂದ ಐಪಿಎಲ್‌ ಆರಂಭವಾದರೆ ಅನುಕೂಲ. ಐಪಿಎಲ್‌ ಆಡಳಿತ ಮಂಡಳಿ ಇದನ್ನು ಪರಿಗಣಿಸುವ ವಿಶ್ವಾಸವಿದೆ’ ಎಂದು ಫ್ರಾಂಚೈಸಿಯೊಂದರ ಅಧಿಕಾರಿ ತಿಳಿಸಿದ್ದಾರೆ. 
 
ಅಮೋಘ ಫಾರ್ಮ್ನಲ್ಲಿರುವ ವೆಸ್ಟ್‌ ಇಂಡೀಸ್‌ ಆರಂಭಕಾರ ಶೈ ಹೋಪ್‌, ಎವಿನ್‌ ಲೆವಿಸ್‌, ಸ್ಫೋಟಕ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ನಮ್ಮದೇ ದೇಶದ ಯೂಸುಫ್ ಪಠಾಣ್‌ ಮೊದಲಾದವರನ್ನೆಲ್ಲ ಯಾರೂ ಖರೀದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.ಇಂಥ 11 ಮಂದಿ ಆಟಗಾರರ “ಅನ್‌ಸೋಲ್ಡ್‌ ಇಲೆವೆನ್‌’ ಒಂದು ಪ್ರಕಟಗೊಂಡಿದೆ. 
 
ಅನ್‌ಸೋಲ್ಡ್‌ ಇಲೆವೆನ್‌ ತಂಡ: ಮಾರ್ಟಿನ್‌ ಗಪ್ಟಿಲ್‌, ಎವಿನ್‌ ಲೆವಿಸ್‌, ಅಲೆಕ್ಸ್‌ ಹೇಲ್ಸ್‌, ಕಾಲಿನ್‌ ಇನ್‌ಗಾಮ್‌, ಶೈ ಹೋಪ್‌, ಬೆನ್‌ ಕಟಿಂಗ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಆ್ಯಡಂ ಝಂಪ, ಟಿಮ್‌ ಸೌಥಿ, ನೂರ್‌ ಅಹ್ಮದ್‌, ಅಲ್ಜಾರಿ ಜೋಸೆಫ್.

మరింత సమాచారం తెలుసుకోండి: